ಮಹಿಳಾ ತಂಡ-ಪ್ರಥಮ ಪ್ರಯತ್ನ

ಕೊಡವ ಕೌಟುಂಬಿಕ ಕ್ರಿಕೆಟ್ ಉತ್ಸವಕ್ಕೆ ಈ ಬಾರಿ ಮಹಿಳಾ ಪಂದ್ಯಾವಳಿ ಸೇರ್ಪಡೆಯಾಗುತ್ತಿದೆ. ಈ ತನಕದ ಉತ್ಸವಗಳಲ್ಲಿ ಇದು ಪ್ರಥಮ ಪ್ರಯತ್ನವಾಗಿದೆ. ಈಗಾಗಲೇ ೩೦ ಕುಟುಂಬಗಳು ಪಂದ್ಯಾವಳಿಗೆ ಹೆಸರು ನೋಂದಾಯಿಸಿಕೊAಡಿವೆ. ಇನ್ನೂ ಹತ್ತಕ್ಕೂ ಅಧಿಕ ತಂಡಗಳು ಭಾಗವಹಿಸುವ ನಿರೀಕ್ಷೆ ಇರುವುದಾಗಿ ಮಹಿಳಾ ಪಂದ್ಯಾವಳಿಗಾಗಿ ನೇಮಕ ಮಾಡಲಾಗಿರುವ ಸಮಿತಿಯ ಪದಾಧಿಕಾರಿಗಳಾದ ಅರಮಣಮಾಡ ಮಮತಾ ಅವರು ತಿಳಿಸಿದ್ದಾರೆ. ಮಹಿಳಾ ವಿಜೇತ ತಂಡಕ್ಕೆ ಟ್ರೋಫಿಯೊಂದಿಗೆ ಆಟಗಾರರಿಗೆ ವಿಶೇಷವಾಗಿ ಕೊಡವ ಸಾಂಪ್ರದಾಯಿಕ ಆಭರಣಗಳಾದ ಕೊಕ್ಕೆತಾತಿ, ಜೋಮಾಲೆ, ಕೊಡವ ಚಿಹ್ನೆ ಇರುವ ಬ್ರೋಚ್‌ನಂತಹ ಆಭರಣಗಳನ್ನು ನೀಡಲು ಉದ್ದೇಶಿಸಲಾಗಿದೆ. ವೈಯಕ್ತಿಕ ಸಾಧಕರಿಗೂ ಬಹುಮಾನಗಳೂ ಇವೆ. ಇದು ಪ್ರಥಮ ಬಾರಿಗೆ ಪ್ರಯತ್ನವಾಗಿದ್ದು, ಮಹಿಳೆಯರಿಗೂ ಉತ್ತೇಜನ ನೀಡಲು ಯತ್ನಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಒಂದು ಕುಟುಂಬದಲ್ಲಿ ೬+ ಆಟಗಾರರೂ ಇದ್ದರೂ ಅವಕಾಶ ನೀಡಲಾಗುವದು. ಆದರೆ ಎಲ್ಲರೂ ಒಂದೇ ಕುಟುಂಬದವರಾಗಿರಬೇಕು. ನಿಯಮಗಳಲ್ಲೂ ತುಸು ಸಡಿಲಿಕೆ ಇರುತ್ತದೆ. ಮಹಿಳಾ ಪಂದ್ಯವನ್ನು ಖ್ಯಾತ ಕ್ರೀಡಾ ತಾರೆ ಅಶ್ವಿನಿ ನಾಚಪ್ಪ ಉದ್ಘಾಟಿಸಲಿದ್ದಾರೆ. ಈ ಪಂದ್ಯಾವಳಿಗೆ ದಿವಂಗತ ಅರಮಣಮಾಡ ರವಿ ಉತ್ತಪ್ಪ ಹಾಗೂ ಜಾಜಿ ಅವರುಗಳ ಸ್ಮರಣಾರ್ಥ ಮಕ್ಕಳಾದ ದಿನು ಹಾಗೂ ಅನು ಬಹುಮಾನ ಪ್ರಾಯೋಜಕತ್ವ ನೀಡಿರುವುದಾಗಿ ಅವರು ತಿಳಿಸಿದರು. ಮಹಿಳಾ ಸಮಿತಿಯಲ್ಲಿ ಕಾವ್ಯ ಅನಿಲ್, ಕಾವ್ಯಶಶಿ, ಜಾನ್ಸಿ, ದಿವ್ಯ, ಶಿಲ್ಪ, ಬೀನಾ ಬೆಳ್ಯಪ್ಪ, ಚಿತ್ರಾ, ನಿತಿನ್ ಮತ್ತಿತರರು ಕಾರ್ಯನಿರ್ವಹಿಸುತ್ತಿದ್ದಾರೆ. (ಮೊದಲ ಪುಟದಿಂದ) ಉಪಾಧ್ಯಕ್ಷರಾಗಿ ಸುಗುಣ ಗಣಪತಿ, ಕಾರ್ಯದರ್ಶಿಯಾಗಿ ಅಜಯ್, ದಿನು ಬೆಳ್ಯಪ್ಪ, ಉದಯ್ ಮತ್ತಿತರ ಕಟುಂಬಸ್ಥರು ಸಮಿತಿಯಲ್ಲಿ ಇದ್ದಾರೆ.

ಉದ್ಘಾಟನೆ ಹಾಗೂ ಸಮಾರೋಪ ಸಮಾರಂಭವನ್ನು ಆಕರ್ಷಕ ರೀತಿಯಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಕೊಡವ ಸಾಂಸ್ಕೃತಿಕ ಪ್ರದರ್ಶನ ಮತ್ತಿತರ ಕಾರ್ಯಕ್ರಮಗಳು ಈ ದಿನಗಳಂದು ಇರಲಿದೆ.

ಅತಿಥಿಗಳಾಗಿ ಖ್ಯಾತ ಕ್ರಿಕೆಟಿಗರನ್ನು ಕರೆಸುವ ಪ್ರಯತ್ನ ನಡೆಯುತ್ತಿದ್ದು, ಕೆ.ಎಸ್.ಸಿ.ಎ. ಅಧ್ಯಕ್ಷ ರಘುರಾಮ್ ಭಟ್ ಅವರು ಆಗಮಿಸುವ ನಿರೀಕ್ಷೆಯಿದೆ. ಜಿಲ್ಲೆಯ ಜನಪ್ರತಿನಿಧಿಗಳು, ಪ್ರಮುಖರನ್ನು ಆಹ್ವಾನಿಸಲಾಗುವುದು ಎಂದು ಅವರುಗಳು ತಿಳಿಸಿದ್ದಾರೆ.

ಪ್ರದರ್ಶನ ಪಂದ್ಯ

ನಾರ್ತ್ ಕೂರ್ಗ್ ಹಾಗೂ ಸೌತ್ ಕೂರ್ಗ್ ತಂಡಗಳ ನಡುವೆ ಉದ್ಘಾಟನಾ ದಿನದಂದು ಪ್ರದರ್ಶನ ಪಂದ್ಯ ಏರ್ಪಡಿಸಲಾಗುತ್ತಿದೆ. ಹಳೆಯ ವಾಹನಗಳ ಪ್ರದರ್ಶನವನ್ನು ಏರ್ಪಡಿಸುವ ಚಿಂತನೆಯಿದ್ದು ಪ್ರಯತ್ನ ನಡೆಯುತ್ತಿರುವುದಾಗಿ ಆಯೋಜಕರು ಮಾಹಿತಿ ನೀಡಿದ್ದಾರೆ.