ನಮಗೇಕೆ ಇತರರÀ ಉಸಾಬರಿ, ನಾವು ಚೆನ್ನಾಗಿದ್ದರೆ ಸಾಕು, ಪಕ್ಕದ ಮನೆಯವರು ಸಂಕಷ್ಟಕ್ಕೀಡಾದರೆ ನಾವೇಕೆ ತಲೆ ಕೆಡಿಸಿಕೊಳ್ಳಬೇಕು ಎಂದು ಬದುಕುವವರಿಗೆ ಪಕ್ಕದ ಮನೆಗೆ ಬೆಂಕಿ ಬಿದ್ದರೆ ನಮ್ಮ ಮನೆಗೂ ಹರಡುತ್ತದೆ ಎಂಬ ಅರಿವಿದ್ದರೆ ಸಾಕು.

ಇತ್ತೀಚೆಗೆ ಜಿಲ್ಲೆಯಲ್ಲಿ ರಾಜಕೀಯ ಸಮಾವೇಶವೊಂದರÀ ಸಂದರ್ಭ ಅನೇಕ ಧುರೀಣರ ಜೇಬಿಗೆ ಕತ್ತರಿ ಪ್ರಯೋಗಿಸಿ ಲಕ್ಷಾಂತರ ರೂ ಹಣ ದೋಚಿದ್ದ ೧೩ ಮಂದಿ ಖದೀಮರನ್ನು ಹೆಡೆಮುರಿ ಕಟ್ಟಿದ ಕುಶಾಲನಗರ ಹಾಗೂ ಕೊಡಗು ಜಿಲ್ಲಾ ಮಟ್ಟದ ಅಪರಾಧ ಪತ್ತೆ ದಳದ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ ನಿಜಕ್ಕೂ ಶ್ಲಾಘನೀಯ. ಇಂತಹ ಜೇಬುಗಳ್ಳತನ ಪ್ರಕರಣಗಳನ್ನು ಸಾಮಾನ್ಯವಾಗಿ ಪೊಲೀಸ್ ವಲಯದಲ್ಲಿ ನಿರ್ಲಕ್ಷö್ಯ ಮಾಡುವ ಸಂದÀರ್ಭಗಳೇ ಹೆಚ್ಚು. ಏಕೆಂದರೆ, ಬೆಂಗಳೂರು, ಮೈಸೂರು ಮೊದಲಾದ ನಗರಗಳಲ್ಲಿ ಮಹಿಳೆಯರ ಕತ್ತಿನ ಸರ ಅಪಹರಣ, ಪುರುಷರ ಜೇಬುಗಳ್ಳತನ ಕೇವಲ ಸುದ್ದಿಯಾಗಿ ಉಳಿಯುತ್ತದೆಯೇ ಹೊರತು ಅಷ್ಟೊಂದು ಗಂಭೀರವಾಗಿ ಈ ಪ್ರಕರಣಗಳನ್ನು ಪರಿಗÀಣಿಸುವುದು ಕಂಡುಬAದಿಲ್ಲ. ಇದರಿಂದ ಮತ್ತೆ ಕೊಬ್ಬ್ಬುವ ಸರಗಳ್ಳರು, ಜೇಬುಗಳ್ಳÀರು ಇನ್ನೂ ಬಲಾಢ್ಯರಾಗಿ ತಮ್ಮ ದುಷ್ಕçತ್ಯಗಳನ್ನು ಮುಂದುವರಿಸಿ ಅಪರಾಧ ಲೋಕದಲ್ಲಿ ಬೃಹತ್ ಜಾಲವನ್ನೇ ಸೃಷ್ಟಿಸುತ್ತಾರೆ, ಒಂದೆಡೆ, ಅಮಾಯಕ ಜನತೆ ತಮ್ಮ ಅಮೂಲ್ಯ ವಸ್ತುಗಳನ್ನು, ನಗದು ಹಣವನ್ನು ಕಳೆದುಕೊಳ್ಳುತ್ತಾರೆ. ಮತ್ತೊಂದೆಡೆ, ನಮ್ಮ ನಾಡಿನಲ್ಲಿಯೇ ನಾವು ಸ್ವತಂತ್ರವಾಗಿ, ಮುಕ್ತವಾಗಿ ನಡೆದಾಡಲು ಸಂಚರಿಸಲು ಸಾಧ್ಯವಿಲ್ಲದೆ, ಭಯದ ವಾತಾವರಣದಲ್ಲಿರುವÀಂತಹÀ ಕೆಟ್ಟ ಸನ್ನಿವೇಶ ಸೃಷ್ಟಿಯಾಗುತ್ತದೆ. ಮೊಳಕೆಯಲ್ಲಿಯೇ ಚಿವುಟುವಂತೆ ಕೊಡಗು ಪೊಲೀಸರು ಜೇಬುಗಳ್ಳರನ್ನು ಚಾಕಚಕ್ಯತೆಯಿಂದ ಹಿಡಿದಿರುವದು, ಜಿಲ್ಲೆಯ ಜನತೆಗೆ ನೆಮ್ಮದಿ ತರುವ ವಿಚಾರ, ಇಂತಹ ಹತ್ತು ಹಲವು ಪ್ರಕರಣಗಳನ್ನು ಅಲ್ಲಲ್ಲಿ ಕೊಡಗಿನ ಪೊಲೀಸರು ಭೇದಿಸಿ ಆರೋಪಿಗಳನ್ನು ಬಂಧಿಸಿ ಸಂಕಷ್ಟಕ್ಕೆ ಈಡಾದವರನ್ನು ಸಂರಕ್ಷಿಸುತ್ತಿರುವ ಪ್ರಕರಣಗಳು ಸಮಾಜದ ಕೃತಜ್ಞತೆಗೆ ಪಾತ್ರವಾಗುವಂತಹ ಸತ್ಕಾರ್ಯಗಳೆನಿಸುತ್ತಿವೆ.

೨ ದಿನದ ಹಿಂದೆ ಕುಶಾಲನಗರ ಬಳಿ ಯುವಕನನ್ನು ಅಪಹರಿಸಿ ಚಿನ್ನಾಭರಣ, ಬೈಕ್ ಅನ್ನು ದೋಚಲಾಗಿತ್ತು. ೨೪ ಗಂಟೆಯೊಳಗೆ ಜಿಲ್ಲಾ ಪೊಲೀಸ್ ಇಲಾಖೆ ಮೈಸೂರಿನ ೯ ಮಂದಿ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಕೂಡಾ ಜಿಲ್ಲೆಯ ಜನತೆಯ ಪ್ರಶಂಸೆಗೆ ಪಾತ್ರವಾಗಿದೆ.

ಇತ್ತೀಚೆಗೆ ಗೋಣಿಕೊಪ್ಪಲು ವಿಭಾಗದಲ್ಲಿಯೂ ರಸ್ತೆ ತಡೆದು ಭಾರೀ ದರೋಡೆ ನಡೆಸಿದ್ದ ಕೇರಳದ ತಂಡವನ್ನು ಸದೆೆ ಬಡಿದು ಹೆಚ್ಚಿನ ಪರಿಶ್ರಮದಿಂದ ತನಿಖೆ ಮಾಡಿ ಕೊಡಗಿನ ನೆಲದಲ್ಲಿ ಇಂತಹ ಕುಕೃತ್ಯಗಳು ಮರುಕಳಿಸದಂತೆ ಕಡಿವಾಣ ಹಾಕಿದ ಕೀರ್ತಿಯೂ ಗೋಣಿಕೊಪ್ಪಲು ವಿಭಾಗದ ಹಾಗೂ ಜಿಲ್ಲಾ ಮಟ್ಟದ ಪೊಲೀಸರಿಗೆ ಸಲ್ಲಬೇಕು. ಇಂತಹ ಅನೇಕ ಅಪರಾಧ ಪ್ರಕರಣಗಳನ್ನು ಬುದ್ಧಿವಂತಿಕೆಯಿAದ, ನಾಜೂಕಾಗಿ ಪತ್ತೆಹಚ್ಚಿ ಆರೋಪಿಗಳನ್ನು ಸೆರೆ ಹಿಡಿದು ಜೈಲಿಗಟ್ಟುತ್ತಿರುವ ಉತ್ತಮ ಪೊಲೀಸ್ ಪಡೆ ಕೊಡಗಿನಲ್ಲಿದೆ ಎಂಬದು ಕಾನೂನು ಇನ್ನೂ ಜೀವಂತವಾಗಿದೆ ಎನ್ನುವುದಕ್ಕೆ ಸಾಕ್ಷಿ ಸ್ವರೂಪವಾಗಿದೆ, ಜೊತೆಗೆÀ ನಿರಂತರವಾಗಿ ಮಾದಕ ವಸ್ತುಗಳ ಜಾಲವನ್ನು ಆಗಿಂದಾಗೆ ಭೇದಿಸಿ ಆಯಾ ವಿಭಾಗದ ಪೊಲೀಸರು ಜಿಲ್ಲೆಯ ಎಲ್ಲೆಡೆÀ ದುಷ್ಕರ್ಮಿಗಳನ್ನು ಬಂಧಿಸುತ್ತಿದ್ದಾರೆ. ಇತರ ಜಿಲ್ಲೆ, ರಾಜ್ಯಗಳಿಂದ ಬರುವ ಈ ದುಷ್ಟರಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿದ್ದಾರೆÀ. ನಿಜಕ್ಕೂ ಕೊಡಗಿನ ಯುವ ಜನತೆ, ವಿದ್ಯಾರ್ಥಿ ಸಮೂಹ ದಾರಿ ತಪ್ಪಿದಾಗ ಅದನ್ನು ಭೇದಿಸಿ ಹೊರಗಿನಿಂದ ಬರುವ ಬೃಹತ್ ಜಾಲದ ಖದೀಮರಿಗೆ ಭಯವುಂಟಾಗುವ ರೀತಿಯಲ್ಲ್ಲಿ ಕಾರ್ಯಾಚರಣೆ ನಡೆಸುತ್ತಿರುವುದು ಸರ್ವರ ಮೆಚ್ಚುಗೆಗೆ ಪಾತ್ರವಾಗಲೇಬೇಕು. ನಮ್ಮ ಯುವಪೀಳಿಗೆ, ವಿದ್ಯಾರ್ಥಿ ಸಮೂಹ ಹೊರಗಿನಿಂದ ಬರುವ ಮಾದಕವಸ್ತು ಜಾಲಕ್ಕೆ ಮಾರುಹೋಗಿ ತಮ್ಮ ಜೀವನವನ್ನು ದುರಂತಗೊಳಿಸಿಕೊಳ್ಳುವ ಸನ್ನಿವೇಶವನ್ನು ನಿರಂತರವಾಗಿ ಪೊಲೀಸರು ತಪ್ಪಿಸಿ ಈ ವಿಷ ಜಾಲಕ್ಕೆ ಅಂತಿಮ ವಿದಾಯ ಹೇಳಲು ಶತಪ್ರಯತ್ನ ನಡೆಸುತ್ತಲೇ ಇದ್ದಾರೆ. ಇದರಿಂದ ಅನೇಕ ಕುಟುಂಬಗಳು ವಿನಾಶದತ್ತ ಸಾಗುತ್ತಿದ್ದ ದುಸ್ಥಿತಿಯಿಂದ ಹೊರಬಂದು ನಿಧಾನವಾಗಿ ಸಹಜ ಸ್ಥಿತಿಗೆ ಮರಳುವಂತಾಗಿದೆ. ಕೊಡಗು ಪೊಲೀಸರ ಈ ನಿರಂತರ ಪರಿಶ್ರಮಕ್ಕೆ ಜಿಲ್ಲೆಯ ಜನತೆ ಬೆಂಬಲಿಸಿ ಸಹಕರಿಸಿ ಕೈ ಜೋಡಿಸುವ ಅವಶ್ಯಕತೆಯಿದೆ.

