ಕುಶಾಲನಗರ, ಏ. ೭: ಪಟ್ಟಣದ ಹೃದಯ ಭಾಗದಲ್ಲಿ ಗುರುವಾರ ಸಂಜೆ ಯುವಕನನ್ನು ಅಪಹರಿಸಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಮಿಂಚಿನ ಕಾರ್ಯಾಚರಣೆ ನಡೆಸುವ ಮೂಲಕ ಒಟ್ಟು ೮ ಆರೋಪಿಗಳನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೈಸೂರು ಮೂಲದ ಯಾಸಿನ್ (೨೧), ರುಕ್ಸಾನ (೨೩), ಸಹಬಾಜ್ (೨೮), ಅಬ್ಸಲ್ (೨೧), ಸುಹೇಲ್ ಅಹಮ್ಮದ್ (೩೦), ಫೈಝಲ್ ಖಾನ್ (೨೩), ಮುದಾಸೀರ್ (೨೪), ಪಿರಿಯಾಪಟ್ಟಣದ ಯಾಸಿನ್ (೨೩) ಬಂಧಿತ ಆರೋಪಿಗಳು.
(ಮೊದಲ ಪುಟದಿಂದ) ಮೈಸೂರಿನ ಗೌಸಿಯ ನಗರದ ಪಿಳ್ಳೆöÊ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಮೈಸೂರು ನಗರದ ಶ್ರೀರಾಮಪುರದಲ್ಲಿ ನೆಲೆಸಿದ್ದ ಸೋಮವಾರಪೇಟೆ ಮೂಲದ ಮಹಿಳೆ ಮೂಲಕ ಖಾಸಗಿ ಬಸ್ ನಿರ್ವಾಹಕ ಹೇಮಂತ್ ಎಂಬಾತನನ್ನು ಸಂಪರ್ಕಿಸಿದ ಮೈಸೂರಿನ ಗ್ಯಾಂಗ್ ಈ ಕೃತ್ಯ ನಡೆಸಿದ್ದು, ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ತಿಳಿಸಿದ್ದಾರೆ.
ಕುಶಾಲನಗರ ಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಶಾಲನಗರದಲ್ಲಿ ಖಾಸಗಿ ಬಸ್ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ ಕಣಿವೆ ಬಸವನಹಳ್ಳಿ ಗ್ರಾಮದ ಹೇಮಂತ್ (೨೭) ನನ್ನು ಗುರುವಾರ ಸಂಜೆ ಮಹಿಳೆಯೋರ್ವಳ ಮೂಲಕ ಸಂಪರ್ಕಿಸಿ ಸಹಾಯದ ನೆಪದಲ್ಲಿ ಕುಶಾಲನಗರಕ್ಕೆ ಬರಮಾಡಿಕೊಂಡು ಮೈಸೂರು ಕಡೆಯಿಂದ ಬಂದ ಏಳು ಮಂದಿ ಆಗಂತುಕರು ಅಪಹರಣ ಮಾಡಿ ಹೇಮಂತ್ ಬಂದಿದ್ದ ಬೈಕನ್ನು ಆರೋಪಿಯೊಬ್ಬ ಚಾಲನೆ ಮಾಡಿ ಮೈಸೂರು ಕಡೆಗೆ ತೆಗೆದುಕೊಂಡು ಹೋಗಿದ್ದಾನೆ. ಅಪರಿಸಿದ ಸ್ಕೂಟಿ, ಮೈಸೂರಿನ ಉದಯಗಿರಿಯಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದರು.
ಆಗಂತುಕ ಮಹಿಳೆ ತನ್ನ ಸ್ಕೂಟಿಯಲ್ಲಿ ಸ್ಥಳದಿಂದ ಪರಾರಿಯಾಗಿದ್ದಾಳೆ. ಆಕೆಯ ಸ್ಕೂಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ಕೂಟಿಯಲ್ಲಿ ನೋಂದಣಿ ಸಂಖ್ಯೆ ಲಭ್ಯವಾಗಿಲ್ಲ ಈ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಹೇಮಂತ್ನನ್ನು ಆಗಂತುಕರು ತಾವು ಬಂದಿರುವ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ಕೂರಿಸಿ ಕೊಪ್ಪ ಮೂಲಕ ಹುಣಸೂರಿಗೆ ತೆರಳಿ ಅಜ್ಞಾತ ಪ್ರದೇಶ ಒಂದರಲ್ಲಿ ಹೇಮಂತ್ ಮೇಲೆ ಹಲ್ಲೆ ನಡೆಸಿ ಆತನಿಗೆ ಸೇರಿದ ಚಿನ್ನದ ಉಂಗುರ, ಸರ, ರೂ. ೪ ಸಾವಿರ ನಗದು, ಬೆಲೆಬಾಳುವ ಮೊಬೈಲ್ ಮತ್ತು ವಾಚ್ ದೋಚಿ ನಂತರ ರೂ. ೫ ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಪ್ರಕರಣದ ಹಿನ್ನೆಲೆ ತಿಳಿಸಿದರು.
