ಮಡಿಕೇರಿ: ತನಲ್ ಆಶ್ರಮದಲ್ಲಿ ಹೊಸ ಉಡುಪುಗಳನ್ನು ತೊಟ್ಟು ಸಂತೋಷದಿAದ ರಂಜಾನ್ ಆಚರಿಸಲಾಯಿತು.
ತನಲ್ ಮಹಿಳಾ ವಿಂಗ್ ವತಿಯಿಂದ ಎಲ್ಲಾ ಆಶ್ರಿತರಿಗೆ ಮದರಂಗಿ ಹಚ್ಚಿ ಹೊಸ ಉಡುಪು ಮತ್ತು ವಿಶೇಷ ಉಡುಗೊರೆ ನೀಡಿ ಭೋಜನ ವ್ಯವಸ್ಥೆ ಮಾಡಲಾಯಿತು. ಪದಾಧಿಕಾರಿಗಳಾದ ಮುಹೀನ ಮೊಹಮ್ಮದ್, ಉನೈಸ ಮುಸ್ತಾಫಾ, ನಸಿರ ಅದ್ದಮ, ಝಕೀಯ ಮತ್ತು ರಹಮತ್ ಅನ್ವರ್ ಹಾಜರಿದ್ದರು.ಮಡಿಕೇರಿ: ಚೆಟ್ಟಳ್ಳಿ ಸಮೀಪದ ಕಂಡಕರೆಯಲ್ಲಿ ಮುಸ್ಲಿಂ ಸಮುದಾಯದÀವರು ರಂಜಾನ್ ಹಬ್ಬವನ್ನು ಆಚರಿಸಿದರು.
ಬೆಳಿಗ್ಗೆ ೮ ಗಂಟೆಗೆ ಮಸ್ಜಿದ್ ತಖ್ವಾದಲ್ಲಿ ನಡೆದ ಈದ್ ನಮಾಜ್ ನೇತೃತ್ವವನ್ನು ಮಹಲ್ ಖತೀಬರಾದ ಮುಸ್ತಫಾ ಸಖಾಫಿ ವಹಿಸಿದ್ದರು. ನಂತರ ಮಾತನಾಡಿ, ಯುವ ಸಮೂಹ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಒಳಿತಿನ ದಾರಿಯಲ್ಲಿ ಸಾಗಬೇಕು ಎಂದರು.
ಯೌವ್ವನವನ್ನು ನಾವು ಹಾಳುಮಾಡಬಾರದು. ಯುವತ್ವದ ಪ್ರಾಯದಲ್ಲಿ ದೀನಿಕಾರ್ಯಗಳನ್ನು ಮಾಡುತ್ತಾ ನಾವು ಅಲ್ಲಾಹನಿಗೆ ಹತ್ತಿರವಾಗಬೇಕು ಆದರೆ ಮಾತ್ರ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.
ಬಳಿಕ ಮರಣ ಹೊಂದಿದವರಿಗಾಗಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಯಿತು.ಕಡಂಗ: ಇಲ್ಲಿನ ಬದ್ರಿಯಾ ಜುಮಾ ಮಸೀದಿ ಮತ್ತು ಮುಯದ್ದೀನ್ ಜುಮಾ ಮಸೀದಿಯಲ್ಲಿ ರಂಜಾನ್ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದರು.
ಬದ್ರಿಯಾ ಜುಮಾ ಮಸೀದಿಯ ಧರ್ಮಗುರುಗಳಾದ ಇಸ್ಮಾಯಿಲ್ ಲತೀಫಿ ನೇತೃತ್ವದಲ್ಲಿ ಮತ್ತು ಮುಯದ್ದೀನ್ ಜುಮಾ ಮಸೀದಿಯಲ್ಲಿ ರಫೀಕ್ ಲತೀಫಿ ನೇತೃತ್ವದಲ್ಲಿ ಸಾಮೂಹಿಕ ನಮಾಜ್ ನೆರವೇರಿತು.
ಮಳೆಗಾಗಿ ಪ್ರತ್ಯೇಕ ಪ್ರಾರ್ಥನೆ ಸಲ್ಲಿಸಲಾಯಿತು. ಖಬರಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು. ಈ ಸಂದರ್ಭ ಎರಡು ಮಸೀದಿಯ ಜಮಾಅತ್ ಅಧ್ಯಕ್ಷರಾದ ಉಸ್ಮಾನ್, ಅಬ್ದುಲ್ಲ, ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.ಸೋಮವಾರಪೇಟೆ: ಇಲ್ಲಿನ ಜಲಾಲಿಯ ಮಸೀದಿಯಲ್ಲಿ ಈದ್ ಪ್ರಯುಕ್ತ ಮುಸ್ಲಿಂ ಸಮುದಾಯದವರು ಸಾಮೂಹಿಕ ಪ್ರಾರ್ಥನೆ ನಡೆಸಿದರು.
