ಕುಶಾಲನಗರ, ಏ. ೧೨: ಕುಶಾಲನಗರ ಪುರಸಭೆ ವ್ಯಾಪ್ತಿಯ ಮುಳ್ಳುಸೋಗೆ ಗ್ರಾಮದ ಸರ್ವೆ ನಂಬರ್ ೧೦೧ ರ ನೋಟಿಫೈಡ್ ಏರಿಯ ಸರ್ವೆ ನಂಬರ್ ೫೮ ರ ೬೯ ಸೆಂಟ್ಸ್ ಜಾಗದಲ್ಲಿ ಜಾಮಿಯಾ ಮಸೀದಿ ವತಿಯಿಂದ ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯದೆ ಈದ್ಗಾ ಮೈದಾನ ನಿರ್ಮಾಣ ಕಾಮಗಾರಿ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿ ತಕ್ಷಣ ಕಾಮಗಾರಿ ಸ್ಥಗಿತಗೊಳಿಸುವಂತೆ ಆ ಭಾಗದ ಬಡಾವಣೆಗಳ ನಿವಾಸಿಗಳು ಜಿಲ್ಲಾಧಿಕಾರಿ, ಕುಶಾಲನಗರ ತಾಲೂಕು ತಹಶೀಲ್ದಾರ್, ಸೋಮವಾರಪೇಟೆ ಉಪವಿಭಾಗದ ಡಿವೈಎಸ್ಪಿ ಹಾಗೂ ಪುರಸಭೆಗೆ ಮನವಿ ಸಲ್ಲಿಸಿದರು. ಸದರಿ ಜಾಗಕ್ಕೆ ಸಂಬAಧಿಸಿದ ಸ್ಥಳ ಸರಕಾರಿ ಜಾಗವಾಗಿದ್ದು ಈ ಹಿಂದೆ ೨೦೦೬ ರಲ್ಲಿ ಇದೇ ಜಾಗದಲ್ಲಿ ಜಾಮಿಯಾ ಮಸೀದಿಯ ಮೂಲಕ ಕೆಲಸ ಮಾಡಲು ಮುಂದಾದಾಗ ಜಾಗಕ್ಕೆ ಹೊಂದಿಕೊAಡAತಿರುವ ಆದಿ ಶಂಕರಾಚಾರ್ಯ, ಅವಧಾನಿ ಮತ್ತು ಕೆಂಪಮ್ಮ ಬಡಾವಣೆ ನಿವಾಸಿಗಳು ವಿರೋಧ ವ್ಯಕ್ತಪಡಿಸಿ ಪೊಲೀಸರಿಗೆ ದೂರು ಸಲ್ಲಿಸಿದ ಮೇರೆಗೆ ಈ ಜಾಗದಲ್ಲಿ ಯಾವುದೇ ಸಮುದಾಯದವರು ಯಾವುದೇ ಕಾಮಗಾರಿ ಮಾಡಬಾರದು. ಈ ಜಾಗದ ಬದಲಾಗಿ ಸರ್ಕಾರ ಬೇರೆಡೆ ಭೂಮಿ ನೀಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಹಿಂದಿನ ಅಧಿಕಾರಿಗಳು ಮತ್ತು ಪಂಚಾಯಿತಿ ಕೆಲವು ಸಿಬ್ಬಂದಿಗಳ ಮೂಲಕ ಅಕ್ರಮವಾಗಿ ದಾಖಲೆಗಳನ್ನು ಸಿದ್ಧಪಡಿಸಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ.
ಇದೀಗ ಮತ್ತೆ ಸರಕಾರದ ಜಾಗದಲ್ಲಿ ಅನುಮತಿ ಪಡೆಯದೆ ಆರಂಭಿಸಿರುವ ಕಾಮಗಾರಿಯಿಂದ ಸ್ಥಳೀಯ ನಿವಾಸಿಗಳಲ್ಲಿ ಗೊಂದಲ ಉಂಟಾಗಿ ಅಭದ್ರತೆ ಮೂಡಿಸುತ್ತಿದ್ದು, ಹಿಂದೂಗಳ ಮತ್ತು ಅನ್ಯ ಧರ್ಮೀಯರ ನಡುವೆ ಘರ್ಷಣೆಗೆ ಅವಕಾಶ ಆಗಬಾರದು. ಈ ಹಿನ್ನೆಲೆಯಲ್ಲಿ ನ್ಯಾಯ ಯುತವಾದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆದಿ ಶಂಕರಾಚಾರ್ಯರ ಬಡಾವಣೆಯ ಪುಷ್ಪಾಂಜಲಿ ಮಹಿಳಾ ಸಂಘದ ಮೂಲಕ ಮನವಿ ಸಲ್ಲಿಸಲಾಗಿದೆ.
ಈ ಸಂದರ್ಭ ಮಹಿಳಾ ಸಂಘದ ಪ್ರಮುಖರಾದ ವಿನು ಪೂವಯ್ಯ, ಗಾಯತ್ರಿ, ಪದ್ಮಾ, ಕಸ್ತೂರಿ, ವಿನುತಾ, ಹಿಂದೂಪರ ಸಂಘಟನೆಗಳ ಪ್ರಮುಖರಾದ ಅಮೃತ್ರಾಜ್, ಪ್ರಜ್ವಲ್, ಪ್ರವೀಣ್, ಎಂ.ಡಿ. ಕೃಷ್ಣಪ್ಪ, ನವನೀತ್, ಹರೀಶ್, ರಾಮನಾಥನ್, ಎಂ.ಎA. ಚರಣ್ ಸ್ಥಳೀಯ ಬಡಾವಣೆ ನಿವಾಸಿಗಳಾದ ಶರತ್, ಪ್ರಸನ್ನ, ಜಿತೇಂದ್ರ, ಮಣಿ, ಪ್ರಕಾಶ್, ಟಿ.ಎಲ್. ಪ್ರವೀಣ್ ಮತ್ತಿತರರು ಇದ್ದರು.