ಮಡಕೇರಿ, ಏ. ೮: ಪಾಡಿ ಶ್ರೀ ಇಗ್ಗುತಪ್ಪ ಸನ್ನಿಧಿಯಲ್ಲಿ ಇಂದು ಬೆಳಗ್ಗಿನ ಬ್ರಾಹ್ಮೀ ಮುಹೂರ್ತದಲ್ಲಿ ಮಳೆಗಾಗಿ ವಿಶೇಷ ಪೂಜೆ ನಡೆಸಲಾಯಿತು. ರುದ್ರ ಸೂಕ್ತ ಪಠಣದೊಂದಿಗೆ ಎಳನೀರು ಮತ್ತು ಕ್ಷೀರದ ಅಭಿಷೇಕವನ್ನು ಪ್ರಧಾನ ಅರ್ಚಕ ಕುಶಭಟ್ ಹಾಗೂ ಹೆಬ್ಬಾರ್ ಶ್ರೀಕಾಂತ್ ಮತ್ತಿತರರು ನೆರವೇರಿಸಿದರು. ಪಾಡಿ ಶ್ರೀ ಇಗ್ಗುತಪ್ಪ ಭಕ್ತಜನ ಸಂಘದಿAದ ಏರ್ಪಡಿಸಲಾಗಿದ್ದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಕೊಡಗಿನ ವಿವಿಧೆಡೆಗಳಿಂದ ಭಕ್ತಾದಿಗಳು ಆಗಮಿಸಿ ಪೂಜೆ ಮತ್ತು ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಭಕ್ತಜನ ಸಂಘದ ಅಧ್ಯಕ್ಷ ಪರದಂಡ ಸುಬ್ರಮಣಿ ಅವರು ಈ ಸಂದರ್ಭ ದೈವ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಇಂದು ಅಮಾವಾಸ್ಯೆಯ ಸೋಮವಾರದ ವಿಶೇಷ ದಿನವಾಗಿದ್ದು, ಈಶ್ವರನ ಅನುಗ್ರಹಕ್ಕಾಗಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು ಎಂದು ಪ್ರಾರ್ಥಿಸಿದ ಅವರ ಪ್ರಾರ್ಥನಾ
ಮಾತುಗಳು ಹೀಗಿವೆ.
(ಮೊದಲ ಪುಟದಿಂದ) ‘‘ಪಂಚಮಹಾಭೂತಗಳ ಅಧಿಪತಿಯಾದ ಈಶ್ವರನು ಶಾಂತನಾಗಿ ಬಿಸಿಲಿಗೆ ಬಾಯ್ಬಿಡುತ್ತಿರುವ ಭೂಮಿಗೆ ಮಳೆಯ ತಂಪನೆರೆದು ಅನುಗ್ರಹಿಸಲಿ. ಮಾನವರು ಮಾಡುವ ತಪ್ಪುಗಳನ್ನು ಕ್ಷಮಿಸಿ ಗ್ರಹಚಾರಗಳನ್ನು ನೀಗಿಸಿ ಸಂಕಷ್ಟಕ್ಕೆ ಒಳಗಾಗಿರುವ ಜನತೆಗೆ ಮಳೆಯ ರೂಪದಲ್ಲಿ ಹರಸಲಿ. ನಾಳೆಯಿಂದಲೇ ಮಳೆ ದೇವತೆ ಭುವಿಯನ್ನು ಸ್ಪರ್ಶಿಸಿ ಸುಭಿಕ್ಷಗೊಳಿಸಲಿ. ಶಕ್ತಿಯಾನುಸಾರ ಶ್ರೀ ಪಾಡಿ ಇಗ್ಗುತಪ್ಪನಿಗೆ ಪುಷ್ಪಾಲಂಕಾರ, ರುದ್ರಾಭಿಷೇಕ ಮತ್ತಿತರ ಪೂಜೆಗಳನ್ನು ಸಲ್ಲಿಸಿದ್ದು, ಈಶ್ವರ ಪ್ರಸನ್ನಗೊಳ್ಳಲಿ’’ ಎಂದು ಭಾವಪೂರ್ಣರಾಗಿ ಪ್ರಾರ್ಥಿಸಿದರು.
ಈ ಸಂದರ್ಭ ಭಕ್ತಜನ ಸಂಘದ ಉಪಾಧ್ಯಕ್ಷ ಕಲ್ಯಾಟಂಡ ರಾಜಾ ಅಪ್ಪಣ್ಣ, ಕಾರ್ಯದರ್ಶಿ ಬಟ್ಟೀರ ಚೋಂದಮ್ಮ ಮೇದಪ್ಪ, ಖಜಾಂಚಿ ಅಂಜಪರವAಡ ಕುಶಾಲಪ್ಪ, ನಿರ್ದೇಶಕರುಗಳಾದ ಪರದಂಡ ಸದಾ ನಾಣಯ್ಯ, ಕುಲ್ಲೇಟಿರ ಅರುಣ ಬೇಬ, ಅಲ್ಲಾರಂಡ ಸನ್ನು ಅಯ್ಯಪ್ಪ, ಕಲಿಯಂಡ ಗಣೇಶ, ಕೇಲೇಟಿರ ರಂಜನ್ ಅಪ್ಪಚ್ಚು, ಅನ್ನಡಿಯಂಡ ದಿಲೀಪ್ ಕುಮಾರ್, ಪಾಂಡAಡ ನರೇಶ್, ಸಂಘದ ಮಾಜಿ ಅಧ್ಯಕ್ಷ ಕಾಂಡAಡ ಜೋಯಪ್ಪ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ಪಾರುಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಪ್ಪ, ಕಂಬೇಯAಡ ಗಣೇಶ್, ಕಂಬೇಯAಡ ಬೊಳ್ಳಿಯಪ್ಪ, ಅಲ್ಲಾರಂಡ ಚೇತನ್ ಚಿಣ್ಣಪ್ಪ ಮೊದಲಾದವರು ಭಾಗವಹಿಸಿದ್ದರು.