ಮಡಿಕೇರಿ, ಏ. ೧೨: ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ದ್ವೇಷದ ರಾಜಕಾರಣ ಮಿತಿಮೀರಿ ವಾತಾವರಣ ಹದಗೆಡುತ್ತಿದೆ. ಪ್ರಬುದ್ಧ ರಾಜಕಾರಣಕ್ಕೆ ಕೊಡಲಿ ಪೆಟ್ಟು ನೀಡುತ್ತಿರುವ ಕಾಂಗ್ರೆಸ್ ನಾಯಕರು ದುರುದ್ದೇಶಪೂರ್ವಕವಾಗಿ ಬಿಜೆಪಿ ಕಾರ್ಯಕರ್ತರನ್ನು ಗುರಿ ಮಾಡಿ ದೂರು ನೀಡುತ್ತಿದ್ದಾರೆ. ಅಲ್ಲದೆ, ಸತ್ಯಾಂಶ ಅರಿಯದೆ ಪೊಲೀಸರು ಪ್ರಕರಣ ದಾಖಲಿಸುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿರುವ ಮಾಜಿ ಶಾಸಕರುಗಳಾದ ಕೆ.ಜಿ. ಬೋಪಯ್ಯ ಹಾಗೂ ಮಂಡೇಪAಡ ಅಪ್ಪಚ್ಚು ರಂಜನ್, ಇದೇ ರೀತಿ ಮುಂದುವರೆದರೆ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಶಾಸಕದ್ವಯರು, ಕಾಂಗ್ರೆಸ್ ಪಕ್ಷ, ಶಾಸಕರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವೀರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಜಿಲ್ಲೆಯಲ್ಲಿ ಈ ಮೊದಲು ಉತ್ತಮ ರಾಜಕೀಯ ವ್ಯವಸ್ಥೆ ಇತ್ತು. ನಾವು ಶಾಸಕರಾಗಿದ್ದ ಸಂದರ್ಭ ಪ್ರಬುದ್ಧತೆಯಲ್ಲಿ ಎಲ್ಲಾ ಪಕ್ಷದವರು ನಡೆದುಕೊಂಡು ಆರೋಗ್ಯಕರ ಚರ್ಚೆಗಳು ನಡೆಯುತ್ತಿದ್ದವು. ಆದರೆ, ಇದೀಗ ವೈಯಕ್ತಿಕ ಟೀಕೆ ನಿರಂತರವಾಗಿ ನಡೆಯುತ್ತಿದೆ. ಸಂದೇಶವನ್ನು ‘ಫಾರ್ವಡ್’ ಮಾಡಿದ ಕಾರಣವನ್ನು ಮುಂದಿಟ್ಟು ನೀತಿ ಸಂಹಿತೆ ಉಲ್ಲಂಘನೆ ಎಂದು ಸ್ಥಳೀಯ ಕಾಂಗ್ರೆಸ್ ನಾಯಕರು ಬಿಜೆಪಿ ಕಾರ್ಯಕರ್ತರ ವಿರುದ್ಧ ದೂರು ನೀಡಿ ಪ್ರಕರಣ ದಾಖಲಿಸುವ ಕೆಲಸ ಮಾಡುತ್ತಿದ್ದಾರೆ. ಹತಾಶ ಮನೋಭಾವದಿಂದ ಸೋಲು ನಿಶ್ಚಿತ ಎಂದು ಮನಗಂಡು ಈ ರೀತಿ ಕಾಂಗ್ರೆಸಿಗರು ನಡೆದುಕೊಳ್ಳುತ್ತಿದ್ದಾರೆ. ಸಂದೇಶವನ್ನು ‘ಫಾರ್ವಡ್’ ಮಾಡಿದ್ದಾರೆಂದು ದೂರು ದಾಖಲಾದ ಸಂದರ್ಭ ಸತ್ಯಾಂಶ ತಿಳಿಯದೆ ಏಕಾಏಕಿ ಪ್ರಕರಣ ದಾಖಲಿಸುತ್ತಿರುವುದು ಖಂಡನೀಯ ಎಂದರು.

