ನಾಪೋಕ್ಲು, ಏ. ೧೧: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ನಮ್ಮೆಯ ಕುಂಡ್ಯೋಳAಡ ಕಪ್‌ನ ೧೩ನೇ ದಿನದ ಪಂದ್ಯಾಟದಲ್ಲಿ ಮಾಜಿ ಚಾಂಪಿಯನ್ ಚೇಂದAಡ ಸೇರಿದಂತೆ ನಾಪಂಡ, ಸೋಮೆಯಂಡ, ಮತ್ರಂಡ, ಚೆಟ್ಟಂಗಡ, ಕೊಟ್ಟಂಗಡ, ತೀತಿಮಾಡ ಕಂಗಾAಡ, ಪೊಂಜಾAಡ, ಮಲ್ಲಾಜಿರ, ಅಲ್ಲಾರಂಡ, ಕೊಂಗೇಟಿರ, ಅಪ್ಪಚೆಟ್ಟೋಳಂಡ, ಮಚ್ಚಾರಂಡ, ಪಾಂಡAಡ, ಚಂಗುಲAಡ, ಮೂಕಳೆರ, ಪೆಮ್ಮಂಡ, ಬಾರಿಯಂಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿವೆ.

ಮೈದಾನ ೧ರಲ್ಲಿ ನಡೆದ ಇಂದAಡ ಮತ್ತು ನಾಪಂಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ನಾಪಂಡ ತಂಡವು ಇಂದAಡ ತಂಡವನ್ನು ೫-೧ ಗೋಲಿನ ಅಂತರದಿAದ ಪರಾಭವಗೊಳಿಸಿತು. ನಾಪಂಡ ತಂಡದ ಪರ ಬೋಪಣ್ಣ ೨, ನಿತಿನ್ ನಾಚಪ್ಪ, ಭವನ್ ನಾಚಪ್ಪ, ನಿತಿನ್ ತಲಾ ಒಂದು ಗೋಲು ದಾಖಲಿಸಿದರು. ಇಂದAಡ ತಂಡದ ಪರ ಸಜನ್ ಒಂದು ಗೋಲು ಗಳಿಸಿದರು.

ಸೋಮೆಯಂಡ ಮತ್ತು ನಿಡುಮಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಸೋಮೆಯಂಡ ತಂಡವು ನಿಡುಮಂಡ ತಂಡವನ್ನು ೩-೦ ಗೋಲುಗಳ ಅಂತರದಿAದ ಸೋಲಿಸಿತು. ಸೋಮೆಯಂಡ ತಂಡದ ಪರ ಪುನೀತ್, ವಚನ್, ಸುಜು ತಲಾ ಒಂದು ಗೋಲು ದಾಖಲಿಸಿದರು. ಅಜ್ಜೇಟಿರ ಮತ್ತು ಮತ್ರಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮತ್ರಂಡ ತಂಡವು ೪-೦ ಗೋಲುಗಳಿಂದ ಅಜ್ಜೇಟಿರ ತಂಡವನ್ನು ಸೋಲಿಸಿತು. ಮತ್ರಂಡ ತಂಡದ ಪರ ಪ್ರಜ್ವಲ್, ಪರ್ವಿನ್, ವಿಶಾಲ್, ನಿಖಿಲ್ ತಲಾ ಒಂದು ಗೋಲು ದಾಖಲಿಸಿದರು. ಚೆಟ್ಟಂಗಡ ಮತ್ತು ಕಾರೇರ ತಂಡಗಳ ನಡುವಿನ ಪಂದ್ಯದಲ್ಲಿ ಚೆಟ್ಟಂಗಡ ತಂಡವು ಕಾರೇರ ತಂಡವನ್ನು ೪-೦ ಗೋಲಿನಿಂದ ಸೋಲಿಸಿತು.

ಚೆಟ್ಟಂಗಡ ತಂಡದ ಪರ ಅಮಲ್ ಎರಡು, ಪುನೀತ್, ಕಾವೇರಪ್ಪ ತಲಾ ಒಂದು ಗೋಲು ದಾಖಲಿಸಿದರು. ಕೊಟ್ಟಂಗಡ ಮತ್ತು ಅಚ್ಚಪಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕೊಂಟ್ಟAಗಡ ತಂಡವು ಅಚ್ಚಪಂಡ ತಂಡವನ್ನು ಟೈಬ್ರೇಕರ್‌ನಲ್ಲಿ ೫-೩ ಗೋಲುಗಳ ಅಂತರದಿAದ ಸೋಲಿಸಿತು. ತೀತಿಮಾಡ ಮತ್ತು ತೆಕ್ಕಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ತೀತಿಮಾಡ ತಂಡವು ತೆಕ್ಕಡ ತಂಡವನ್ನು ಟೈಬ್ರೇಕರ್‌ನಲ್ಲಿ ೬-೫ ಗೋಲುಗಳ ಅಂತರದಿAದ ಸೋಲಿಸಿತು. ನಾಮೇರ ಮತ್ತು ಬಾರಿಯಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಾರಿಯಂಡ ತಂಡವು ನಾಮೆರ ತಂಡವನ್ನು ೨-೦ ಗೋಲಿನಿಂದ ಪರಾಭವಗೊಳಿಸಿತು. ಬಾರಿಯಂಡ ತಂಡದ ಪರ ಗಗನ್ ಸೋಮಯ್ಯ, ಮಧು ಮಾಚಯ್ಯ ತಲಾ ಒಂದು ಗೋಲು ಬಾರಿಸಿದರು.

