ಭಾಗಮಂಡಲ, ಏ. ೧೧: ಕಾರ್ಯಕರ್ತರು ಬೂತ್ ಮಟ್ಟದಿಂದಲೇ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಮೋದಿ ಸರ್ಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ಮಾಜಿ ಶಾಸಕ ಕೆ .ಜಿ ಬೋಪಯ್ಯ ಹೇಳಿದರು. ಭಾಗಮಂಡಲದ ಬಿಜೆಪಿ ಶಕ್ತಿ ಕೇಂದ್ರದ ಕಛೇರಿ ಉದ್ಘಾಟನೆಯನ್ನು ಪಿಎಸ್‌ಆರ್ ಕಾಂಪ್ಲೆಕ್ಸ್ನಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಅಭಿವೃದ್ಧಿ ಆಗಬೇಕಿದ್ದರೆ ಬಿಜೆಪಿ ಪಕ್ಷಕ್ಕೆ ಮತ ನೀಡಬೇಕು ಎಂದರು. ಬಿಜೆಪಿ ಪ್ರಮುಖ ಸತೀಶ್ ಕುಮಾರ್ ಮಾತನಾಡಿ ಭಾಗಮಂಡಲ ವ್ಯಾಪ್ತಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ಆಡಳಿತ ರೂಢ ಸರ್ಕಾರ ಅಭಿವೃದ್ಧಿ ಕೆಲಸಗಳತ್ತ ಗಮನಹರಿಸುವುದು ಅಗತ್ಯ ಎಂದರು. ಗ್ರಾ. ಪಂ. ಅಧ್ಯಕ್ಷ ಕಾಳನ ರವಿ, ಉಪಾಧ್ಯಕ್ಷೆ ಗಂಗಮ್ಮ, ಚೆಟ್ಟಿಮಾನಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ, ಗ್ರಾಮ ಪಂಚಾಯತ್ ಸದಸ್ಯರಾದ ನಾಗೇಶ್, ದಂಡಿನ ಜಯಂತ್, ಬಿಜೆಪಿ ಪ್ರಮುಖರಾದ ಅಮೆ ಬಾಲಕೃಷ್ಣ ಇನ್ನಿತರರು ಉಪಸ್ಥಿತರಿದ್ದರು.