ಸಿದ್ದಾಪುರ, ಏ. ೧೦: ಬಿಸಿಲಿನ ತಾಪಮಾನದಿಂದ ಜಲಮೂಲಗಳಲ್ಲಿ ನೀರು ಇಲ್ಲದೆ ಬಿಸಿಲಿನ ತಾಪಕ್ಕೆ ವನ್ಯ ಪ್ರಾಣಿಗಳು ಹೈರಾಣಾಗಿವೆ.

ನೀರು ಆಹಾರ ಅರಸಿ ಬಂದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಮನೆಯ ಮೇಲ್ಚಾವಣಿಯಲ್ಲಿ ಅಡಗಿ ಕುಳಿತು ಮನೆಯವರಲ್ಲಿ ಆತಂಕ ಸೃಷ್ಟಿ ಮಾಡಿತ್ತು.

ಚೇಯ್ಯಂಡಾಣೆ ಪ್ರವೀಣ್ ಕಾಳಯ್ಯ ಅವರ ಮನೆಯ ಮೇಲ್ಚಾವಣಿಯಲ್ಲಿದ್ದ ಅಂದಾಜು ೧೦ ಅಡಿ ಉದ್ದದ ಕಾಳಿಂಗ ಸರ್ಪವನ್ನು ಅಮ್ಮತ್ತಿಯ ಉರಗ ರಕ್ಷಕ ಬೊಪ್ಪಂಡ ರೋಶನ್ ಸುರಕ್ಷಿತವಾಗಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಸೆರೆಹಿಡಿದ ಕಾಳಿಂಗ ಸರ್ಪವನ್ನ ಪೆರುಂಬಾಡಿ ಅರಣ್ಯಕ್ಕೆ ಬಿಡಲಾಗುವುದು ಎಂದು ರೋಷನ್ ತಿಳಿಸಿದರು.

ನೀರು ಆಹಾರ ಅರಸಿ ಪ್ರಾಣಿಗಳು ಮನೆಯ ಸಮೀಪವೇ ಬರುತ್ತಿದ್ದು ಗ್ರಾಮಸ್ಥರು ಎಚ್ಚರ ವಹಿಸುವುದರ ಮೂಲಕ ಪ್ರಾಣಿ ಪಕ್ಷಿಗಳಿಗೆ ನೀರಿನ ದಾಹ ನೀಗಿಸಲು ಮನೆಯ ಸುತ್ತಮುತ್ತಲ ಪ್ರದೇಶಗಳಲ್ಲಿ ನೀರು ಸಂಗ್ರಹಿಸಿ ಇಡಬೇಕೆಂದು ಮನವಿ ಮಾಡಿದ ಅವರು ಹಾವುಗಳು ಕಂಡು ಬಂದಲ್ಲಿ ಮುನ್ನೆಚ್ಚರಿಕೆ ವಹಿಸುವುದರ ಮೂಲಕ ೭೦೨೨೩೭೩೯೨೧ ಕರೆ ಮಾಡುವಂತೆ ತಿಳಿಸಿದ್ದಾರೆ.

-ಎಸ್.ಎಂ. ಮುಬಾರಕ್