ವೀರಾಜಪೇಟೆ, ಏ. ೬: ಸಮೀಪದ ಕೆದಮುಳ್ಳೂರು ಗ್ರಾಮದ ಶ್ರೀ ಚಾಮುಂಡಿ ದೇವಿಯ ತೆರೆ ಮಹೋತ್ಸವ ವಿಜೃಂಭಣೆಯಿAದ ನಡೆ ಯಿತು.
ತಾ.೩ರಂದು ಕೊಟ್ಟಿ ಪಾಡುವುದರೊಂದಿಗೆ ಹಬ್ಬಕ್ಕೆ ಚಾಲನೆ ನೀಡಲಾಗಿತ್ತು. ತಾ.೪ರ ರಾತ್ರಿ ವಿವಿಧ ಕೋಲಗಳು ನಡೆದವು. ತಾ. ೫ರಂದು ಬೆಳಿಗ್ಗೆ ೭.೩೦ರ ಸುಮಾರಿಗೆ ವಿಷ್ಣುಮೂರ್ತಿ ಕೋಲ ನಡೆಯಿತು. ಬಳಿಕ ಮಧ್ಯಾಹ್ನ ೧೨ ಗಂಟೆಗೆ ಚಾಮುಂಡಿ ದೇವಿಯ ಕೋಲ ನೆರವೇರಿತು.
ಸಂಜೆ ವೇಳೆಗೆ ದೇವರು ಬನಕ್ಕೆ ತೆರಳಿ ಅಲ್ಲಿ ಪೂಜಾ ವಿಧಿ ವಿಧಾನಗಳನ್ನು ಪೂರೈಸಿದ ಬಳಿಕ ವಾರ್ಷಿಕ ತೆರೆ ಮಹೋತ್ಸವ ಕೊನೆಗೊಂಡಿತು.