ಮಡಿಕೇರಿ, ಏ. ೧೦: ಲೋಕಸಭಾ ಚುನಾವಣೆಯನ್ನು ಸಮರ್ಥವಾಗಿ ಎದುರಿಸಲು ಹಾಗೂ ಕಾಂಗ್ರೆಸ್ಗೆ ಪ್ರಬಲ ಪ್ರತಿಸ್ಪರ್ಧೆಯೊಡ್ಡುವ ಉದ್ದೇಶದಿಂದ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಮತ್ತು ಜೆಡಿಎಸ್ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡಿವೆ. ಕೊಡಗಿನಲ್ಲೂ ಉಭಯ ಪಕ್ಷಗಳ ಮುಖಂಡರು ಮೈತ್ರಿ ಅಭ್ಯರ್ಥಿಯ ಪರ ಜೋಡೆತ್ತುಗಳಾಗಿ ದುಡಿಯಲು ನಿರ್ಧರಿಸಿದ್ದಾರೆ ಎಂದರು. ಮಡಿಕೇರಿಯ ಪತ್ರಿಕಾ ಭವನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕೆಂಬ ಒತ್ತಾಸೆಗೆ ಜೆಡಿಎಸ್ ರಾಷ್ಟಿçÃಯ ಅಧ್ಯಕ್ಷ ಹೆಚ್.ಡಿ. ದೇವೇಗೌಡರೂ ಸಾಥ್ ನೀಡಿರುವುದರಿಂದ ಎರಡು ಪಕ್ಷಗಳು ಮೈತ್ರಿ ಹೋರಾಟಕ್ಕೆ ನಿರ್ಧರಿಸಿವೆ ಎಂದು ಮಾಜಿ ಶಾಸಕ ಎಂ.ಪಿ. ಸುನಿಲ್ ಸುಬ್ರಮಣಿ ಹೇಳಿದರು. ಉಭಯ ಪಕ್ಷಗಳೂ ಸಮನ್ವಯ ಸಭೆಗಳನ್ನು ನಡೆಸಿದ್ದು, ಇನ್ನು ಮುಂದೆ ಮೈತ್ರಿ ಅಭ್ಯರ್ಥಿಯ ಪರವಾಗಿ ಒಟ್ಟಾಗಿ ಮತಯಾಚನೆ ಮಾಡಲಿದ್ದೇವೆ ಎಂದು ಅವರು ಹೇಳಿದರು. ದೇವೇಗೌಡರು ಪ್ರಧಾನಿಯಾಗಿದ್ದಾಗ ಮತ್ತು ಹೆಚ್ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅತ್ಯುತ್ತಮ ಕೆಲಸಗಳಾಗಿವೆ. ಕುಮಾರಸ್ವಾಮಿ ಕೊಡಗಿಗೆ ಕೊಟ್ಟ ಕೊಡುಗೆಗಳನ್ನು ಜನರು ಮರೆತಿಲ್ಲ.
ಸಂತ್ರಸ್ತರಿಗೆ ತಲಾ ೯ ಲಕ್ಷ ವೆಚ್ಚದ ಮನೆ ನಿರ್ಮಿಸಿಕೊಟ್ಟ ಹೆಚ್ಡಿಕೆ, ಪದೇ ಪದೇ ಇಲ್ಲಿನ ಸಮಸ್ಯೆಗಳ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದರು. ಸಾ.ರಾ. ಮಹೇಶ್ ಕೂಡಾ ಸಂತ್ರಸ್ತರೊAದಿಗೆ ಬೆರೆತು ಅವರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ಎಂದು ಸುನಿಲ್ ಹೇಳಿದರು. ಜೆಡಿಎಸ್ ನಮ್ಮೊಂದಿಗೆ ಕೈಜೋಡಿಸಿರುವುದು ಆನೆ ಬಲ ಬಂದAತಾಗಿದೆ ಎಂದು ಅವರು ಹೇಳಿದರು. ಮೈತ್ರಿ ಬಗ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೈಸೂರು ರಾಜಮನೆತನ ನಾಡಿಗೆ ನೀಡಿದ ಕೊಡಗೆಯನ್ನು ಜನರು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಅಣೆಕಟ್ಟು ನಿರ್ಮಾಣ, ಮೀಸಲಾತಿ ಜಾರಿ, ವಿದ್ಯುತ್ ಕ್ರಾಂತಿ ಸೇರಿದಂತೆ ರಾಜವಂಶಸ್ಥರು ಮಾಡಿದ ಕೆಲಸಗಳಿಂದಾಗಿ, ಈ ಬಾರಿ ರಾಜವಂಶದ ಕುಡಿ ಯದುವೀರ್ ಬಹುಮತಗಳಿಂದ ಗೆಲ್ಲಲಿದ್ದಾರೆ ಎಂದ ಸುನಿಲ್, ಯದುವೀರ್ ಸುಮಾರು ೧.೫ ಲಕ್ಷ ಮತಗಳ ಅಂತರದಿAದ ಜಯ ಸಾಧಿಸಲಿದ್ದಾರೆ ಎಂದು ಭವಿಷ್ಯ ನುಡಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕುಮಾರ ಸ್ವಾಮಿ ಅವರ ಸಾಧÀನೆಗಳನ್ನು ಈ ಹಿಂದೆಯೇ ಸದನದಲ್ಲಿ ತಾವು ಉಲ್ಲೇಖಿಸಿದ್ದಾಗಿ ಹೇಳಿದರು.
ರಾಜ್ಯದಲ್ಲಿ ೨೮ ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿಗಳ ಗೆಲುವಿಗೆ ಜೆಡಿಎಸ್ ಕಾರ್ಯಕರ್ತರು ಪ್ರಾಮಾಣಿಕ ಕೆಲಸ ಮಾಡಲಿದ್ದಾರೆ ಎಂದು, ಕೊಡಗು ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ಎಲ್. ವಿಶ್ವ ಹೇಳಿದರು. ರಾಜಮನೆತನದಿಂದ ಬಂದರೂ, ಜನರೊಂದಿಗೆ ಬೆರೆಯುವುದಾಗಿ ಯದುವೀರ್ ಈಗಾಗಲೇ ಹೇಳಿದ್ದಾರೆ. ನÀಕಲಿ ಭಾಗ್ಯಗಳಿಂದಾಗಿ ಕಾಂಗ್ರೆಸ್ ಗೆದ್ದಿದ್ದರೂ, ಲೋಕಸಭಾ ಚುನಾವಣೆಯಲ್ಲಿ ಯದುವೀರ್ ಅವರನ್ನು ಎದುರಿಸುವುದು ಕಷ್ಟಸಾಧ್ಯ ಎಂದರು.
ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಜಿಲ್ಲಾ ವಕ್ತಾರÀ ಮಹೇಶ್ ಜೈನಿ, ಜೆಡಿಎಸ್ ವೀರಾಜಪೇಟೆ ತಾಲೂಕು ಅಧ್ಯಕ್ಷ ಮಂಜುನಾಥ್ ಮತ್ತು ಮಡಿಕೇರಿ ನಗರಾಧ್ಯಕ್ಷ ರವಿಕಿರಣ್ ಹಾಜರಿದ್ದರು.