(ಮೊದಲ ಪುಟದಿಂದ) ಚುನಾವಣೆ ಮುಗಿದ ನಂತರ ಎಲ್ಲರೂ ಒಂದೇ ಎನ್ನುವಂತೆ ನಡೆದುಕೊಂಡು ಹೋಗುತ್ತಿದ್ದ ಜಿಲ್ಲೆಯಲ್ಲಿ ಇದೀಗ ಸನ್ನಿವೇಶ ಬದಲಾಗಿದೆ. ಅಶಾಂತಿ ಮೂಡಿಸುವ ಕೆಲಸವಾಗಿದೆ. ಕುಶಾಲನಗರದ ರಾಷ್ಟಿçÃಯ ಹೆದ್ದಾರಿ ಮಧ್ಯೆ ರಂಜಾನ್ ಸಂದರ್ಭ ಪ್ರಾರ್ಥನೆ ಮಾಡಲಾಗಿದೆ. ಈ ಬಗ್ಗೆ ಪೊಲೀಸರಿಗೆ ತಿಳಿಸಿದ ನಂತರ ಅವರನ್ನು ಅಲ್ಲಿಂದ ಕಳುಹಿಸಲಾಗಿದೆ. ಇದಕ್ಕೆ ಚುನಾವಣೆ ಆಯೋಗದಿಂದ ಅನುಮತಿಯನ್ನು ಪಡೆದಿಲ್ಲ. ಅವರ ವಿರುದ್ಧ ಯಾಕೆ ಪ್ರಕರಣ ದಾಖಲು ಮಾಡುವುದಿಲ್ಲ ಎಂದು ಪ್ರಶ್ನಿಸಿದ ಅವರು, ಇಂತಹ ವಿಚಾರಗಳಿಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ. ಜಿಲ್ಲಾಡಳಿತ ಒಂದು ಪಕ್ಷದ ಪರ ನಿಂತು ಈ ರೀತಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ ಎಂದು ಆರೋಪಿಸಿದರು. ನಾವು ಮೋದಿ ಆಡಳಿತದ ಮೇಲೆ ಮತ ಕೇಳುತ್ತೇವೆ. ನೀವು ನಿಮ್ಮ ಸಾಧನೆ ಮೇಲೆ ಹೋಗಿ. ಹಿಂದೆ ಚುನಾವಣೆ ಶಾಂತಿಯುತವಾಗಿ ನಡೆದಿದೆ. ಸುಳ್ಳು ಪ್ರಕರಣ ಹಾಕುವ ಕೆಲಸ ಮಾಡಬೇಡಿ ಎಂದು ಕುಟುಕಿದರು.

ಕಾಂಗ್ರೆಸ್ ಕೊಡುಗೆ ಇಲ್ಲ

ಈ ಹಿಂದಿನ ಬಿಜೆಪಿ ಸರಕಾರ ನೀಡಿದ ಯೋಜನೆಗಳಿಗೆ ಕಾಂಗ್ರೆಸ್ ತನ್ನ ‘ಲೇಬಲ್’ ಹಾಕಿ ಪ್ರಚಾರ ಮಾಡುತ್ತಿದೆ. ಶಾಸಕರ ಕೊಡುಗೆ ಜಿಲ್ಲೆಗೆ ಏನೂ ಇಲ್ಲ ಎಂದು ಬೋಪಯ್ಯ ಹಾಗೂ ರಂಜನ್ ವಾಗ್ದಾಳಿ ನಡೆಸಿದರು.

ಅಮೃತ್ ೨.೦ ಕೇಂದ್ರದ ಯೋಜನೆಯಡಿ ಬೇತ್ರಿ ಮೂಲಕ ವೀರಾಜಪೇಟೆಗೆ ನೀರು ಕಲ್ಪಿಸುವ ರೂ. ೫೦ ಕೋಟಿ ಕ್ರಿಯಾಯೋಜನೆಗೆ ಕೇಂದ್ರ ಅನುಮೋದನೆ ನೀಡಿದೆ, ಹಾರಂಗಿ ಮೂಲಕ ಸೋಮವಾರಪೇಟೆಗೆ ನೀರು ಒದಗಿಸಲು ರೂ. ೧೫ ಕೋಟಿ, ಕುಶಾಲನಗರಕ್ಕೆ ನೀರು ಒದಗಿಸಲು ರೂ. ೪೦ ಕೋಟಿ ಮೀಸಲಿಡಲಾಗಿದೆ. ಇವೆಲ್ಲವು ೨೦೨೨-೨೩ರ ಅವಧಿಯಲ್ಲಿ ಅನುಮೋದನೆ ಪಡೆದಿವೆ. ಇವೆಲ್ಲ ಯೋಜನೆಗಳು ಬಿಜೆಪಿಯ ಕೊಡುಗೆಯಾಗಿದೆ ಎಂದು ಕೆ.ಜಿ. ಬೋಪಯ್ಯ ಹೇಳಿದರು.

೨೦೨೩ರಲ್ಲಿ ಮಳೆಹಾನಿ ಪರಿಹಾರಕ್ಕೆ ಜಿಲ್ಲೆಗೆ ರೂ. ೧೪ ಕೋಟಿ ಅನುದಾನವನ್ನು ಈ ಹಿಂದಿನ ಬಿಜೆಪಿ ಸರಕಾರ ನೀಡಿತ್ತು. ನೀತಿ ಸಂಹಿತೆ ಬಂದ ಹಿನ್ನೆಲೆ ಕೆಲಸ ಮಾಡಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮೊದಲು ಬಿಜೆಪಿ ಅನುಷ್ಠಾನ ಮಾಡಿದ್ದ ಕಾಮಗಾರಿ ತಡೆ ನೀಡಿ ಮಂಜೂರಾದ ಕಾಮಗಾರಿಗಳನ್ನು ಬದಲಾವಣೆ ಮಾಡಿ ಆದೇಶಿಸಿತ್ತು. ಇದು ನಿಯಮಕ್ಕೆ ವಿರೋಧವಾಗಿದೆ. ಈ ಹಿಂದಿನ ಆದೇಶದ ಮೊತ್ತ ಅದೇ ಇದೆ. ಸ್ಥಳಗಳಲ್ಲಿ ಮಾತ್ರ ಬದಲಾವಣೆ ಮಾಡಲಾಗಿದ್ದು, ಈ ಹಿಂದಿನ ಬಿಜೆಪಿ ಸರಕಾರದ ಕೆಲಸಗಳನ್ನೇ ಮುಂದುವರೆಸಲಾಗಿದೆ ಎಂದು ಹೇಳಿದರು.

ಅಧಿಕಾರ ದುರ್ಬಳಕೆ - ರಂಜನ್ ಕಿಡಿ

ಮಡಿಕೇರಿ ಕ್ಷೇತ್ರದ ಮಾಜಿ ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್ ಮಾತನಾಡಿ, ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಪ್ರಕರಣ ದಾಖಲಿಸಿಕೊಂಡು ಧಮನಕಾರಿ ನೀತಿಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ. ಬೆದರಿಕೆ ತಂತ್ರಗಾರಿಕೆಗೆ ನಾವು ಜಗ್ಗುವುದಿಲ್ಲ. ತಾರತಮ್ಯ ತೋರದೆ ಅಧಿಕಾರಿಗಳು ಕೆಲಸ ಮಾಡಬೇಕು. ಈ ಮುನ್ನ ಸೋಮವಾರಪೇಟೆ ತಾಲೂಕು ಆಸ್ಪತ್ರೆಯಲ್ಲಿ ೧೨ ವೈದ್ಯರಿದ್ದರು ಇದೀಗ ಇಬ್ಬರಿದ್ದಾರೆ. ಜಿಲ್ಲೆಯ ಹಲವು ಕಡೆ ಇದೇ ಪರಿಸ್ಥಿತಿ ತಲೆದೋರಿದೆ. ಪಿಡಿಓಗಳ ಕೊರತೆಯೂ ಇದೆ. ಇದಕ್ಕೆ ಕಾರಣವೇನು? ಎಂದು ಪ್ರಶ್ನಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ, ತಾ. ೧೪ ರಂದು ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಬರುತ್ತಿದ್ದಾರೆ. ಜಿಲ್ಲೆಯಿಂದ ೧೦ ಸಾವಿರ ಜನ ಹೋಗಲಿದ್ದೇವೆ. ಕಾರ್ಯಕರ್ತರಲ್ಲದೆ, ಸಾಮಾನ್ಯ ಮತದಾರರು ಬರುತ್ತಿದ್ದಾರೆ. ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ವಿಧಾನ ಪರಿಷತ್ತು ಮಾಜಿ ಸದಸ್ಯ ಮಂಡೇಪAಡ ಸುನಿಲ್ ಸುಬ್ರಮಣಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ನೆಲ್ಲಚಂಡ ಕಿರಣ್, ಉಪಾಧ್ಯಕ್ಷ ಕಾಂಗೀರ ಸತೀಶ್, ವಕ್ತಾರುಗಳಾದ ಸುಬ್ರಮಣ್ಯ ಉಪಾಧ್ಯಾಯ, ತಳೂರು ಕಿಶೋರ್ ಕುಮಾರ್, ರೈತ ಮೋರ್ಚಾ ಜಿಲ್ಲಾಧ್ಯಕ್ಷ ನಾಗೇಶ್ ಕುಂದಲ್ಪಾಡಿ ಹಾಜರಿದ್ದರು. ‘ಗೋಣಿಕೊಪ್ಪ ತಂಗುದಾಣಕ್ಕೆ ಪ್ರಯತ್ನ ನಮ್ಮಿಂದ’

