ಮಡಿಕೇರಿ, ಏ. ೭: ಹೆಚ್ಚಿನ ಸಂಖ್ಯೆಯಲ್ಲಿ ಮಾಜಿ ಸೇನಾಧಿಕಾರಿಗಳು, ಸೈನಿಕರನ್ನು ಹೊಂದಿರುವ ಕೊಡಗು ಜಿಲ್ಲೆಗೆ ಮಾಜಿ ಸೈನಿಕರಿಗೆ ಅನುಕೂಲವಾಗುವಂತೆ ಕ್ಯಾಂಟೀನ್ ಸೌಲಭ್ಯ ಇನ್ನಷ್ಟು ಉನ್ನತೀಕರಣಗೊಳ್ಳುತ್ತಿದೆ.

ಬಹುವರ್ಷಗಳ ಹಿಂದಿನ ಈ ಬೇಡಿಕೆಗೆ ಸೇನಾ ಮುಖ್ಯ ಕಚೇರಿಯೊಂದಿಗೆ, ಕರ್ನಾಟಕ - ಕೇರಳ ಸಬ್ ಏರಿಯಾದ ಮೂಲಕ ಅನುಮೋದನೆ ದೊರೆತಿದ್ದು, ಭವಿಷ್ಯದಲ್ಲಿ ಮಾಜಿ ಸೈನಿಕರಿಗೆ ಈಗ ಸಿಗುತ್ತಿರುವ ಕ್ಯಾಂಟೀನ್ ಸೌಲಭ್ಯದ ವ್ಯವಸ್ಥೆಗಳು ಮತ್ತಷ್ಟು ಸುಲಲಿತವಾಗಲಿದೆ. ಉನ್ನತೀಕರಣದ ಪ್ರಕ್ರಿಯೆಗಳು ನಡೆದಿದ್ದು, ತಾ. ೧೦ ರ ಬುಧವಾರದಿಂದ ಮಡಿಕೇರಿ ಕ್ಯಾಂಟೀನ್ ಪ್ರತ್ಯೇಕ ಘಟಕವಾಗಿ ಕಾರ್ಯನಿರ್ವಹಿಸಲಿದೆ.

ಈ ಹಿಂದೆ ಮಡಿಕೇರಿ ಮಿಲಿಟರಿ ಕ್ಯಾಂಟೀನ್ ಬೆಂಗಳೂರಿನ ಕ್ಯಾಂಟೀನ್‌ನ ಅಧೀನಕ್ಕೆ ಒಳಪಟ್ಟಿತ್ತು. ಕಳೆದ ಕೆಲ ಸಮಯದ ಹಿಂದೆ ಪ್ರಾರಂಭಗೊAಡ ವೀರಾಜಪೇಟೆ ಮಿಲಿಟರಿ ಕ್ಯಾಂಟೀನ್ ಕೂಡ ಬೆಂಗಳೂರಿನ ಅಧೀನಕ್ಕೆ ಬರುತ್ತಿತ್ತು. ಇದೀಗ ಮಡಿಕೇರಿ ಕ್ಯಾಂಟೀನ್ ಪ್ರತ್ಯೇಕ ಘಟಕವಾಗುತ್ತಿದ್ದು, ವೀರಾಜಪೇಟೆ ಮಡಿಕೇರಿಯ ಅಧೀನಕ್ಕೆ ಒಳಪಡುತ್ತಿದೆ. ಈ ಬದಲಾವಣೆಗೆ ಕರ್ನಾಟಕ - ಕೇರಳ ಸಬ್ ಏರಿಯಾದಿಂದ ಅನುಮತಿ ದೊರೆತಿದ್ದು, ಈಗಾಗಲೇ ಅಗತ್ಯ ಸಿದ್ಧತೆಗಳು ನಡೆದಿವೆ. ಭವಿಷ್ಯದಲ್ಲಿ ಈಗಿರುವ ಕಟ್ಟಡದ ವಿಸ್ತರಣೆ ಸೇರಿದಂತೆ ಇನ್ನಷ್ಟು ವ್ಯವಸ್ಥೆಗಳು ಬರಲಿವೆ.

ಈ ಹಿಂದೆ ಮಡಿಕೇರಿ ಹಾಗೂ ವೀರಾಜಪೇಟೆ, ಗೋಲ್ಡನ್ ಪಾಮ್ ಕ್ಯಾಂಟೀನ್ ಬೆಂಗಳೂರು ಇದರ ಶಾಖೆಯಂತಿದ್ದವು. ಅಗತ್ಯ ವಸ್ತುಗಳನ್ನು ಎರಡು ಶಾಖೆಗಳು ಬೆಂಗಳೂರು ಕ್ಯಾಂಟೀನ್ ಮೂಲಕವೇ ಖರೀದಿಸಬೇಕಾಗಿತ್ತು. ಇದೀಗ ಮಡಿಕೇರಿಯೇ ಮುಖ್ಯ ಘಟಕವಾಗಲಿದ್ದು, ನೇರ ಖರೀದಿಯ ವ್ಯವಸ್ಥೆಯಾಗಲಿದೆ. ವೀರಾಜಪೇಟೆ ಕ್ಯಾಂಟೀನ್ ಮಾತ್ರ ಮಡಿಕೇರಿಯ ಶಾಖೆಯಾಗಲಿದೆ.