ಮೈದಾನ ೨ರಲ್ಲಿ ನಡೆದ ಮಾಜಿ ಚಾಂಪಿಯನ್ ಚೇಂದAಡ ಮತ್ತು ಮಂಡೆಯAಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಚೇಂದAಡ ತಂಡವು ಮಂಡೆಯAಡ ತಂಡವನ್ನು ೪-೦ ಗೋಲುಗಳ ಅಂತರದಿAದ ಸೋಲಿಸಿತು. ಚೇಂದAಡ ತಂಡದ ಪರ ತರುಣ್ ತಮ್ಮಯ್ಯ, ಬೋಪಣ್ಣ, ಶಮಿ ಮಾದಯ್ಯ, ತನುಶ್ ತಲಾ ಒಂದೊAದು ಗೋಲು ದಾಖಲಿಸಿದರು. ಕಂಗಾAಡ ಮತ್ತು ಮಾಚಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಂಗಾAಡ ತಂಡವು ಮಾಚಮಾಡ ತಂಡವನ್ನು ಟೈಬ್ರೇಕರ್‌ನಲ್ಲಿ ೪-೨ ಗೋಲುಗಳ ಅಂತರದಿAದ ಸೋಲಿಸಿತು.

ಕಾಳಚಂಡ ಮತ್ತು ಪೊಂಜಾAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪೊಂಜಾAಡ ತಂಡವು ಕಾಳಚಂಡ ತಂಡವನ್ನು ಟೈಬ್ರೇಕರ್‌ನಲ್ಲಿ ೪-೩ ಗೋಲಿನ ಅಂತರದಿAದ ಸೋಲಿಸಿತು. ಮಲ್ಲಜ್ಜಿರ ಮತ್ತು ಬಡ್ಡಿರ ತಂಡಗಳ ನಡುವಿನ ಸೆಣೆಸಾಟದಲ್ಲಿ ಮಲ್ಲಜ್ಜಿರ ತಂಡವು ಬಡ್ಡಿರ ತಂಡವನ್ನು ೩-೦ ಗೋಲುಗಳ ಅಂತರದಿAದ ಸೋಲಿಸಿತು. ಮಲ್ಲಜ್ಜಿರ ತಂಡದ ಪರ ಅಮೋಘ್ ಪೊನ್ನಣ್ಣ ಎರಡು ಮತ್ತು ವಚನ್ ಅಯ್ಯಪ್ಪ ಒಂದು ಗೋಲು ದಾಖಲಿಸಿದರು.

ಅಲ್ಲಾರಂಡ ಮತ್ತು ಪಟ್ಟಚೆರುವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಲ್ಲಾರಂಡ ತಂಡವು ಪಟ್ಟಚೆರುವಂಡ ತಂಡವನ್ನು ೨-೧ ಗೋಲುಗಳಿಂದ ಸೋಲಿಸಿತು. ಅಲ್ಲಾರಂಡ ತಂಡದ ಪರ ಸುನೀಲ್ ಕುಶಾಲಪ್ಪ, ಆಕಾಶ್ ಅಪ್ಪಣ್ಣ ತಲಾ ಒಂದು ಗೋಲು ದಾಖಲಿಸಿದರು. ಪಟ್ಟಚೆರುವಂಡ ತಂಡದ ಪರ ಹಾರ್ದಿಕ್ ಒಂದು ಗೋಲು ದಾಖಲಿಸಿದರು. ಮಲ್ಲಂಡ ಮತ್ತು ಕೊಂಗೇಟಿರ ತಂಡಗಳ ನಡುವೆ ನಡೆದ ಸೆಣೆಸಾಟದಲ್ಲಿ ಕೊಂಗೇಟಿರ ತಂಡವು ಮಲ್ಲಂಡ ತಂಡವನ್ನು ೪-೦ ಗೋಲುಗಳ ಅಂತರದಲ್ಲಿ ಸೋಲಿಸಿತು. ಕೊಂಗೇಟಿರ ತಂಡದ ಪರ ನೀಲೇಶ್ ಮಾದಪ್ಪ ಮೂರು ಮತ್ತು ಅರ್ಜುನ್ ಅಪ್ಪಣ್ಣ ಒಂದು ಗೋಲು ದಾಖಲಿಸಿದರು.

