ಮಡಿಕೇರಿ, ಏ. ೭: ಮೂಲತಃ ಜಿಲ್ಲೆಯವರಾದ ಚಿತ್ರ ನಟಿ, ಸಮಾಜ ಸೇವೆಯಲ್ಲೂ ಗುರುತಿಸಿಕೊಂಡಿರುವ ಹರ್ಷಿಕಾ ಪೂಣಚ್ಚ ಅವರಿಗೆ ಸುಧಾ ವೆಂಚರ್ಸ್ ಸಂಸ್ಥೆಯಿAದ ಶೀ ರೋ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅವರು ಭುವನಂ ಫೌಂಡೇಶನ್ ಮೂಲಕ ಈ ಹಿಂದೆ ಮಾಡಿರುವ ಸಮಾಜಮುಖಿ ಕೆಲಸವನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ. ಕೋವಿಡ್ ಸಂದರ್ಭದಲ್ಲಿ ಇವರು ರಾಜ್ಯಾದ್ಯಂತÀ ಸಂಚರಿಸಿ ಹಲವಾರು ಮಂದಿಗೆ ನೆರವಾಗಿದ್ದರು. ಕೊಡಗು ಹಾಗೂ ಉತ್ತರ ೩ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕರ್ನಾಟಕದಲ್ಲಿ ಈ ಹಿಂದೆ ಉಂಟಾಗಿದ್ದ ಪ್ರವಾಹ ಸಂದರ್ಭದಲ್ಲೂ ಜನತೆಗೆ ಸೇವೆ ಒದಗಿಸಿದ್ದರು. ಇದನ್ನು ಪರಿಗಣಿಸಿ ಜನತೆಯೇ ಓಟ್ ಮಾಡುವ ಮೂಲಕ ಈ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಿದ್ದಾರೆ. ಶೀ ರೋ ಅಂದರೆ ಶೀ ಈಸ್ ದ ಹೀರೋ ಎಂಬ ಅರ್ಥ ಎಂದು ಹರ್ಷಿಕಾ ಹೇಳಿದ್ದಾರೆ. ಇತ್ತೀಚೆಗೆ ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಈ ಪ್ರಶಸ್ತಿ ಪ್ರದಾನ ಮಾಡಿದರು.