ಎಕ್ಸ್ ಸರ್ವೀನ್‌ಮೆನ್ ಯೂನಿಟ್‌ರನ್ ಕ್ಯಾಂಟೀನ್ ಗೋಲ್ಡನ್ ಪಾಮ್ ಕ್ಯಾಂಟೀನ್ ಮಡಿಕೇರಿ ಎಂದು ವ್ಯವಸ್ಥೆ ಬದಲಾಗುತ್ತಿದೆ. ಈ ಬದಲಾವಣೆಯಿಂದ ಮಡಿಕೇರಿ ಘಟಕವೇ ನೇರವಾಗಿ ಜಿಲ್ಲೆಯ ಅಗತ್ಯತೆಗಳಿಗೆ ತಕ್ಕಂತೆ ಸಾಮಗ್ರಿಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಹಿಂದೆ ಬೆಂಗಳೂರಿನಲ್ಲಿ ಸಿಗುವ ಸಾಮಗ್ರಿಗಳಿಗಷ್ಟೆ ಇಲ್ಲಿನವರೂ ಹೊಂದಿಕೊಳ್ಳಬೇಕಾಗಿತ್ತು. ಇದೀಗ ಕ್ಯಾಂಟೀನ್ ಸ್ಟೊರ‍್ಸ್ ಡಿಪಾರ್ಟ್ಮೆಂಟ್ (ಸಿಎಸ್‌ಡಿ) ಮೂಲಕ ನೇರವಾಗಿ ಖರೀದಿ ೩ಐದನೇ ಪುಟಕ್ಕೆ

(ಮೊದಲ ಪುಟದಿಂದ) ಮಾಡಬಹುದಾಗಿದೆ. ಈ ಅವಕಾಶದಿಂದ ಜಿಲ್ಲೆಗೆ ಅಗತ್ಯವಿರುವ ವಸ್ತುಗಳಿಗೆ ಬೇಡಿಕೆ ಸಲ್ಲಿಸುವ ಅವಕಾಶ ಸಿಗಲಿದೆ.

ಎ.ಎಫ್.ಡಿ. ಗ್ರೂಫ್

ಇದರೊಂದಿಗೆ ಎಎಫ್‌ಡಿ ಗ್ರೂಪ್ ಎಂಬ ವ್ಯವಸ್ಥೆಯಂತೆ ಕಾರು, ದ್ವಿಚಕ್ರ ವಾಹನಗಳು ಇಲೆಕ್ಟಾçನಿಕ್ ವಸ್ತುಗಳನ್ನು ಮಾಜಿ ಸೈನಿಕರು ಮಡಿಕೇರಿಯಲ್ಲಿ ಬುಕ್ಕಿಂಗ್ ಮಾಡುವ ಅವಕಾಶವೂ ದೊರೆಯಲಿರುವುದು ಕಾರ್ಡ್ದಾರರಿಗೆ ಸುವರ್ಣಾವಕಾಶವಾಗಿ ಪರಿಣಮಿಸಲಿದೆ.

ಸದ್ಯಕ್ಕೆ ಮಡಿಕೇರಿ ಕ್ಯಾಂಟೀನ್ ಕಟ್ಟಡದಲ್ಲಿ ಈಗಿರುವ ವ್ಯವಸ್ಥೆಯನ್ನು ಸಾಧ್ಯವಾಗುವಷ್ಟು ಮಟ್ಟಿಗೆ ಅಭಿವೃದ್ಧಿಪಡಿಸಲಾಗಿದೆ. ಭವಿಷ್ಯದಲ್ಲಿ ಇದು ಇನ್ನಷ್ಟು ವಿಸ್ತರಣೆಯಾಗಲಿದೆ ಎಂದು ಕ್ಯಾಂಟೀನ್ ವ್ಯವಸ್ಥಾಪಕರಾಗಿರುವ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಮುಲ್ಲೆರ ಎಸ್. ಕಾವೇರಪ್ಪ ಅವರು ಮಾಹಿತಿ ನೀಡಿದ್ದಾರೆ. ಬುಧವಾರದಂದು ಸಾಂಕೇತಿಕ ಪೂಜೆಯೊಂದಿಗೆ ಇದರ ಸರಳ ಉದ್ಘಾಟನೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

- ಶಶಿ ಸೋಮಯ್ಯ