ಶನಿವಾರಸಂತೆ. ಏ. ೧೧: ಯದುವೀರ್ ಒಡೆಯರ್ ಅವರು ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರAಜನ್ ಅವರ ಜತೆ ಸೋಮವಾರ ಸಂಜೆ ಶನಿವಾರಸಂತೆ ಸಮೀಪದ ತಪೋವನ ಕ್ಷೇತ್ರದ ಮನೆಹಳ್ಳಿ ಮಠಕ್ಕೆ ಭೇಟಿ ನೀಡಿ ವೀರಭದ್ರ ಸ್ವಾಮಿ ಮತ್ತು ಜೇನುಕಲ್ ಗುರು ಸಿದ್ಧೇಶ್ವರ ಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಮಳೆಗಾಗಿ ಪ್ರಾರ್ಥಿಸಿದರು. ನಂತರ ಅವರು ಮಾತನಾಡಿ, ಮಠ ಮಂದಿರಗಳಿAದ ಇಂದು ಸಂಸ್ಕೃತಿ-ಸAಸ್ಕಾರಗಳು ಉಳಿದಿವೆ. ಸಮಾಜ ಸುಭೀಕ್ಷ ವಾಗಿರಲು ಮಠಾಧಿಪತಿಗಳ ಆಶೀರ್ವಾದ ಪ್ರತಿಯೊಬ್ಬ ರಿಗೂ ಮುಖ್ಯವಾಗಿದ್ದು ಅವರ ಮಾರ್ಗದರ್ಶನ, ಸಲಹೆ-ಸಹಕಾರಗಳು ಅಗತ್ಯ ಎಂದರು. ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಮೈಸೂರು ರಾಜಮನೆತನದ ಯದುವೀರ್ ಒಡೆಯರ್ ಅವರು ವಿವಿಧೆಡೆಯಿಂದ ಆಗಮಿಸಿದ ಮಠಾಧೀಶರ ಆಶೀರ್ವಾದ ಪಡೆದು ಅವರ ಸಮ್ಮುಖದಲ್ಲಿ ದೇವರಿಗೆ ಪೂಜೆ ಸಲ್ಲಿಸಿ, ಮಳೆಗಾಗಿ ಪ್ರಾರ್ಥಿಸಲು ಬಂದಿದ್ದಾರೆ ಎಂದರು.

ವೀರಶೈವ ಸಮಾಜದ ಮುಖಂಡ ಎಸ್ ಮಹೇಶ್ ಅವರು ಮಾತನಾಡಿ, ರಾಜ್ಯದಲ್ಲಿ ಮಳೆಯಾಗದೆ ಬರಗಾಲದ ಛಾಯೆ ಆವರಿಸಿದೆ.ರಾಜ್ಯ ಸುಭೀಕ್ಷತೆಗಾಗಿ ಮನೆಹಳ್ಳಿ ಮಠದಲ್ಲಿ ವೀರಭದ್ರ ಸ್ವಾಮಿ ಮತ್ತು ಜೇನುಕಲ್ ಗುರು ಸಿದ್ಧೇಶ್ವರ ಸ್ವಾಮಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಮಹಾರಾಜ ಯದುವೀರ್ ಒಡೆಯರ್ ಅವರು ಮಠಾಧಿಪತಿಗಳ ಒಕ್ಕೂಟ, ವೀರಶೈವ ಸಮಾಜ, ತಪೋವನ ಕ್ಷೇತ್ರದ ಮುಖಂಡರ ಆಶೀರ್ವಾದ ಪಡೆದಿದ್ದಾರೆ. ಎಂದರು. ತಪೋವನ ಕ್ಷೇತ್ರ ಮನೆಹಳ್ಳಿ ಮಾಠಾಧೀಶ ಮಹಾಂತ ಶಿವಲಿಂಗ ಸ್ವಾಮೀಜಿ, ಮಾದ್ರೆ ಮುದ್ದಿನಕಟ್ಟೆ ಮಠಾಧೀಶ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ಕಲ್ಲುಮಠದ ಮಹಾಂತ ಸ್ವಾಮೀಜಿ, ಶಿಡಿಗಳಲೆ ಮಠದ ಶಿವಲಿಂಗ ಸ್ವಾಮೀಜಿ, ಇತರೆಡೆಯಿಂದ ಆಗಮಿಸಿದ ಮಠಾಧೀಶರು, ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ಕೆ.ಬಿ.ಹಾಲಪ್ಪ, ಸೇವಾ ಸಮಿತಿ ಕಾರ್ಯದರ್ಶಿ ಮಂಜುನಾಥ್, ಪ್ರಮುಖರಾದ ಭುವನೇಶ್ವರಿ, ಬಸಪ್ಪ, ಇತರರು ಹಾಜರಿದ್ದರು.ವೀರಶೈವ ಸಮಾಜದ ಎಸ್.ಮಹೇಶ್ ಕಾರ್ಯಕ್ರಮ ನಿರ್ವಹಿಸಿದರು.