ಚೆಟ್ಟಳ್ಳಿ, ಏ. ೧೨: ಪೊನ್ನಂಪೇಟೆ ತಾಲೂಕು ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದಲ್ಲಿ ಕೊಡವ ಕೂಟಾಳಿಯಡ ಕೂಟದ ಕೊಡವ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ಅವರು ಕೊಡವ ಭಾಷೆಯಲ್ಲಿ ಬರೆದ "ಪೆತ್ತವಡ ಆರೈಕೆ" ಎನ್ನುವ ಕೊಡವ ಜನಾಂಗದ ಸಂಪ್ರದಾಯದAತೆ ಗರ್ಭಿಣಿ ಹಾಗೂ ಬಾಣಂತಿಯರನ್ನು ಆರೈಕೆ ಮಾಡುವ ವಿವರವುಳ್ಳ ನೂತನ ಕೊಡವ ಪುಸ್ತಕದ ಬಿಡುಗಡೆ ನಡೆಯಿತು. ಪುಸ್ತಕದಾನಿಗಳಾದ ಕೊಂಗಡ ಕಾಶಿಕಾರ್ಯಪ್ಪನವರು ಪುಸ್ತಕ ಬಿಡುಗಡೆಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಸಂಘಟನೆಯು ನಡೆಸಿದ್ದ ಕೊಡಗ್'ರ ಚುಪ್ಪಿ ಕೋಗಿಲೆಯ ಭಾಗ-೩ರ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಿಗಳಿಗೆ, ಟಾಪ್ ಟೆನ್ ಸ್ಥಾನ ಪಡೆದ ಮಕ್ಕಳಿಗೆ, ಸ್ಪರ್ಧೆಯಲ್ಲಿ ಸತತ ಮೂರು ವರ್ಷ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಸಂಘಟನೆಯು ಈ ಹಿಂದೆ ಟಿ. ಶೆಟ್ಟಿಗೇರಿಯ ರೂಟ್ಸ್ ಶಾಲೆಯಲ್ಲಿ ನಡೆಸಿದ ಪದ್ಧತಿ ಪಡಿಪು ಶಿಬಿರದಲ್ಲಿ ಪಾಲ್ಗೊಂಡು ಸಮ್ಮಂದ ಅಡ್ಕುವೊ ಪದ್ದತಿ ಕಲಿತ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ನೆನಪಿನ ಕಾಣಿಕೆ ಹಾಗೂ ಮದುವೆಯಲ್ಲಿ ಸಮ್ಮಂದ ಅಡ್ಕುವ ಪದ್ದತಿ ನಡೆಸಿದ ಶಿಬಿರಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಹಾಗೂ ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆಸಿದ್ಧ ಆಟ್ ಪಾಟ್ ಪಡಿಪು ಶಿಬಿರದಲ್ಲಿ ಕತ್ತಿಯಾಟ್ ಕಲಿತ ಶಿಬಿರಾರ್ಥಿಗಳಿಗೆ ಮಾನ್ಯತೆ ಕಾಗದ ನೆನಪಿನ ಕಾಣಿಕೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುಕ್ಕಾಟಿರ ಹಿತೈಷಿ ನಾಣಯ್ಯ ಅವರಿಂದ ಭರತನಾಟ್ಯಂ ಸ್ವಾಗತ ನೃತ್ಯ ಕೊಡವಾಮೆಲ್ ಪೆತ್ತವಡ ಆರೈಕೆ ಎನ್ನುವ ವಿಷಯದ ಬಗ್ಗೆ ಪ್ರಾಚೀನ ಇತಿಹಾಸ ಹಾಗೂ ಪುರಾತತ್ವ ಅಧ್ಯಯನಗಾರ್ತಿ ಮಾಳೇಟಿರ ಸೀತಮ್ಮ ಅವರಿಂದ ಮಾಹಿತಿ, ಚುಪ್ಪಿ ಕೋಗಿಲೆಯ ಸ್ಪರ್ಧೆಯ ಮಕ್ಕಳಿಂದ ಗಾಯನ, ತರಬೇತಿ ಪಡೆದ ಮಕ್ಕಳಿಂದ ಕತ್ತಿಯಾಟ್ ಪ್ರದರ್ಶನದಂತಹ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಜೊತೆಗೆ ಸಂಘಟನೆಯ ಕಲಿಕಾ ಶಿಬಿರದಲ್ಲಿ ತರಬೇತಿ ಪಡೆದ ಮಕ್ಕಳಿಂದ ಕೊಡವ ಜನಾಂಗದ ವಿಶೇಷ ಪದ್ದತಿಯಾದ , ಸಮ್ಮಂದ ಅಡ್ಕುವೊ ಪದ್ದತಿಯ ಪ್ರದರ್ಶನ ನಡೆಯಿತು. ಕೊಡವ ಕೂಟಾಳಿಯಡ ಕೂಟದ ಅಧ್ಯಕ್ಷ ಚಂಗುಲAಡ ಸೂರಜ್ ಮಾತನಾಡಿ ಕೊಡಗಿನಲ್ಲಿ ಕೊಡವಾಮೆಗೆ ಸಂಬAಧಿಸಿದAತೆ ಹಲವಾರು ಸಂಘಟನೆಗಳಿವೆ. ಆಚಾರ ವಿಚಾರ ಪದ್ಧತಿ ಪದ್ಧತಿ ಪರಂಪರೆ ಬೆಳೆಸುವಲ್ಲಿ ನಮ್ಮ ಸಂಘಟನೆಯೂ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು. ವೇದಿಕೆಯಲ್ಲಿ ದಾನಿಗಳಾದ ಕೊಂಗಾAಡ ಕಾಶಿ ಕಾರ್ಯಪ್ಪ, ಬಯವಂಡ ಮಹಾಬಲ ಹಾಗೂ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ, ಉಪಸ್ಥಿತರಿದ್ದರು.ಪ್ರಾರ್ಥನೆಗೀತೆ ಹಾಡಿದ ಕೂಟದ ನಿರ್ದೇಶಕ ಕರ್ತುರ ರನ್ನು ಪೆಮ್ಮಯ್ಯ ಅವರು ಹಾಗೂ ಪ್ರಾಸ್ತಾವಿಕ ಭಾಷಣ ಮಾಡಿದ ಸ್ಥಾಪಕ ಅಧ್ಯಕ್ಷೆ ಚಿಮ್ಮಚಿರ ಪವಿತ ರಜನ್ ನಿರೂಪಿಸಿದರು. ಕೂಟದ ಸಹಕಾರ್ಯದರ್ಶಿ ನೂರೆರ ಸರಿತ ಉತ್ತಯ್ಯ ಸ್ವಾಗತಿಸಿ, ನಿರ್ದೇಶಕಿಯರಾದ ಕೊಟ್ಟಂಗಡ ಕವಿತ ವಾಸು ಹಾಗೂ ಬೊಜ್ಜಂಗಡ ಭವ್ಯ ದಿಲನ್ ಗಣ್ಯರನ್ನು ಪರಿಚಯಿಸಿದರು.
ಕಾರ್ಯದರ್ಶಿ ಚೆಟ್ಟೋಳಿರ ಶರತ್ ಸೋಮಣ್ಣ ವಂದಿಸಿದರು. ಈ ಸಂದರ್ಭದಲ್ಲಿ ಕೂಟದ ನಿರ್ದೇಶಕ ಕಾಳಮಂಡ ರಾಬಿನ್ ಅಚ್ಚಮ್ಮ ಹಾಗೂ ಸದಸೈ ಮಾಚಿಮಾಡ ಡಿಂಪಲ್ ವಾಸು ಉಪಸ್ಥಿತರಿದ್ದರು.