ಸೋಮವಾರಪೇಟೆ,ಏ.೧೨: ಅಕಾಲಿಕ ಮಳೆ, ಹವಾಮಾನ ವೈಪರೀತ್ಯ, ಬರದ ಕಾರಣದಿಂದಾಗಿ ಕಾಫಿ ಫಸಲಿಗೆ ಹಾನಿಯಾಗಿದ್ದು, ಕಾಫಿ ಬೆಳೆಗಾರರ ಬೆಳೆ ಸಾಲವನ್ನು ಸರ್ಕಾರ ಸಂಪೂರ್ಣ ಮನ್ನಾ ಮಾಡಬೇಕೆಂದು ತಾಲೂಕು ಕಾಫಿ ಬೆಳೆಗಾರರ ಸಂಘ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾv Àನಾಡಿದ ಸಂಘದ ಅಧ್ಯಕ್ಷ ಬಾಚಿನಾಡಂಡ ಮೋಹನ್ ಬೋಪಣ್ಣ, ಪ್ರಸಕ್ತ ವರ್ಷ ಶೇ.೪೦ ರಷ್ಟು ಕಾಫಿ ಫಸಲು ನಷ್ಟವಾಗಿದೆ. ಮುಂದಿನ ವರ್ಷದ ಫಸಲಿಗೆ ಹಾನಿಯಾಗಿದೆ. ಕಾಫಿ ತೋಟದ ನಿರ್ವಹಣೆ ಅಸಾಧ್ಯವೆನಿಸಿದೆ. ಕಾಫಿ ತೋಟಗಳು ರೋಗಪೀಡಿತವಾಗಿದೆ. ಬಹುತೇಕ ಬೆಳೆಗಾರರು ಸಾಲಗಾರರಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ತಾಲೂಕಿನಲ್ಲಿ ಅರೇಬಿಕಾ ಕಾಫಿಯನ್ನು ಹೆಚ್ಚು ಬೆಳೆಯಲಾಗುತ್ತಿದೆ. ಉತ್ಪಾದನಾ ವೆಚ್ಚ ಜಾಸ್ತಿಯಾಗಿದೆ. ಕೂಲಿ ಕಾರ್ಮಿಕರ ಕೊರತೆಯಿದೆ. ಕಾರ್ಮಿಕರೆ ಸಂಬಳವನ್ನು ನಿಗದಿ ಮಾಡುತ್ತಿದ್ದಾರೆ. ಬೆಳೆಗಾರರು ನಿಜವಾಗಿಯೂ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು. ಬೆಲೆ ತೃಪ್ತಿಕರವಾಗಿದೆ. ಆದರೆ ಫಸಲು ಇಲ್ಲದಿರುವುದರಿಂದ ಪ್ರಯೋಜನ ವಾಗಿಲ್ಲ. ಕೂಡಲೇ ಸರ್ಕಾರ ಸಹಕಾರ ಸಂಘ ಹಾಗೂ ರಾಷ್ಟಿçÃಕೃತ ಬ್ಯಾಂಕ್ಗಳ ಬೆಳೆ ಸಾಲವನ್ನು ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.
ಸಣ್ಣ ಕಾಫಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಬೆಳೆಗಾರರಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಈಗ ಸುಡುಬಿಸಿಲು ಇದೆ. ಕಾಫಿ ಗಿಡಗಳು ಒಣಗಿ ಸಾಯುತ್ತಿವೆ. ಏಪ್ರಿಲ್ನಲ್ಲಿ ನೀರು ಕೊಡಬೇಕು. ಹೊಳೆಗಳಲ್ಲಿ ಪಂಪ್ಸೆಟ್ ಮೂಲಕ ನೀರು ತೆಗೆಯುವುದಕ್ಕೆ ಜಿಲ್ಲಾಧಿಕಾರಿಗಳು ನಿಷೇಧ ಹೇರಿದ್ದಾರೆ. ಕಾಫಿ ಬೆಳೆಗಾರರನ್ನು ಸರ್ಕಾರ ರಕ್ಷಣೆ ಮಾಡದಿದ್ದರೆ, ಕಾಫಿ ಉದ್ದಿಮೆ ನಶಿಸಿ ಹೋಗಲಿದೆ. ಮುಂದಿನ ದಿನಗಳಲ್ಲಿ ಕಾಫಿಗೆ ಕೊಡಗಿನ ಕಿತ್ತಳೆಯ ದುಸ್ಥಿತಿ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಬೆಳೆಗಾರರ ಸಮಸ್ಯೆಯನ್ನು ಚರ್ಚಿಸಲು ತಾ.೧೫ರಂದು ಪತ್ರಿಕಾಭವನದಲ್ಲಿ ಬೆಳಿಗ್ಗೆ ೧೦ಗಂಟೆಗೆ ಬೆಳೆಗಾರರ ಕುಂದುಕೊರತೆ ಸಭೆ ಕರೆಯಲಾಗಿದೆ ಎಂದರು. ಮರಕಪಾತು ಸಂದರ್ಭದಲ್ಲಿ ಅನಾಹುತಗಳು ಸಂಭವಿಸುತ್ತಿವೆ. ಇದರಿಂದ ಕಾರ್ಮಿಕರ ಕುಟುಂಬಕ್ಕೆ ಸಮಸ್ಯೆಯಾಗುತ್ತಿದೆ. ಕಾರ್ಮಿಕರಿಗೆ ವಾರ್ಷಿಕ ೫೦೦ ರೂ.ಗಳ ಪ್ರಿಮಿಯಮ್ ಕಟ್ಟಿದರೆ, ೧೦ಲಕ್ಷ ರೂ. ವಿಮಾ ಮೊತ್ತ ಸಿಗುತ್ತಿದೆ. ಈ ಯೋಜನೆಯ ಮಾಹಿತಿಗೆ ಸ್ಥಳೀಯ ಅಂಚೆ ಇಲಾಖೆಯನ್ನು ಸಂಪರ್ಕಿಸಬೇಕು ಎಂದು ಹೇಳಿದರು. ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಎಸ್.ಎನ್.ಸೋಮಶೇಖರ್, ಬಿ.ಜಿ.ಪೂವಮ್ಮ, ವರಲಕ್ಷಿö್ಮÃ ಸಿದ್ದೇಶ್ವರ ಇದ್ದರು.