ಮಡಿಕೇರಿ, ಏ. ೮: ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧೆ ಬಯಸಿ ಉಮೇದುವಾರಿಕೆ ಸಲ್ಲಿಸಿರುವ ಅಭ್ಯರ್ಥಿಗಳ ನಾಮಪತ್ರ ಹಿಂಪಡೆಯಲು ಅಂತಿಮ ದಿನವಾಗಿದ್ದ ಇಂದು ಆರು ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ ಕಣದಲ್ಲಿ ೧೮ ಅಭ್ಯರ್ಥಿಗಳು ಉಳಿದಿದ್ದಾರೆ.
ಇಂದು ಪಕ್ಷೇತರ ಅಭ್ಯರ್ಥಿಗಳಾದ ಆರ್. ಮಹೇಶ್, ಎಸ್. ದೊರೆಸ್ವಾಮಿ ನಾಯಕ, ರಾಜಣ್ಣ, ಶಿವನಂಜಯ್ಯ, ಶ್ರೀನಿವಾಸ್ ಬೋಗಾದಿ ಹಾಗೂ ಸಣ್ಣ ನಾಯಕ ಇವರುಗಳು ನಾಮಪತ್ರ ವಾಪಸ್ ಪಡೆದಿದ್ದಾರೆ.
ಅಂತಿಮ ಕಣದಲ್ಲಿ ಬಿಜೆಪಿಯಿಂದ ಯದುವೀರ್ ಒಡೆಯರ್, ಕಾಂಗ್ರೆಸ್ನಿAದ ಎಂ. ಲಕ್ಷö್ಮಣ್, ಸುನಿಲ್ ಟಿ. ಆರ್ (ಸೋಶಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ಪಕ್ಷ), ಎಂ.ಎಸ್ ಪ್ರವೀಣ್ (ಕರ್ನಾಟಕ ರಾಷ್ಟç ಸಮಿತಿ), ಎ.ಎಸ್ ಸತೀಶ್ (ಅಖಿಲ ಭಾರತ ಹಿಂದೂ ಮಹಾಸಭಾ), ಪಿ.ಎಸ್. ಯಡಿಯೂರಪ್ಪ (ಪಕ್ಷೇತರ), ಹೆಚ್.ಕೆ. ಕೃಷ್ಣ (ಕರುನಾಡು ಪಾರ್ಟಿ), ಲೀಲಾವತಿ ಜೆ.ಎಸ್. (ಉತ್ತಮ ಪ್ರಜಾಕೀಯ ಪಕ್ಷ), ರಂಗಸ್ವಾಮಿ ಎಂ. (ಪಕ್ಷೇತರ), ರಾಮಮೂರ್ತಿ ಎಂ.(ಪಕ್ಷೇತರ), ಹರೀಶ್ ಎನ್. (ಸೋಶಿಯಲಿಸ್ಟ್ ಪಾರ್ಟಿ), ಕ್ರಿಸ್ಟೋಫರ್ ರಾಜಕುಮಾರ್ (ಇಂಡಿಯನ್ ಮೂವ್ಮೆಂಟ್ ಪಾರ್ಟಿ), ಪಿ ಕೆ ದರ್ಶನ್ ಶೌರಿ (ಪಕ್ಷೇತರ ), ರಾಜು (ಪಕ್ಷೇತರ), ಹೆಚ್ .ಎಂ. ನಂಜುAಡಸ್ವಾಮಿ (ಸಮಾಜವಾದಿ ಜನತಾ ಪಾರ್ಟಿ -ಕರ್ನಾಟಕ), ಎನ್. ಅಂಬರೀಷ್ (ಕರ್ನಾಟಕ ಜನತಾ ಪಕ್ಷ ), ಎ.ಜಿ. ರಾಮಚಂದ್ರ ರಾವ್ (ಜಾತ್ಯತೀತ ಪ್ರಜಾಪ್ರಭುತ್ವ ಕಾಂಗ್ರೆಸ್), ಅಂಬೇಡ್ಕರ್ ಸಿ.ಜೆ. (ಪಕ್ಷೇತರ )ಇದ್ದಾರೆ.