ಅಭಿವೃದ್ಧಿ ಕುರಿತು ದಾಖಲೆ ನೀಡಿದರೆ ರಾಜೀನಾಮೆ ನೀಡುತ್ತೇನೆ ಎಂದಿರುವ ಶಾಸಕ ಎ.ಎಸ್. ಪೊನ್ನಣ್ಣ ಅವರ ಮಾತಿಗೆ ಟಾಂಗ್ ನೀಡಿದ ಬೋಪಯ್ಯ, ಪೊನ್ನಣ್ಣ ಅವರು ಹೊಸಬರಿದ್ದಾರೆ. ರಾಜೀನಾಮೆ ನೀಡುವುದು ಬೇಡ. ಸರಕಾರದ ಆದೇಶ ತಿಳಿದು ಜನರ ಮುಂದೆ ಹೋಗಲಿ ಎಂದರು.

ವೀರಾಜಪೇಟೆ ಶಾಸಕ ಪೊನ್ನಣ್ಣ ಮುಖ್ಯಮಂತ್ರಿಗೆ ಆತ್ಮೀಯರಾಗಿದ್ದು, ನೇರವಾಗಿ ವಿಶೇಷ ಅನುದಾನ ತರಬಹುದಿತ್ತಲ್ಲವೇ ಎಂದು ಪ್ರಶ್ನಿಸಿದ ಬೋಪಯ್ಯ, ಗೋಣಿಕೊಪ್ಪ ಪ್ರಯಾಣಿಕರ ತಂಗುದಾಣ ನಿರ್ಮಾಣ ಸಂಬAಧ ಹಿಂದಿನ ಮುಖ್ಯಮಂತ್ರಿಗೆ ತಾನೇ ಪತ್ರ ಬರೆದು ಗಮನ ಸೆಳೆದು ರೂ. ೫ ಕೋಟಿಗೆ ಮನವಿ ಮಾಡಿದ್ದೆ, ರೂ. ೧ ಕೋಟಿಗೆ ಒಪ್ಪಿಗೆ ದೊರೆತು ಹಣವನ್ನು ಮೀಸಲಿಡಲಾಗಿತ್ತು. ಪ್ರಕ್ರಿಯೆ ಮುಗಿದು ಆಡಳಿತಾತ್ಮಕ ಅನುಮೋದನೆಯಾಗುವಷ್ಟರಲ್ಲಿ ನೀತಿ ಸಂಹಿತೆ ಜಾರಿಯಾಯಿತು ಎಂದು ವಿವರಿಸಿದರು.

