ಚೆಯ್ಯಂಡಾಣೆ, ಏ ೧೧. ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡ ಗ್ರಾಮದಲ್ಲಿ ಇಂದು ಸಂಜೆ ಸುರಿದ ಬಿರುಗಾಳಿ ಮಳೆಗೆ ಅಪಾರ ಪ್ರಮಾಣದ ಹಾನಿಯಾಗಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಕರಡ ವ್ಯಾಪ್ತಿಯಲ್ಲಿ ೩೦ ಸೆಂಟ್ ಮಳೆಯಾಗಿದೆ. ಭಾರೀ ಬಿರುಗಾಳಿಗೆ ಕರಡ ಗ್ರಾಮದಲ್ಲಿ ಶಾಲಾ ಮೈದಾನದಲ್ಲಿ ಬೃಹತ್ ಮರ, ಮನೆಯ ಹಂಚು, ಶೆಡ್ಗೆ ಅಳವಡಿಸಿದ್ದ ಶೀಟ್ ಹಾಗೂ ಕಾಫಿ ಗಿಡದ ರೆಂಬೆ ಹಾಗೂ ಸಿಲ್ವರ್ ಮರಗಳು ಮುರಿದು ಬಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ.
ಸ್ಥಳೀಯ ಐತಿಚಂಡ ಮಧು ಮುದ್ದಯ್ಯನವರ ಲೈನ್ ಮನೆಯ ೪೦ಕ್ಕೂ ಹೆಚ್ಚು ಹಂಚುಗಳು ಹಾಗೂ ಶೆಡ್ ಶೀಟ್ ಬಿರುಗಾಳಿಗೆ ಹಾರಿಹೋಗಿದೆ. ಸಿಲ್ವರ್, ತೆಂಗು, ಕಾಫಿ ಗಿಡಗಳು ಗಾಳಿ ಮಳೆಗೆ ಮುರಿದು ಬಿದ್ದಿವೆ. ಬೃಹತ್ ಮರಗಳು ಉರುಳಿದ ಕಾರಣ ವಿದ್ಯುತ್ ತಂತಿಗಳು ನೆಲಕಚ್ಚಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಕೀಮಲೆ ಕಾಡುವಿನಲ್ಲೂ ಇದೆ ರೀತಿ ಮಳೆಯಾಗಿದ್ದು, ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಮರ ಉರುಳಿದ ಪರಿಣಾಮ ವಿದ್ಯುತ್ ಕಂಬ ತುಂಡಾಗಿದೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಗ್ರಾಮಸ್ಥರು ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು. ವಿಪರೀತ ಬಿಸಿಲಿನಿಂದ ಕಂಗೆಟ್ಟಿದ್ದ ಜಿಲ್ಲೆಯಲ್ಲಿ ಈ ರೀತಿ ಮಳೆಯಾಗಿರುವುದು ಆಶ್ಚರ್ಯಕ್ಕೂ ಕಾರಣವಾಗಿದೆ.