ವೀರಾಜಪೇಟೆ, ಏ. ೧೧: ಪಟ್ಟಣದ ಸಂತ ಅನ್ನಮ್ಮ ಧರ್ಮ ಕೇಂದ್ರದಿAದ ನಿರ್ವಹಿಸಲ್ಪಡುವ ಕೃಷಿ ಭೂಮಿಯನ್ನು ಯಾರ ಗಮನಕ್ಕೂ ಬಾರದೆ ಭೋಗ್ಯಕ್ಕೆ ನೀಡಲಾಗಿದೆ ಎಂದು ಆರೋಪಿಸಿರುವ ಚರ್ಚ್ನ ಭಕ್ತರು ಸೂಕ್ತ ಕ್ರಮವಹಿಸಿ ಜಾಗವನ್ನು ಹಿಂಪಡೆಯದಿದ್ದಲ್ಲಿ ಪ್ರತಿಭಟನೆ ಹಾಗೂ ಕಾನೂನು ಹೋರಾಟದ ಎಚ್ಚರಿಕೆ ಯನ್ನು ನೀಡಿದ್ದಾರೆ.

ಸಂತ ಅನ್ನಮ್ಮ ದ್ವಿಶತಮಾನೋತ್ಸವ ಭವನದಲ್ಲಿ ನಡೆದ ಚರ್ಚ್ನ ಭಕ್ತಜನಕೂಟ ಮತ್ತು ಚರ್ಚ್ಗೆ ಸಂಬAಧಿಸಿದ ಸಂಘ ಸಂಸ್ಥೆಗಳ ಪ್ರಮುಖರ ಸಭೆಯಲ್ಲಿ ಈ ಬಗ್ಗೆ ಚರ್ಚೆಗಳು ನಡೆದು ನಿರ್ಣಯ ಕೈಗೊಳ್ಳಲಾಯಿತು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕ ಪಿ.ಎಸ್. ಮಚ್ಚಾಡೋ ಮಾತನಾಡಿ, ವೀರಾಜಪೇಟೆ ಸಂತ ಅನ್ನಮ್ಮ ದೇವಾಲಯಕ್ಕೆ ಸುಮಾರು ೨೫೦ ವರ್ಷಗಳ ಇತಿಹಾಸವಿದೆ. ಪೂರ್ವಜರು ದೇವಾಲಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮ ಮತ್ತು ದೇವಾಲಯದ ನಿರ್ವಹಣೆಗಾಗಿ ಸುಮಾರು ೪೫ ಎಕರೆ ಕಾಫಿ ತೋಟ ಮತ್ತು ೩೫ ಎಕರೆ ಗದ್ದೆಯನ್ನು ದಾನದ ರೂಪದಲ್ಲಿ ನೀಡಿದ್ದಾರೆ. ಹಲವು ವರ್ಷಗಳಿಂದ ಈ ಆದಾಯವು ಮೈಸೂರು ಪ್ರಧಾನ ಧರ್ಮಕೇಂದ್ರದ ಅಡÀಳಿತಾಧಿಕಾರಿಗೆ ಸಂದಾಯ ವಾಗುತ್ತದೆ. ಆದರೆ, ಇದೀಗ ಇಲ್ಲಿನ ಧರ್ಮಗುರುಗಳು, ಪರಿಪಾಲನಾ ಸಮಿತಿ, ಹಣಕಾಸು ಸಮಿತಿ, ಹಾಗೂ ಭಕ್ತರಿಗೆ ಅರಿವಿಗೆ ಬಾರದಂತೆ ಪರರಿಗೆ ಜಾಗವನ್ನು ಭೋಗ್ಯ ನೀಡಿ ಮೈಸೂರು ಧರ್ಮಕೇಂದ್ರದ ಆಡಳಿತಾಧಿಕಾರಿ ಸರ್ವಾಧಿಕಾರಿ ಧೋರಣೆಯಂತೆ ಆದೇಶ ಹೊರಡಿಸಿದ್ದಾರೆ. ಇದು ಭಕ್ತರ ಭಾವನೆಗಳಿಗೆ ಧಕ್ಕೆ ತರುವಂತ ವಿಚಾರವಾಗಿದೆ. ಆದೇಶವನ್ನು ಹಿಂಪಡೆಯಬೇಕು