ಸೋಮವಾರಪೇಟೆ,ಏ.೮: ಸಮೀಪದ ಹಾನಗಲ್ಲು ಗ್ರಾಮದ ಸಿದ್ಧಾರ್ಥ ಬಡಾವಣೆಯ ಶ್ರೀ ಚೌಡೇಶ್ವರಿ(ಮಸಣಿಕಮ್ಮ) ದೇವಸ್ಥಾನದ ಉದ್ಘಾಟನಾ ಕಾರ್ಯಕ್ರಮ ತಾ. ೧೧ ಮತ್ತು ೧೨ರಂದು ನಡೆಯಲಿದೆ.
ತಾ. ೧೧ರಂದು ಸಂಜೆ ೪ ಗಂಟೆಯಿAದ ಗಣಪತಿ ಹೋಮ, ಶುದ್ಧ ಪುಣ್ಯಾಹ ವಾಸ್ತು ಹೋಮ, ರಕ್ಷೆÆÃಘ್ನ ಹೋಮ, ಜಲಾಧಿವಾಸ, ಕ್ಷೀರಾಧಿವಾಸ, ನಾಣ್ಯಾಧಿವಾಸ, ಧಾನ್ಯಾಧಿವಾಸ ಹಾಗೂ ಶಯ್ಯಾಧಿವಾಸ ನಡೆಯಲಿದೆ.
ತಾ. ೧೨ರಂದು ಬೆಳಿಗ್ಗೆ ೮ರಿಂದ ಗಂಗೆಸ್ನಾನ, ೯ಕ್ಕೆ ಪ್ರತಿಷ್ಠಾಪನಾ ಹೋಮ, ಕಲಶ ಅಭಿಷೇಕ, ಅಲಂಕಾರ ಹಾಗೂ ಮಹಾಮಂಗಳಾರತಿ ನಡೆಯಲಿದೆ. ಮಧ್ಯಾಹ್ನ ಅನ್ನದಾನ ಕಾರ್ಯಕ್ರಮ ನಡೆಯುವುದು ಎಂದು ದೇವಾಲಯ ಸಮಿತಿ ಅಧ್ಯಕ್ಷ ವಿಜಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.