ನಂತರ ಮಸೀದಿ ಧರ್ಮಗುರುಗಳಾದ ಅಬ್ದುಲ್ ಹಮೀದ್ ಸಖಾಫಿಯವರು ಹಸಿವು ಹಾಗೂ ತಾಳ್ಮೆ ಎಂದರೇನು? ಎಂದು ತಿಳಿಸಿ ಕೊಡುವ ಪುಣ್ಯ ರಂಜಾನ್ ತಿಂಗಳ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಮಸೀದಿ ಅಧ್ಯಕ್ಷ ಎಂ.ಬಿ. ಇಬ್ರಾಹಿಂ, ಕಾರ್ಯದರ್ಶಿ ಸಮದ್ ಮತ್ತು ಪದಾಧಿಕಾರಿಗಳು ಹಾಗೂ ಸಮುದಾಯ ಬಾಂಧವರು ಪಾಲ್ಗೊಂಡು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.ಚೆಯ್ಯAಡಾಣೆ: ಎಡಪಾಲದಲ್ಲಿ ಸಂಭ್ರಮ- ಸಡಗರ ದಿಂದ ರಂಜಾನ್ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಎಡಪಾಲ ಜುಮಾ ಮಸೀದಿಯಲ್ಲಿ ಈದ್ ನಮಾಜ್ಗೆ ಮುದರಿಸ್ ನಿಝಾರ್ ಫೈಝಿ ನೇತೃತ್ವ ವಹಿಸಿದರು. ಪ್ರಾರ್ಥನೆಗೆ ಕೊಡಗು ಜಿಲ್ಲಾ ನಾಇಬ್ ಖಾಝಿ ಹಾಗೂ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಅಬ್ದುಲ್ಲ ಫೈಝಿ ನೇತೃತ್ವ ವಹಿಸಿದ್ದರು. ಅಂಡತ್ ಮಾನಿ ದರ್ಗಾಕ್ಕೆ ತೆರಳಿ ಶಾಂತಿ, ನೆಮ್ಮದಿ, ಸೌಹಾರ್ದತೆಗಾಗಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಕುಶಾಲನಗರ
ಕುಶಾಲನಗರ: ರಂಜಾನ್ ಅಂಗವಾಗಿ ಕುಶಾಲನಗರದಲ್ಲಿ ಮುಸ್ಲಿಂ ಸಮುದಾಯದ ಕೆಲವು ಮಸೀದಿಗಳಲ್ಲಿ ಬುಧವಾರ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಪಟ್ಟಣದ ಹಿಲಾಲ್ ಮಸೀದಿ ಮತ್ತು ತಕ್ವಾ ಪ್ರಾರ್ಥನಾ ಮಂದಿರದಲ್ಲಿ ಸೇರಿ ರಂಜಾನ್ ಆಚರಣೆಯಲ್ಲಿ ತೊಡಗಿಸಿಕೊಂಡರು.ಸುAಟಿಕೊಪ್ಪ: ಸುಂಟಿಕೊಪ್ಪದಲ್ಲಿ ಪವಿತ್ರ ರಂಜಾನ್ ಹಬ್ಬದ ಅಂಗವಾಗಿ ಗುರುವಾರ ವಿವಿಧ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ಶ್ರದ್ಧಾಭಕ್ತಿಯಿಂದ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ಸುಂಟಿಕೊಪ್ಪ ಪಟ್ಟಣದ ಸುನ್ನಿ ಶಾಫಿ ಜುಮ್ಮ ಮಸ್ಜಿದ್ನಲ್ಲಿ ಮುಸ್ಲಿಯರ್ ರೌಫ್ ಸಖಾಫಿ, ಸುನ್ನಿ ಹನಫಿ ಮುಸ್ಲಿಂ ಜಮಾಅತ್ ಮೌಲನಾ ಜುಬೇರ್ ಅಹ್ಮದ್, ಸುನ್ನಿ ಶಾಫಿ ಜುಮಾ ಮಸ್ಜಿದ್ ಧಾರ್ಮಿಕ ಮೌಲವಿ ಹಮೀದ್ ದರ್ಮಿ, ಕೂಬ್ಬ ಮಸ್ಜಿದ್ ಮೌಲನಾ ಇನಾಂ, ಗದ್ದೆಹಳ್ಳದ ನೂರು ಜುಮ್ಮ ಮಸ್ಜಿದ್ ಮುಸ್ಲಿಯರ್ ಒಸಾಮ ಸಖಾಫಿ ಅವರುಗಳು ಧಾರ್ಮಿಕ ಪ್ರವಚನ ಪ್ರಾರ್ಥನೆಯನ್ನು ಸಲ್ಲಿಸಿದರು. ಸುಂಟಿಕೊಪ್ಪ ಠಾಣಾಧಿಕಾರಿ ಶ್ರೀಧರ್ ಹಾಗೂ ಪೊಲೀಸ್ ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ವಹಿಸಿದ್ದರು.ಸಿದ್ದಾಪುರ: ಸಿದ್ದಾಪುರ ಸುತ್ತಮುತ್ತಲ ಗ್ರಾಮಗಳಲ್ಲಿ ಮುಸ್ಲಿಂ ಸಮುದಾಯದವರು ರಂಜಾನ್ ಹಬ್ಬವನ್ನು ಸಡಗರ ಸಂಭ್ರಮದಿAದ ಆಚರಿಸಿದರು.
ಬೆಳಿಗ್ಗೆ ಮಸೀದಿಗೆ ತೆರಳಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿಸಿಕೊಂಡರು. ಪರಸ್ಪರ ಹಬ್ಬದ ಶುಭಾಶಯ ಹಂಚಿಕೊAಡರು.