ಗುಡ್ಡೆಹೊಸೂರು, ಏ. ೧೨: ಇಲ್ಲಿಗೆ ಸಮೀಪದ ಹೊಸಪಟ್ಟಣ ಗ್ರಾಮದ ಶ್ರೀ ಬಸವೇಶ್ವರ ಮತ್ತು ಶ್ರೀ ಕನ್ನಂಬಾಡಿಯಮ್ಮನವರ ವಾರ್ಷಿಕ ಮಹಾಪೂಜೆ ತಾ. ೧೫, ೧೬ ರಂದು ನಡೆಯಲಿದೆ.

ಶ್ರೀ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮಿಗಳ ಸಾನ್ನಿಧ್ಯದಲ್ಲಿ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ. ತಾ. ೧೬ ರಂದು ಅರ್ಚಕ ವೇದಬ್ರಹ್ಮ ಕೆ.ಎಸ್. ದಿನೇಶ್ ಶಾಸ್ತಿçಗಳು ಮತ್ತು ತಂಡದವರಿAದ ವಿವಿಧ ಪೂಜಾ ಕಾರ್ಯಗಳು ನಡೆಯಲಿವೆ. ಅಂದು ಬೆಳಿಗ್ಗೆ ೯ ಗಂಟೆಗೆ ಕಾವೇರಿ ನದಿಯಲ್ಲಿ ಗಂಗೆ ಪೂಜೆ ನಡೆಸಿ ನಂತರ ಶ್ರೀ ಬಸವೇಶ್ವರ ಮತ್ತು ಶ್ರೀ ಕನ್ನಂಬಾಡಿ ಅಮ್ಮನವರ ಪಲ್ಲಕ್ಕಿ ಮೆರವಣಿಗೆ ನಡೆಯಲಿದೆ. ಈ ದಿನ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಮಹಾಸ್ವಾಮಿಗಳು ಭಾಗವಹಿಸಲಿದ್ದಾರೆ. ಮಧ್ಯಾಹ್ನ ೧೨.೧೦ ಗಂಟೆಯಿAದ ಕೊಂಡ ಹಾಯುವ ಕಾರ್ಯಕ್ರಮ ನಡೆಯಲಿದೆ. ಈ ಪೂಜಾ ಕಾರ್ಯದಲ್ಲಿ ಸಮಿತಿಯ ಅಧ್ಯಕ್ಷೆ ಹೆಚ್.ಎಸ್. ಪೂರ್ಣಿಮ ಶಿವಕುಮಾರ್ ಮತ್ತು ಸಮಿತಿಯ ಎಲ್ಲಾ ಸದಸ್ಯರು ಭಾಗವಹಿಸಲಿದ್ದಾರೆ.