ಮಡಿಕೇರಿ, ಏ. ೮: ಲೋಕಸಭಾ ಚುನಾವಣಾ ಕಾವು ಹೆಚ್ಚುತ್ತಲೇ ಇವೆ. ಕರ್ನಾಟಕದ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದಾಗಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವು ಇಡೀ ಭಾರತದ ಗಮನಸೆಳೆದಿವೆ.

ಎನ್.ಡಿ.ಎ ಅಭ್ಯರ್ಥಿಯಾಗಿ ಯದುವೀರ ಶ್ರೀಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಕಾಂಗ್ರೆಸ್ ಪಕ್ಷದಿಂದ ಎಂ. ಲಕ್ಷö್ಮಣ್ ಗೌಡ ಅವರು ನಾಮಪತ್ರ ಸಲ್ಲಿಸಿ ಮತಬೇಟೆಗೆ ಇಳಿದಿದ್ದಾರೆ.

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕಳೆದ ಎರಡು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹಾಲಿ ಸಂಸದ ಪ್ರತಾಪ್ ಸಿಂಹ ಗೆಲುವು ಸಾಧಿಸಲು ಪ್ರಮುಖ ಪಾತ್ರವಹಿಸಿದ್ದು ಕೊಡಗಿನ ಮತದಾರರು.

೨೦೧೪ ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಡಗೂರು ಎಚ್.ವಿಶ್ವನಾಥ್ ಮೈಸೂರಿನ ಆರು ವಿಧಾನಸಭಾ ಕ್ಷೇತ್ರಗಳಿಂದ ೧೦ ಸಾವಿರ ಮತಗಳ ಮುನ್ನಡೆ ಪಡೆದಿದ್ದರು.

ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಿಂದ ಪ್ರತಾಪ್ ಸಿಂಹ ಅವರು ೪೨ ಸಾವಿರ ಮತಗಳ ಅಂತರದಿAದ ಮುನ್ನಡೆ ಪಡೆದು ೩೨ ಸಾವಿರ ಮತಗಳ ಅಂತರದಿAದ ಗೆದ್ದಿತು. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಬಿಜೆಪಿ ತನ್ನ ವಶಪಡಿಸಿಕೊಳ್ಳಲು ಮತ್ತು ಪ್ರತಾಪ್ ಸಿಂಹ ಅವರು ಮೊದಲ ಬಾರಿ ಸಂಸತ್ ಪ್ರವೇಶಿಸಲು ಕಾರಣ ಕೊಡಗಿನ ಮತದಾರರು.

೨೦೧೯ ರಲ್ಲಿ ಕೂಡ ಕೊಡಗಿನ ಮತದಾರರು ಕೂಡ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿಯ ಕೈ ಹಿಡಿದಿತ್ತು.

ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರ ಸೇರಿ ಪ್ರತಾಪ್ ಸಿಂಹ ಅವರು ೮೫ ಸಾವಿರ ಮತಗಳ ಮುನ್ನಡೆ ಪಡೆದಿದ್ದರು. ಆದರೆ ಪ್ರತಾಪ್ ಸಿಂಹ ಅವರು ಕೊಡಗಿಗೆ ಎಷ್ಟರ ಮಟ್ಟಿಗೆ ಕೊಡುಗೆ ನೀಡಿದ್ದಾರೆ! ಎಂದು ಕಾಂಗ್ರೆಸ್ ಪಕ್ಷದವರು ಪ್ರಶ್ನಿಸುತ್ತಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಲ್ಲವೂ ವಿಭಿನ್ನವಾಗಿವೆ. ಕಳೆದ ಎರಡೂವರೆ ದಶಕಗಳ ಬಳಿಕ ಇದೇ ಮೊದಲ ಬಾರಿಗೆ ಕೊಡಗು ಜಿಲ್ಲೆಯಲ್ಲಿ ಶಾಸಕರನ್ನು ಕಳೆದುಕೊಂಡು ಬಿಜೆಪಿ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿವೆ.

ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕರಿದ್ದರು. ಆದರೆ ಈ ಬಾರಿ ಬಿಜೆಪಿಗೆ ಶಾಸಕರಿಲ್ಲ. ಕೊಡಗಿನ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರು ಗೆಲುವು ಸಾಧಿಸಿದ್ದಾರೆ. ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯೂ ಪ್ರತ್ಯೇಕ ವಿಚಾರಗಳಿಗೆ ನಡೆಯುವುದಾದರೂ ಕೂಡ ಈ ಬಾರಿ ಕೊಡಗು ಜಿಲ್ಲೆಯಲ್ಲಿ ಬಿಜೆಪಿಗೆ ಸುಲಭದಲ್ಲಿ ಮತಗಳಿಸುವುದು ಕಷ್ಟಸಾಧ್ಯ.

ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಶಾಸಕರನ್ನು ಕಳೆದುಕೊಂಡ ನಂತರ ಬಿಜೆಪಿಯಲ್ಲಿ ಜೋಶ್ ಕ್ಷೀಣಗೊಂಡಿದೆ.