ಅಲ್ಲದೆ ಯಥಾಸ್ಥಿತಿ ಯನ್ನು ಕಾಪಾಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಮುದಾಯದ ಪ್ರಮುಖರಾದ ಜೋಕಿಂ ರೋಡ್ರಿಗಸ್ಸ್ ಮಾತನಾಡಿ, ವೀರಾಜಪೇಟೆ ಧರ್ಮಕೇಂದ್ರದ ಅಡಿಯಲ್ಲಿ ಸಿದ್ದಾಪುರ, ಅಮ್ಮತ್ತಿ, ಪಾಲಿಬೆಟ್ಟ, ಕೆದಮುಳ್ಳೂರು, ಆರ್ಜಿ ಪೊನ್ನಂಪೇಟೆ ಮತ್ತು ಕುಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಧರ್ಮಕೇಂದ್ರಗಳು ಒಳಪಡುತ್ತವೆ. ಜಿಲ್ಲೆಯಲ್ಲಿ ವಿವಿಧೆಡೆಗಳಲ್ಲಿ ಸ್ಥಾಪನೆಯಾಗಿರುವ ಧರ್ಮಕೇಂದ್ರ ಗಳಿಗೆ ಚರ ಮತ್ತು ಸ್ಥಿರ ಆಸ್ತಿಗಳಿವೆ. ಧರ್ಮ ಕೇಂದ್ರ ಹೊಂದಿರುವ ಮೂಲ ಆಸ್ತಿಯ ದಾಖಲೆ ಪತ್ರಗಳು ವೀರಾಜಪೇಟೆ ಧರ್ಮಗುರುಗಳ ಹೆಸರಿನಲ್ಲಿದೆ. ಕಾಫಿ ತೋಟ ಗದ್ದೆಗಳಿಂದ ಬರುವ ಆದಾಯವು ನೇರವಾಗಿ ಮೈಸೂರು ಧರ್ಮಕೇಂದ್ರಕ್ಕೆ ಹೋಗುತ್ತಿದ್ದು. ಯಾವುದೇ ಅನುದಾನಗಳು ಇಲ್ಲಿಗೆ ಸಂದಾಯ ವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಏಕಾಏಕಿಯಾಗಿ ಇಲ್ಲಿನ ಆಸ್ತಿಯನ್ನು ಇತರರಿಗೆ ಭೋಗ್ಯಕ್ಕೆ ನೀಡಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜ್ಯೂಡಿ ವಾಜ್ ಮಾತನಾಡಿ, ಆಡಳಿತಾಧಿಕಾರಿ ನಡೆ ಸರಿಯಿಲ್ಲ. ಯಾರ ಗಮನಕ್ಕೆ ತಾರದೆ ಈ ರೀತಿ ನಡೆದುಕೊಂಡಿರುವುದು ನೋವು ಉಂಟು ಮಾಡಿದೆ. ಆದೇಶ ಹಿಂಪಡೆದು ಯಥಾಸ್ಥಿತಿ ಕಾಪಾಡಿ ಕೊಳ್ಳುವಂತೆ ಆಗ್ರಹಿಸಿದರು. ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು. ಸಭೆಯಲ್ಲಿ ವಿವಿಧ ಸಮಿತಿಗಳ ಪದಾಧಿಕಾರಿಗಳು, ಸುಮಾರು ೫೦ ಕ್ಕೂ ಅಧಿಕ ಭಕ್ತರು ಹಾಜರಿದ್ದರು.

-ಕಿಶೋರ್ ಕುಮಾರ್ ಶೆಟ್ಟಿ