ಇಂತಹ ನಿರ್ಭಿಡೆಯ ಹೆಜ್ಜೆಯಿರಿಸಲು ಕೊಡಗಿನ ಪೊಲೀಸ್ ಪಡೆಗೆ ಮುಖ್ಯವಾಗಿ ಸೂತ್ರಧಾರಿಗಳಾಗಿ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸುತ್ತಿರುವ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ರಾಮರಾಜನ್ ಅವರಿಗೆ ಈ ಸಂದರ್ಭ ವಿಶೇಷ ಧನ್ಯವಾದ ಸಲ್ಲಿಸುವದು ಜನತೆಯ ಕರ್ತವ್ಯವಾಗಿದೆ. ರಾಮರಾಜನ್ ಅವರು ಅಧಿಕಾರ ವಹಿಸಿಕೊಂಡಾಗಿನಿAದ ಇದುವರೆಗೂ ಮಾದಕವಸ್ತು ಜಾಲವನ್ನು ಬೆನ್ನಟ್ಟಿ ಬೇಟೆಯಾಡಿ ಸಂಪೂರ್ಣ ನಿಷ್ಕಿçಯಗೊಳಿಸಲು ಪಣತೊಟ್ಟು ಕಾರ್ಯೋನ್ಮುಖರಾಗಿದ್ದಾರೆ. ಇದÀರೊಂದಿಗೆ ಇತರ ಅಪರಾಧಗಳ ಪತ್ತೆಯಲ್ಲಿಯೂ ನೇತೃತ್ವ ವಹಿಸಿ ತಮ್ಮ ಪಡೆಯನ್ನು ಸಕ್ರಿಯಗೊಳಿಸುತ್ತ ಸಮರ್ಪಕ ದಾರಿಯಲ್ಲಿ ಮುನ್ನಡೆಸಿದ್ದಾರೆ. ಇವರೊಂದಿಗೆ ಕೈಜೋಡಿಸುತ್ತಿರುವವರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕೊಡಗಿನೊಂದಿಗೇ ಬಾಂಧವ್ಯ ಬೆಸೆದು ಹಲವು ಹುದ್ದೆಗಳನ್ನು ಜಿಲ್ಲೆಯಲ್ಲಿಯೇ ನಿಭಾಯಿಸಿರುವ ಸುಂದರ್‌ರಾಜ್ ಅವರು, ೫ ತಾಲೂಕುಗಳ ಡಿವೈಎಸ್‌ಪಿಗಳು, ಪೊಲೀಸ್ ಇನ್ಸ್ಪೆಕ್ಟರ್‌ಗಳು, ಸಬ್‌ಇನ್ಸ್ಪೆಕ್ಟರ್‌ಗಳು ಹಾಗೂ ಎಲ್ಲಾ ಸಿಬ್ಬಂದಿಗಳು ಜಿಲ್ಲೆಯನ್ನು ಅಪರಾಧ ಮುಕ್ತ ಜಿಲ್ಲೆಯನ್ನಾಗಿಸಲು ಶ್ರಮಿಸುತ್ತಿರುವುದನ್ನು ಜಿಲ್ಲೆಯ ಜನ ಮುಕ್ತ ಕಂಠದಿAದ ಶ್ಲಾಘಿಸುತ್ತಿದ್ದಾರೆ. ಜಿಲ್ಲಾ ಪೊಲೀಸರ ಈ ಉತ್ತಮ ಕಾರ್ಯಗಳಿಗೆ ಜಿಲ್ಲೆಯ ಜನತೆ ಕೈಜೋಡಿಸುವಂತಾದರೆ ಕೊಡಗು ಜಿಲ್ಲೆ ಪುಂಡು- ಪೋಕರಿಗಳÀ, ದುಷ್ಕರ್ಮಿಗಳ ವಿಷಜಾಲಕ್ಕೆ ಸಿಲುಕದೆ ಉತ್ತಮ ಸಮಾಜವನ್ನು ರೂಪಿಸುವ ತಾಣವಾಗಲಿದೆ ಎಂದು ವಿಶ್ವಾಸವಿಡೋಣ.

-ಜಿ. ರಾಜೇಂದ್ರ , ಪ್ರಧಾನ ಸಂಪಾದಕ