ನಾಪೋಕ್ಲು/ ಚೆಯ್ಯಂಡಾಣೆ ಏ. ೧೧: ಇಲ್ಲಿಗೆ ಸಮೀಪದ ಕೊಳಕೇರಿ ಗ್ರಾಮದ ಪರಂಬು ಕುವಲೆಕಾಡು ಎಂಬಲ್ಲಿ ಸ್ನಾನಕ್ಕೆ ತೆರಳಿದ ಕಾರ್ಮಿಕ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.

ಕಕ್ಕಬ್ಬೆ ಕುಂಜಿಲ ವಾಟೆಕಾಡು ಗ್ರಾಮದ ಕೆ.ಆರ್. ದೇವಯ್ಯ (೩೮) ಮೃತ ದುರ್ದೈವಿ. ಕಾಫಿ ಬೆಳೆಗಾರ ಸಂತೋಷ್ ಅವರ ತೋಟದಲ್ಲಿ ಕೆಲಸ ನಿರ್ವಹಿಸಿ ಮಧ್ಯಾಹ್ನ ಕೊಳಕೇರಿ ಗ್ರಾಮದ ಕುವಲೆಕಾಡು ಕುಪ್ಪೋಟು ಹೊಳೆಗೆ ಸ್ನಾನಕ್ಕೆ ಸಹೋದರ ಸುಬ್ರಮಣಿ ಜೊತೆಗೆ ತೆರಳಿದಾಗ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ದೇವಯ್ಯ ಮೃತಪಟ್ಟಿದ್ದಾರೆ. ಕುಂಜಿಲ ವಾಟೆಕಾಡು ಗ್ರಾಮದಿಂದ ತಮ್ಮನೊಂದಿಗೆ ತೋಟದ ಕೆಲಸಕ್ಕೆ ತೆರಳಿದ್ದರು. ಬಿಸಿಲಿನ ತಾಪದಿಂದ ನದಿಯಲ್ಲಿ ಸ್ನಾನಕ್ಕಿಳಿದಾಗ ದುರ್ಘಟನೆ ಸಂಭವಿಸಿದೆ. ಮೃತದೇಹವನ್ನು ಸ್ಥಳೀಯರು ಮೇಲೆತ್ತಿದರು. ಸ್ಥಳಕ್ಕೆ ನಾಪೋಕ್ಲು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. - ದುಗ್ಗಳ/ ಅಶ್ರಫ್