ಮಡಿಕೇರಿ, ಏ. ೧೧: ಬಿ.ಜೆ.ಪಿ. ಅಭ್ಯರ್ಥಿ ಯದುವೀರ್ ಅವರು ದಕ್ಷಿಣ ಕೊಡಗಿನ ಹಲವೆಡೆ ಪಕ್ಷ ಪ್ರಮುಖರೊಂದಿಗೆ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ದ್ದರು. ಈ ಅಂದರ್ಭ ಬಿರುನಾಣಿಗೆ ತೆರಳಿದ ಅವರು ಬಾಡಗರಕೇರಿಯ ಶ್ರೀಮೃತ್ಯುಂಜಯ ದೇವಸ್ಥಾನಕ್ಕೂ ಭೇಟಿ ನೀಡಿ ಆಶೀರ್ವಾದ ಪಡೆದರು, ದೇವಾಲಯ ಸಮಿತಿ ಪ್ರಮುಖರು ಸೇರಿದಂತೆ ಬಿ.ಜೆ.ಪಿ. ಪಕ್ಷದ ಪದಾಧಿಕಾರಿಗಳು ಹಾಜರಿದ್ದರು.