ದಶಕಗಳ ಬಳಿಕ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರುಜೀವ ಬಂದಿದೆ. ಇದುವರೆಗೆ ಲೋಕಸಭಾ ಚುನಾವಣೆಯಲ್ಲಿ ಕಾಣದ ಉತ್ಸಾಹ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಕಂಡು ಬರುತ್ತಿವೆ.

ಮಡಿಕೇರಿ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ ಮತ್ತು ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಕ್ಷೇತ್ರದಾದ್ಯಂತ ಸಂಚಾರ ಮಾಡಿ ಕಾರ್ಯಕರ್ತರಿಗೆ ಹುರಿದುಂಬಿಸುತ್ತಿದ್ದಾರೆ.

ಕಾAಗ್ರೆಸ್ ಕಾರ್ಯಕರ್ತರಲ್ಲಿ ಕಾಣುತ್ತಿರುವ ಜೋಶ್ ಬಿಜೆಪಿಯಲ್ಲಿ ಕಾಣುತ್ತಿಲ್ಲ.

ಕೊಡಗು ಜಿಲ್ಲೆಯಲ್ಲಿ ಬಿಜೆಪಿ ಮಂಕಾದAತೇ ಕಾಣುತ್ತಿವೆ. ಮೈಸೂರು ಭಾಗದಲ್ಲಿ ರಾಜವಂಶಸ್ಥರ ಕುಡಿ ಯದುವೀರ ಒಡೆಯರ್ ಅವರಿಗೆ ಅಪಾರ ಗೌರವ ಮತ್ತು ರಾಜವಂಶಸ್ಥ ಎಂಬ ಭಾವನಾತ್ಮಕ ವಿಷಯಗಳಿಂದ ಮತ ಬರುವ ಸಾಧ್ಯತೆಗಳಿವೆ. ಆದರೆ ಕೊಡಗು ಜಿಲ್ಲೆಯಲ್ಲಿ ರಾಜವಂಶಸ್ಥ ಎಂಬ ಲೇಬಲ್ ವರ್ಕೌಟ್ ಆಗುವುದು ಅನುಮಾನ. ಕೊಡಗಿನಲ್ಲಿ ಬಿಜೆಪಿ ಕಳೆದ ಬಾರಿಯ ದೊಡ್ಡ ಅಂತರದ ಮುನ್ನಡೆ ಪಡೆಯುವುದು ಅನುಮಾನ. ಕೊಡಗು ಕೈ ಕೊಟ್ಟರೆ ಬಿಜೆಪಿಗೆ ಸೋಲು ಆತಂಕವೂ ಇದೆ. ಕೊಡಗು ಜಿಲ್ಲೆಯ ಎರಡು ಕ್ಷೇತ್ರದಲ್ಲಿ ಅಪಾರ ಸಂಖ್ಯೆಯಲ್ಲಿ ಮೋದಿ ಅಭಿಮಾನಿಗಳ ಮತ್ತು ಹಿಂದುತ್ವ ಕಾರ್ಯಕರ್ತರು ಇರುವುದು ಬಿಜೆಪಿಗೆ ಆಸರೆ. ಅದಲ್ಲದೇ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಕೂಡ ಮೋದಿ ಅಭಿಮಾನಿಗಳು ಇರುವುದು ಸುಳ್ಳಲ್ಲ.

ಜಿಲ್ಲೆಯ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿಯೊಂದಿಗೆ ಸಮಬಲ ಹೋರಾಟ ಸಾಧಿಸಿ, ಬಿಜೆಪಿ ಮುನ್ನಡೆ ಸಾಧಿಸದಂತೆ ಕಾಂಗ್ರೆಸ್ ಪ್ಲ್ಯಾನ್ ರೂಪಿಸಿಕೊಂಡಿದ್ದಾರೆ.

ಕಾAಗ್ರೆಸ್ ಶಾಸಕದ್ವಯರಿಗೆ ಕಾಂಗ್ರೆಸ್ ಅಭ್ಯರ್ಥಿಗೆ ವೋಟ್ ಲೀಡ್ ತಂದುಕೊಡುವುದು ಅನಿವಾರ್ಯವಾಗಿದೆ.

ಕೊಡಗು ಕಾಂಗ್ರೆಸ್‌ಗೆ ಕೈ ಕೊಟ್ಟರೂ ಕೂಡ ಸೋಲು ಖಚಿತ. ಕಾಂಗ್ರೆಸ್ ಕೊಡಗಿನಲ್ಲಿ ಮುನ್ನಡೆ ಪಡೆಯದಿದ್ದರೆ, ಸರ್ಕಾರದಲ್ಲಿ ಶಾಸಕದ್ವಯರ ಪ್ರಭಾವ ಕೂಡ ತಗ್ಗುವ ಸಾಧ್ಯತೆಗಳಿವೆ.

ಕೊಡಗಿನಲ್ಲಿ ಬಿಜೆಪಿಗಿಲ್ಲ ಜೆಡಿಎಸ್ ಬಲ!