ಮೈದಾನ ೩ರಲ್ಲಿ ನಡೆದ ಶಿವಚಾಳಿಯಂಡ ಮತ್ತು ಅಪ್ಪಚೆಟ್ಟೋಳಂಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಅಪ್ಪಚೆಟ್ಟೋಳಂಡ ತಂಡವು ಶಿವಚಾಳಿಯಂಡ ತಂಡವನ್ನು ೨-೦ ಗೋಲಿನ ಅಂತರದಿAದ ಸೋಲಿಸಿತು. ಅಪ್ಪಚೆಟ್ಟೋಳಂಡ ತಂಡದ ಪರ ಅಯ್ಯಪ್ಪ ಎರಡು ಗೋಲು ದಾಖಲಿಸಿ ತಂಡದ ಮುನ್ನಡೆಗೆ ಕಾರಣರಾದರು. ಮಚ್ಚಾರಂಡ ಮತ್ತು ಶಾಂತೆಯAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಚ್ಚಾರಂಡ ತಂಡವು ಶಾಂತೆಯAಡ ತಂಡವನ್ನು ೨-೧ ಗೋಲುಗಳ ಅಂತರದಿAದ ಸೋಲಿಸಿತು.

ಮಚ್ಚಾರಂಡ ತಂಡದ ಪರ ಗಣಪತಿ, ಹೇಮ್ ಮೊಣ್ಣಪ್ಪ ತಲಾ ಒಂದೊAದು ಗೋಲು ಗಳಿಸಿದರೆ, ಶಾಂತೆಯAಡ ತಂಡದ ಪರ ಕರಣ್ ಉತ್ತಪ್ಪ ಒಂದು ಗೋಲು ದಾಖಲಿಸಿದರು. ಪಾಂಡAಡ ಮತ್ತು ಕಳ್ಳಂಗಡ ತಂಡಗಳ ನಡುವಿನ ಸೆಣೆಸಾಟದಲ್ಲಿ ಪಾಂಡAಡ ತಂಡವು ಕಳ್ಳಂಗಡ ತಂಡವನ್ನು ೨-೧ ಗೋಲುಗಳ ಅಂತರದಿAದ ಮಣಿಸಿತು. ಪಾಂಡAಡ ತಂಡದ ಪರ ವರುಣ್ ಬೋಪಣ್ಣ ಎರಡು ಗೋಲು ದಾಖಲಿಸಿದರೆ, ಕಳ್ಳಂಗಡ ತಂಡದ ಪರ ತೀರ್ಥೇಶ್ ತಿಮ್ಮಯ್ಯ ಏಕೈಕ ಗೋಲು ದಾಖಲಿಸಿದರು.

ಚಂಗುಲAಡ ಮತ್ತು ಅಲ್ಲಪಂಡ ತಂಡಗಳ ನಡುವಿನ ಪಂದ್ಯದಲ್ಲಿ ಚಂಗುಲAಡ ತಂಡವು ಅಲ್ಲಪಂಡ ತಂಡವನ್ನು ೩-೧ ಗೋಲುಗಳಿಂದ ಸೋಲಿಸಿತು. ಚಂಗುಲAಡ ತಂಡದ ಪರ ಗೌತಮ್ ಎರಡು, ಅಯ್ಯಪ್ಪ ಒಂದು ಗೋಲು ದಾಖಲಿಸಿದರೆ, ಅಲ್ಲಪಂಡ ತಂಡದ ಪರ ಅಯ್ಯಪ್ಪ ಒಂದು ಗೋಲು ದಾಖಲಿಸಿದರು. ತಂಬುಕುತ್ತಿರ ಮತ್ತು ಮೂಕಳೇರ ತಂಡಗಳ ನಡುವಿನ ಪಂದ್ಯದಲ್ಲಿ ಮೂಕಳೇರ ತಂಡವು ತಂಬುಕುತ್ತಿರ ತಂಡವನ್ನು ಟೈಬ್ರೇಕರ್‌ನಲ್ಲಿ ೪-೨ ಗೋಲುಗಳಿಂದ ಮಣಿಸಿತು. ಮುಕ್ಕಾಟಿರ (ಕುಂಜಿಲಗೇರಿ) ಪೆಮ್ಮಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪೆಮ್ಮಂಡ ತಂಡವು ೫-೦ ಗೋಲುಗಳಿಂದ ಮುಕ್ಕಾಟಿರ ತಂಡವನ್ನು ಪರಾಭವಗೊಳಿಸಿತು. ಪೆಮ್ಮಂಡ ತಂಡದ ಪರ ಸುಹಾಸ್ ಸೋಮಣ್ಣ ಮೂರು, ಸೋಮಣ್ಣ ಎ.ಪಿ ಎರಡು ಒಂದು ಗೋಲು ದಾಖಲಿಸಿದರು.

-ಪಿ.ವಿ.ಪ್ರಭಾಕರ್