ನಂತರ ಆತನನ್ನು ಹುಣಸೂರಿನ ಅಜ್ಞಾತ ಸ್ಥಳದಲ್ಲಿ ಬಿಟ್ಟು ಆರೋಪಿಗಳು ಮೈಸೂರು ಕಡೆಗೆ ಪರಾರಿಯಾಗಿದ್ದಾರೆ. ಬೆಳಿಗ್ಗೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ತನಗೆ ಆಗಿರುವ ವಂಚನೆ ಹಲ್ಲೆ, ದರೋಡೆ ಬಗ್ಗೆ ಹೇಮಂತ್ ಮಾಹಿತಿ ನೀಡಿದ್ದು ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ತಿಳಿಸಿದರು.
ತನಿಖಾ ತಂಡ ಆರೋಪಿಗಳ ಜಾಡು ಹಿಡಿದು ಮೈಸೂರು ಕಡೆಗೆ ತೆರಳಿದಾಗ ಆರೋಪಿಗಳ ಸುಳಿವು ದೊರೆತು ನಂತರ ಪ್ರಕರಣಕ್ಕೆ ಸಂಬAಧಿಸಿದAತೆ ಎಂಟು ಮಂದಿಯನ್ನು ವಶಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳಲಾಗಿದೆ. ಓರ್ವ ಆರೋಪಿ ನಾಪತ್ತೆಯಾಗಿದ್ದಾನೆ ಎಂದು ವಿವರಿಸಿದರು.
ಕೃತ್ಯಕ್ಕೆ ಬಳಸಿದ ಸ್ಕಾರ್ಪಿಯೊ ವಾಹನ, ದ್ವಿಚಕ್ರ ವಾಹನಗಳು, ದರೋಡೆ ಮಾಡಿದ ರೂ. ೧.೮೨ ಲಕ್ಷ ಮೌಲ್ಯದ ೩೦ ಗ್ರಾಂ ತೂಕದ ಚಿನ್ನಾಭರಣ, ಎರಡು ಮೊಬೈಲ್, ನಗದು ರೂ. ೫ ಸಾವಿರ, ಆರೋಪಿತರಿಗೆ ಸೇರಿದ ೭ ಮೊಬೈಲ್ ಸೇರಿದಂತೆ ೫.೯೭ ಲಕ್ಷ ರೂ ಮೌಲ್ಯದ ವಸ್ತುಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡು ಆರೋಪಿಗಳ ವಿರುದ್ಧ ಅಪಹರಣ ಮತ್ತು ದರೋಡೆ ಪ್ರಕರಣ ದಾಖಲಿಸಲಾಗಿದೆ ಎಂದು ರಾಮರಾಜನ್ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೆ.ಎಸ್. ಸುಂದರ್ ರಾಜ್ ಮಾರ್ಗದರ್ಶನ, ಡಿವೈಎಸ್ಪಿ ಗಂಗಾಧರಪ್ಪ ಮತ್ತು ಕುಶಾಲನಗರ ಪಟ್ಟಣ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕುಶಾಲನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಕಾಶಿನಾಥ್ ಬಗಲಿ, ಅಪರಾಧ ಪತ್ತೆ ವಿಭಾಗದ ಎಸ್.ಐ. ಪಿ.ಎಸ್. ಉಮಾ, ಸಿಬ್ಬಂದಿಗಳಾದ ಸುದೀಶ್, ರಂಜಿತ್, ಜಯಪ್ರಕಾಶ್, ಸಂದೀಪ್, ಪ್ರಕಾಶ್, ಉಮೇಶ್, ಸಮಂತ್, ಸಂದೇಶ್ ಪಾಲ್ಗೊಂಡಿದ್ದರು.
ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ತಂಡದ ಕಾರ್ಯಕ್ಷಮತೆಯನ್ನು ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಮೆಚ್ಚಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. - ಚಂದ್ರಮೋಹನ್