ವನ್ಯಜೀವಿ ಹಾವಳಿ ತಡೆಗೆ ಏನೂ ಕ್ರಮಕೈಗೊಂಡಿಲ್ಲ ಎನ್ನುವ ಹಾಲಿ ಶಾಸಕರಿಗೆ ರೈಲ್ವೆ ಬ್ಯಾರಿಕೇಡ್, ಸೋಲಾರ್ ಕಂದಕ ಕಣ್ಣಿಗೆ ಕಾಣುವುದಿಲ್ಲವೇ. ರೂ. ೧೫೦ ಕೋಟಿ ಹಣವನ್ನು ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಬಜೆಟ್‌ನಲ್ಲಿ ಈ ಹಿಂದೆ ಬಿಜೆಪಿ ಸರಕಾರ ಘೋಷಿಸಿತ್ತು. ಈ ಸರಕಾರ ೧೨೦ ಕೋಟಿ ಬಜೆಟ್‌ನಲ್ಲಿ ಘೋಷಿಸಿದೆ. ಆದರೆ, ಇದುವರೆಗೂ ಅನುದಾನ ಬಳಕೆಯಾಗಿಲ್ಲ. ಇದಕ್ಕೆ ಮೊದಲು ಉತ್ತರ ನೀಡಿ. ಸುಮ್ಮನೆ ಶ್ವೇತ ಪತ್ರ ಹೊರಡಿಸುವುದಲ್ಲ, ನಿಖರ ಲೆಕ್ಕ ಕೊಡಿ. ಜಿಲ್ಲಾ ಆಸ್ಪತ್ರೆ, ಟ್ರಾಮ ಸೆಂಟರ್‌ಗೆ ಅನುದಾನ ತಂದಿರುವುದು ನಮ್ಮ ಅವಧಿಯಲ್ಲಿ. ಎಂ.ಆರ್.ಐ. ಯಂತ್ರ ಮಂಜೂರಾತಿಗೂ ನಮ್ಮ ಪ್ರಯತ್ನವಿದೆ ಎಂದು ಹೇಳಿದರು.‘ಶಾಸಕ ಯಾರೆಂಬ ಗೊಂದಲ’

ಮಡಿಕೇರಿ ಶಾಸಕರು ಮಂತರ್ ಗೌಡರೋ ಇಲ್ಲ ಅವರ ತಂದೆ, ಅರಕಲಗೂಡು ಶಾಸಕ ಎ. ಮಂಜು ಅವರೋ ಎಂದು ತಿಳಿಯುತ್ತಿಲ್ಲ ಎಂದು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವ್ಯಂಗ್ಯವಾಡಿದರು.

ಸ್ಥಳೀಯ ಶಾಸಕರು ಯಾರೆಂದು ಗೊತ್ತಾಗುತ್ತಿಲ್ಲ. ಅಧಿಕಾರಿಗಳಿಗೆ ಕೆಲಸ ಮಾಡಲು ಮುಕ್ತ ಅವಕಾಶವಿಲ್ಲದಂತಾಗಿದೆ. ಹಲವಷ್ಟು ಕೆಲಸಗಳಿಗೆ ಮಂಜು ಅವರು ಮಧ್ಯಸ್ಥಿಕೆ ವಹಿಸುತ್ತಿರುವುದು ಎಲ್ಲರಿಗೂ ತಿಳಿದಿದೆ ಎಂದು ಹೇಳಿದ ಅವರು, ಅಂತರರಾಷ್ಟಿçÃಯ ಮಟ್ಟದ ಟರ್ಫ್ ಮೈದಾನ ಮಾಡಿದ್ದು ನಾವು, ಮೆಡಿಕಲ್ ಕಾಲೇಜು, ಕೋರ್ಟ್, ಎಸ್.ಪಿ. ಕಚೇರಿ, ಸೈನಿಕ ಶಾಲೆ, ಇಂಜಿನಿಯರಿAಗ್ ಕಾಲೇಜು ಸೇರಿದಂತೆ ಹಲವು ಯೋಜನೆಯನ್ನು ತಂದಿದ್ದು ನಮ್ಮ ಅವಧಿಯಲ್ಲಿ. ನಾವು ಮೂಲಭೂತ ವಿಚಾರಕ್ಕೆ ಒತ್ತು ನೀಡಿ ಕೆಲಸ ಮಾಡಿದ್ದೇವೆ. ಜಿಲ್ಲಾಧಿಕಾರಿ ತಡೆಗೋಡೆ ವಿಚಾರದಲ್ಲಿ ಭ್ರಷ್ಟಾಚಾರವಾಗಿದೆ ಎಂದು ಗೂಬೆ ಕೂರಿಸುವ ಯತ್ನವಾಯಿತು. ಈ ಕಾಮಗಾರಿಗೆ ತಾನು ನೇರವಾಗಿ ವಿರೋಧಿಸಿ ಪತ್ರ ಬರೆದಿದ್ದೇನೆ. ಇದು ಅವೈಜ್ಞಾನಿಕ ಯೋಜನೆ ಎಂದು ಮೊದಲೇ ಹೇಳಿದ್ದೆ. ಈಗಲೂ ಕಾಲ ಮಿಂಚಿಲ್ಲ. ಸಂಪೂರ್ಣ ತನಿಖೆಯಾಗಲಿ ಎಂದು ಸವಾಲೆಸೆದರು.