ಚೆಯ್ಯಂಡಾಣೆ, ಏ. ೮: ಸಮಸ್ತ ಕೋರ್ಡಿನೇಷನ್ ಸಮಿತಿ ವತಿಯಿಂದ ಪೊಯಾಪಳ್ಳಿ ಮುಸ್ಲಿಂ ಜಮಾಅತ್ ಎಡಪಾಲ ಇದರ ಅಧೀನದಲ್ಲಿ ಮಜ್ಲಿಸುನ್ನೂರ್ ಹಾಗೂ ಇಫ್ತಾರ್ ಕೂಟ ವಿಜೃಂಭಣೆಯಿAದ ನಡೆಯಿತು.
ಅಂಡತ್‌ಮಾನಿ ದರ್ಗಾ ಝಿಯಾರತ್‌ಗೆ ಕೊಡಗು ಜಿಲ್ಲಾ ನಾಇಬ್ ಖಾಝಿ ಹಾಗೂ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಶೈಖುನಾ ಅಬ್ದುಲ್ಲಾ ಫೈಝಿ ನೇತೃತ್ವ ವಹಿಸಿದ್ದರು.
ಎಸ್.ಕೆ.ಎಸ್.ಎಸ್.ಎಫ್. ಮತ್ತು ಎಸ್.ವೈ.ಎಸ್. ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮವು ಎಡಪಾಲ ಜುಮಾ ಮಸೀದಿ ಆವರಣದಲ್ಲಿ ಮಜ್ಲಿಸುನ್ನೂರ್ ಅಧ್ಯಾತ್ಮಿಕ ಮಜ್ಲಿಸ್ ಅನ್ನು ಮುದರ್ರಿಸ್ ನಿಝಾರ್ ಫೈಝಿ ನೆರವೇರಿಸಿದರು.
ಪೊಯಾಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಯು. ಶಾಫಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದ ಉದ್ಘಾಟನೆಯನ್ನು ಶೈಖುನಾ ಅಬ್ದುಲ್ಲಾ ಫೈಝಿ ನೆರವೇರಿಸಿದರು. ಈ ಸಂದರ್ಭ ವಿವಿಧ ಸಂಸ್ಥೆಗಳಿAದ ಪದವಿ ಬಿರುದನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಂಜೆ ೪ ಗಂಟೆಗೆ ಕೇರಳದ ಪ್ರಸಿದ್ಧ ವಾಗ್ಮಿ ಯು.ಕೆ.ಹನೀಫ್ ನಿಝಾಮಿ ಕಾಸರಗೋಡು ಮುಖ್ಯ ಪ್ರಭಾಷಣ ನಡೆಸಿದರು. ನೆರೆದಿದ್ದ ಸಹಸ್ರಾರು ಜನರು ಸಾಮೂಹಿಕ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ನೇತಾರರು ಉಪಸ್ಥಿತರಿದ್ದರು. ಸ್ವಾಗತವನ್ನು ಹನೀಫಾ ಫೈಝಿ ನಿರ್ವಹಿಸಿದರೆ, ಸಿನಾನ್ ಶರಫಿ ಹಾಗೂ ಸಲೀಂ ಫೈಝಿ ಕಾರ್ಯಕ್ರಮವನ್ನು ನಿರೂಪಿಸಿದರು.