ವೀರಾಜಪೇಟೆ, ಏ. ೮: ಇತ್ತೀಚೆಗೆ ಬುಡಬುಡಕಿಗಳ ರೀತಿ ಬಂದ ವ್ಯಕ್ತಿಯೋರ್ವ ಮಂಕು ಬರಿಸಿ ಹಣ ಪಡೆದುಕೊಂಡ ಘಟನೆ ಪಟ್ಟಣದ ತೆಲುಗರ ಬೀದಿಯಲ್ಲಿ ನಡೆದಿತ್ತು. ಮರುದಿನವೇ ಮಂಕು ಬರಿಸಿ ಹಣ ಪಡೆದುಕೊಂಡು ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಪತ್ತೆಹಚ್ಚಿದ ಹಣ ಕಳೆದುಕೊಂಡಾತನ ಸಹೋದರ ಕಳೆದುಕೊಂಡಿದ್ದ ಹಣ ಹಿಂಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ತೆಲುಗರ ಬೀದಿ ನಿವಾಸಿ ಗಣೇಶ್ ರಾವ್ ಎಂಬವರು ಹಣ ಕಳೆದುಕೊಂಡ ವ್ಯಕ್ತಿ. ವೀರಾಜಪೇಟೆ ನಗರದ ತೆಲುಗರ ಬೀದಿಯ ಶ್ರೀ ಮಾರಿಯಮ್ಮ ದೇವಾಲಯದ ಮುಂಭಾಗದಲ್ಲಿ ಆಶ್ರಯ ಪಡೆದಿರುವ ತಮಿಳುನಾಡು ವೆಲ್ಲೂರು ಮೂಲದವರು ಈ ಕೃತ್ಯವೆಸಗಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.
ಏನಿದು ಘಟನೆ
ಗಣೇಶ್ ಮನೆಯ ಮುಂಭಾಗ ನಿಂತಿದ್ದ ಸಂದರ್ಭ ನಿನ್ನ ಮನೆಯಲ್ಲಿ ಹಾಗೂ ಮಾನಸಿಕ ಸಮಸ್ಯೆ ಇದೆ. ಕುಟುಂಬದಲ್ಲಿ ವೈರತ್ವವಿದೆ. ದೇವರ ಬಲ ಬರುವಂತೆ ಮಾಡುತ್ತೇನೆ ಎಂದು ಬುಡಬುಡಕಿ ರೀತಿ ಬಂದ ವ್ಯಕ್ತಿ ರೂ. ೫೦ ಪಡೆದು ಹೋಗುತ್ತಾನೆ. ಗಣೇಶನನ್ನು ಹಿಂಬಾಲಿಸಿಕೊAಡು ಮನೆಗೆ ಆಗಮಿಸಿದ ವ್ಯಕ್ತಿ ಚಾಪೆ ಹಾಕಿ ಕುಳಿತುಕೊಳ್ಳುತ್ತಾನೆ. ಹೋಗು ಎಂದು ಹೇಳಿದರೂ ತೆರಳದೆ ಅಲ್ಲಿಯೇ ಇರುತ್ತಾನೆ. ಕೆಲ ಸಮಯದ ನಂತರ ಗಣೇಶ್ ತಾಯಿ ಸ್ಥಳಕ್ಕೆ ಬಂದಾಗ ವಿಚಲಿತನಾದ ವ್ಯಕ್ತಿ ಮಂಕುಬೂದಿಯನ್ನು ಗಣೇಶ್ನ ಹಣೆಗೆ ಹಚ್ಚಿದ್ದಾನೆ. ಕೆಲವು ಸಮಯದ ನಂತರ ಹಣ ಕೇಳಿದ್ದಾನೆ. ತಕ್ಷಣ ಮೊಬೈಲ್ ಮೂಲಕ ಖಾತೆಯಲ್ಲಿದ್ದ ರೂ. ೮ ಸಾವಿರ ಹಣ ಮತ್ತು ಪತ್ನಿ ಖಾತೆಯಲ್ಲಿದ್ದ ರೂ. ೨ ಸಾವಿರವನ್ನು ಆತನ ಖಾತೆಗೆ ಗಣೇಶ್ ವರ್ಗಾವಣೆ ಮಾಡುತ್ತಾರೆ. ನಂತರ ಒಂದು ಕೆ.ಜಿ. ಮಾಂಸ, ಒಂದು ಕೆ.ಜಿ. ಅಕ್ಕಿ, ಮತ್ತು ಸೀರೆ ಪಡೆದುಕೊಂಡು ಸ್ಥಳದಿಂದ ವ್ಯಕ್ತಿಯು ತೆರಳುತ್ತಾನೆ.
ಘಟನೆ ಕಳೆದು ಅಲ್ಪ ಸಮಯದಲ್ಲಿ ಗಣೇಶ್ ತನ್ನ ಪತ್ನಿ ಮತ್ತು ಸಂಬAಧಿಕರಿಗೆ ತಿಳಿಸುತ್ತಾರೆ. ಈ ವಿಚಾರ ಗಣೇಶ್ ಸಹೋದರ ರುಕೇಶ್ಗೆ ತಿಳಿದು ಬಂದಿದೆ. ಕೆಲ ದಿನಗಳ ಅಂತರದಲ್ಲಿ ಬುಡಬುಡಕಿ ರೀತಿಯಲ್ಲಿ ಬಂದ ವ್ಯಕ್ತಿ ರುಕೇಶ್ ಕಣ್ಣಿಗೆ ಬಿದ್ದಿದ್ದಾನೆ. ಆತನನ್ನು ಮನೆಗೆ ಕರೆದೊಯ್ದು ಜಾತಕ ಹೇಳುವಂತೆ ಕೇಳಿ ನಂತರ ಆತನಿಂದ ಕಳೆದುಕೊಂಡ ಹಣವನ್ನು ಹಿಂಪಡೆಯಲಾಗಿದೆ. ಈ ರೀತಿ ವ್ಯಕ್ತಿಗಳ ಮಾತಿಗೆ ಮರಳಾಗುವ ಮುನ್ನ ಜನತೆ ಎಚ್ಚರವಹಿಸಬೇಕಾಗಿದೆ. ಪೊಲೀಸ್ ಇಲಾಖೆ ಈ ಕುರಿತು ಕ್ರಮ ಕೈಗೊಳ್ಳಬೇಕಾಗಿದೆ. - ಕಿಶೋರ್ ಕುಮಾರ್