ಮೈಸೂರು ಭಾಗದಲ್ಲಿ ಬಿಜೆಪಿಗೆ ಇಬ್ಬರು ಜೆಡಿಎಸ್ ಶಾಸಕರ ಬಲ ಮತ್ತು ಜೆಡಿಎಸ್ ನಾಯಕರ ದೊಡ್ಡ ಶಕ್ತಿಯೇ ಇದೆ. ಆದರೆ ಕೊಡಗು ಜಿಲ್ಲೆಯಲ್ಲಿ ಬಿಜೆಪಿಗೆ, ಜೆಡಿಎಸ್ ಕಾರ್ಯಕರ್ತರ ಬಲವಿಲ್ಲ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಸ್ತಿತ್ವವನ್ನು ಕಳೆದುಕೊಂಡಿರುವ ಜೆಡಿಎಸ್ ಪಕ್ಷದ ಕಾರ್ಯಕರ್ತರು ಬಹುತೇಕರು ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ.

ಇತ್ತೀಚಿಗೆ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಮತ್ತು ಮಾಜಿ ಶಾಸಕ ಸಾ.ರಾ ಮಹೇಶ್ ಅವರ ನೇತೃತ್ವದಲ್ಲಿ ಮಡಿಕೇರಿಯಲ್ಲಿ ನಡೆದ ಸಭೆಯಲ್ಲಿ ಜೆಡಿಎಸ್ ನಾಯಕರು ಅಧ್ಯಕ್ಷ ಸ್ಥಾನಕ್ಕೆ ಗುದ್ದಾಟ ನಡೆಸಿದ್ದರು. ಕಾರ್ಯಕರ್ತರಿಲ್ಲದ ಜೆಡಿಎಸ್ ಪಕ್ಷದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿಯೇನು ಕಡಿಮೆಯಿಲ್ಲ.

ಕೇವಲ ೨೦ ನಾಯಕರು ಮಾತ್ರ ಜೆಡಿಎಸ್ ಪಕ್ಷದಲ್ಲಿ ಉಳಿದಿದ್ದಾರೆ. ಅಲ್ಪಸಂಖ್ಯಾತರು ಸಂಪೂರ್ಣ ಜೆಡಿಎಸ್ ನಿಂದ ದೂರವಾಗಿದ್ದಾರೆ. ಜೆಡಿಎಸ್ ಪಕ್ಷದಲ್ಲಿ ಉಳಿದಿರುವ ನಾಯಕರಿಗೆ ವೈಯಕ್ತಿಕವಾಗಿ ಪಕ್ಷವನ್ನು ಕಟ್ಟುವ ವರ್ಚಸ್ಸಿಲ್ಲ. ಪ್ರಭಾವಿ ನಾಯಕರ ಯಾರು ಕೂಡ ಜೆಡಿಎಸ್ ಪಕ್ಷದಲ್ಲಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ನಾಪಂಡ ಮುತ್ತಪ್ಪ ಚುನಾವಣೆಯ ಬಳಿಕ ಜೆಡಿಎಸ್‌ನೊಂದಿಗೆ ದೂರವಾಗಿದ್ದಾರೆ.

ಮಾಜಿ ಜಿಲ್ಲಾಧ್ಯಕ್ಷ ಕೆ.ಎಂ ಗಣೇಶ್ ಅವರು ಇತ್ತೀಚಿಗೆ ಪತ್ರಿಕಾಗೋಷ್ಠಿಯಲ್ಲಿ ನಾನು ಜೆಡಿಎಸ್ ಕಾರ್ಯಕರ್ತ ಎಂದು ಹೇಳಿದ್ದರು. ಆದರೆ ಇವರಿಬ್ಬರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವ ಸಾಧ್ಯತೆ ವಿರಳ. ಕೊಡಗು ಜಿಲ್ಲೆಯಲ್ಲಿ ಬಿಜೆಪಿಗೆ ಜೆಡಿಎಸ್ ಬಲವಿಲ್ಲದೇ ಏಕಾಂಗಿಯಾಗಿ ಕಾಂಗ್ರೆಸ್ ವಿರುದ್ಧ ಚುನಾವಣಾ ಪ್ರಚಾರಕ್ಕೆ ಇಳಿಯಬೇಕು. ಕಾಂಗ್ರೆಸ್ ಪಕ್ಷಕ್ಕೆ ಕೊಡಗಿನಲ್ಲಿ ಇಬ್ಬರು ಯುವ ಶಾಸಕರು ಮತ್ತು ಸರ್ಕಾರದ ಗ್ಯಾರಂಟಿ ಬಲ ಇದ್ದರೆ ಬಿಜೆಪಿಗೆ ಮೋದಿಯೇ ಬಲ. ಸೋಲು-ಗೆಲುವು ನಿರ್ಧರಿಸುವ ಕೊಡಗು ಜಿಲ್ಲೆಯಲ್ಲಿ ಯಾರ ಕೈ ಮೇಲಾಗಲಿದೆ! ಯಾರ ಕೈ ಕೆಳಗಾಗಲಿದೆ ಎಂದು ಜೂನ್ ೪ ವರೆಗೂ ಕಾಯಬೇಕಾಗಿದೆ.

- ಕೆ.ಎಂ. ಇಸ್ಮಾಯಿಲ್ ಕಂಡಕರೆ