ಸಿದ್ದಾಪುರ, ಏ. ೮: ಲೋಕಸಭಾ ಚುನಾವಣೆಯು ಕೊಡಗು ಜಿಲ್ಲೆಯ ಮತ್ತು ರಾಜ್ಯದ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು ಕಾರ್ಯಕರ್ತರು ಸಂಘಟಿತವಾಗಿ ಚುನಾವಣೆ ಎದುರಿಸಲು ಸನ್ನದ್ಧರಾಗಿ ಎಂದು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರು ಮತ್ತು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಕರೆ ನೀಡಿದರು.
ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ವೀರಾಜಪೇಟೆಯಲ್ಲಿ ಲೋಕಸಭಾ ಚುನಾವಣೆ ಸಂಬAಧಿಸಿದAತೆ ವಲಯ, ಬೂತ್, ಚುನಾಯಿತ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಶಾಸಕರು, ದೇಶವು ಇಂದಿಗೂ ಬಡರಾಷ್ಟçವಾಗಿ ಉಳಿದಿದೆ. ಧರ್ಮದ ಆಧಾರಿತವಾಗಿ ನಾವು ರಾಜಕೀಯ ಮಾಡುತ್ತಿಲ್ಲ. ಆದರೇ ಭಾ.ಜ.ಪ. ಇಂದಿಗೂ ಧರ್ಮ ಆಧಾರಿತ ರಾಜಕೀಯ ನಡೆಸುತ್ತಾ ಜನತೆಯಲ್ಲಿ ಸಂಘರ್ಷ ಮೂಡುವಂತೆ ಮಾಡಿದೆ. ಇಲ್ಲಿ ರಾಜ ಮತ್ತು ಸಾಮಾನ್ಯ ವ್ಯಕ್ತಿಯ ಮಧ್ಯೆ ನಡೆಯುತ್ತಿರುವ ಚುನಾವಣೆಯಾಗಿದ್ದು, ರಾಜ್ಯವು ಒಂಬತ್ತು ತಿಂಗಳಲ್ಲಿ ತಂದಿರುವ ಐದು ಗ್ಯಾರಂಟಿ ಮತ್ತು ಕಾರ್ಯಕ್ರಮಗಳನ್ನು ಮತದಾರರ ಮನೆಮನೆಗೆ ತಲುಪಿಸುವಂತೆ ಮಾಡುವಂತೆ ಕರೆ ನೀಡಿದರು.
ಕೆಲವು ದಿನಗಳ ಹಿಂದೆ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಸಂದೇಶವನ್ನು ಹರಿಯಬಿಟ್ಟಿದ್ದಾರೆ. ಇದು ಪಕ್ಷಕ್ಕೆ ಧಕ್ಕೆ ತರುವಂತದ್ದು. ಟೀಕೆ, ಟಿಪ್ಪಣಿಗಳು ಸಹಜ. ಚುನಾವಣೆ ಹೊಸ್ತಿಲಿನಲ್ಲಿ ಕಾರ್ಯಕರ್ತರು ಒಂದು ದಿನದ ಹೀರೋ ಆಗಲು ಪ್ರಯತ್ನ ಮಾಡಬೇಡಿ. ಅಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಚುನಾವಣೆ ಎದುರಿಸಿ. ಕಾರ್ಯಕರ್ತರಲ್ಲಿ ಯಾವುದೇ ಗೊಂದಲವಿದ್ದರು ಚುನಾವಣೆ ನಂತರದಲ್ಲಿ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡೋಣ ಎಂದರು.
ಕಾAಗ್ರೆಸ್ ವಕ್ತಾರÀ ಟಿ.ಪಿ. ರಮೇಶ್ ಮಾತನಾಡಿ, ೨೦ ವರ್ಷಗಳಿಂದ ಪಕ್ಷದ ಶಾಸಕರಿಲ್ಲದೆ ಅಭಿವೃದ್ಧಿ ಕುಂಠಿತಗೊAಡಿತ್ತು. ಆದರೆ ಇದೀಗ ಎರಡು ಕ್ಷೇತ್ರದಲ್ಲಿ ಕಾರ್ಯಕರ್ತರ ಸಂಘಟಿತ ಹೋರಾಟ ಶ್ರಮದಿಂದ ಪಕ್ಷದ ಶಾಸಕರು ಆಯ್ಕೆಗೊಂಡಿದ್ದಾರೆ. ಅದರಂತೆ ಲೋಕಸಭಾ ಕೊಡಗು-ಮೈಸೂರು ಕ್ಷೇತ್ರದ ಪಕ್ಷದ ಅಭ್ಯರ್ಥಿಯಾಗಿ ಎಂ. ಲಕ್ಷö್ಮಣ್ ಅವರನ್ನು ಪಕ್ಷ ಆಯ್ಕೆಗೊಳಿಸಿದೆ. ಅಭ್ಯರ್ಥಿಯನ್ನು ಲೋಕಸಭೆಗೆ ಆಯ್ಕೆಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಮಾತನಾಡಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಅರುಣ್ ಮಾಚಯ್ಯ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಜಿ ಪೂಣಚ್ಚ, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹನೀಫ್ ಪಿ.ಎ., ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೊಳುಮಂಡ ರಫೀಕ್, ವಕೀಲ ರವಿಂದ್ರ ಕಾಮತ್ ಮತ್ತು ಜಿಲ್ಲಾ ಘಟಕದ ಮುಂಚೂಣಿ ನಾಯಕರು ಉಪಸ್ಥಿತರಿದ್ದರು.