ಸೋಮವಾರಪೇಟೆ, ಏ. ೧೧: ಜಿಲ್ಲೆಯ ಹಿರಿಯ ರಾಜಕಾರಣಿ, ಮಾಜೀ ಸಚಿವ ಬಿ.ಎ. ಜೀವಿಜಯ ಅವರನ್ನು ಬಿಜೆಪಿ ಪಕ್ಷದ ಮುಖಂಡರು ಗಳು ಅವರ ಮನೆಯಲ್ಲಿ ಭೇಟಿ ಮಾಡಿ ಉಭಯಕುಶಲೋಪರಿ ನಡೆಸಿದರು. ಇದೇ ಸಂದರ್ಭ ಲೋಕಸಭಾ ಚುನಾವಣೆಯಲ್ಲಿ ಸಹಕಾರ ನೀಡು ವಂತೆ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರು ಜೀವಿಜಯ ಅವರಲ್ಲಿ ಮನವಿ ಮಾಡಿದರು. ಬಿಳಿಗೇರಿ ಗ್ರಾಮದ ನಿವಾಸಕ್ಕೆ ತೆರಳಿದ ಭಾರತೀಯ ಜನತಾ ಪಾರ್ಟಿಯ ಮುಖಂಡರು, ಜೀವಿಜಯ ಅವರನ್ನು ಅಭಿನಂದಿಸಿ, ಲೋಕಸಭಾ ಚುನಾವಣೆ ಯಲ್ಲಿ ಸಹಕಾರ ಬಯಸಿದರು.

ಬಿಜೆಪಿ ಮುಖಂಡರು ಹಾಗೂ ಲೋಕಸಭಾ ಚುನಾವಣೆಯ ಅಭ್ಯರ್ಥಿ ಯದುವೀರ್ ಅವರನ್ನು ಆತ್ಮೀಯವಾಗಿ ಮಾತನಾಡಿದ ಜೀವಿಜಯ, ಪ್ರಸ್ತುತ ರಾಜಕೀಯ ವಿಷಯಗಳ ಕುರಿತು ಕೆಲಕಾಲ ಮಾತುಕತೆ ನಡೆಸಿದರು. ದೇಶದ ಭವಿಷ್ಯದ ಹಿತದೃಷ್ಟಿಯಿಂದ ಎಲ್ಲರೂ ಕೆಲಸ ಮಾಡಬೇಕು. ಅಭಿವೃದ್ಧಿಶೀಲ, ರಾಷ್ಟಿçÃಯ ಹಿತಾಸಕ್ತಿಯ ರಾಜಕಾರಣದಿಂದ ಮಾತ್ರ ದೇಶದ ಉಳಿವು ಎಂಬುದನ್ನು ಮನಗಾಣ ಬೇಕೆಂದು ಅಭಿಪ್ರಾಯಿಸಿದರು. ಬಿಜೆಪಿ ಅಭ್ಯರ್ಥಿ ಯದುವೀರ್ ಸೇರಿದಂತೆ ಮಾಜೀ ಶಾಸಕ, ಅಪ್ಪಚ್ಚು ರಂಜನ್, ಮಾಜಿ ಎಂಎಲ್‌ಸಿ ಸುನಿಲ್ ಸುಬ್ರಮಣಿ, ಮಾಜಿ ಶಾಸಕ, ಮೈಸೂರಿನ ರಾಮ್‌ದಾಸ್, ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ, ಇನ್ನಿತರ ಮುಖಂಡರು ಭೇಟಿ ಮಾಡಿ ಮಾಡಿದರು.