ಸಿದ್ದಾಪುರ, ಏ. ೭: ಸಿದ್ದಾಪುರದ ಕಂಬೀರAಡ ಎ. ನಂಜಪ್ಪ ಶ್ರೀ ಚಾಮುಂಡೇಶ್ವರಿ ಟ್ರಸ್ಟ್ ವತಿಯಿಂದ ಶ್ರೀ ಚಾಮುಂಡೇಶ್ವರಿ ದೇವಾಲಯದ ವಾರ್ಷಿಕೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ತಾ. ೧೯ ರಂದು ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.
ತಾ. ೧೯ ರಂದು ಆಸಾನ್ ಸದ್ಗುರು ಶ್ರೀ - ಲಾ - ಶ್ರೀ ಪಂಡ್ರಿಮಲೈ ಶಕ್ತಿ ವಡಿವೇಲ್ ಸ್ವಾಮಿಗಳ ಉಪಸ್ಥಿತಿಯಲ್ಲಿ ಹಾಗೂ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಲಿದೆ. ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ, ಬಿಂಬಶುದ್ಧಿ, ಶುದ್ಧ ಕಲಶ, ೭.೩೦ಕ್ಕೆ ಉಷಾಪೂಜೆ, ೯ ಗಂಟೆಗೆ ಚಂಡಿಕಾಯಾಗ ನಡೆಯಲಿದೆ.
೯.೩೦ಕ್ಕೆ ಭಂಡಾರ ತರುವುದು ಮಧ್ಯಾಹ್ನ ೧ ಗಂಟೆಗೆ ಚಂಡಿಕಾಯಾಗದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ೬ ಗಂಟೆಗೆ ತಾಯಂಬಕ ನಂತರ ರಾತ್ರಿ ೭.೩೦ಕ್ಕೆ ವಿದುಷಿ ಜಲಜಾ ನಾಗರಾಜ್ ನೃತ್ಯಕಲಾ ಶಾಲಾ ವಿದ್ಯಾರ್ಥಿಗಳಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. ರಾತ್ರಿ ೯ ಗಂಟೆಗೆ ಶ್ರೀ ಚಾಮುಂಡೇಶ್ವರಿ ದೇವರ ದರ್ಶನ ಮತ್ತು ನೃತ್ಯ, ಪ್ರಸಾದ ವಿತರಣೆ, ಸಿಡಿಮದ್ದು ಪ್ರದರ್ಶನ, ಮಂತ್ರಾಕ್ಷತೆ ನಡೆಯಲಿದೆ.