ಕಡಂಗ, ಏ. ೬: ಅರಪಟ್ಟು ಗ್ರಾಮದ ಗ್ರಾಮ ದೇವತೆಯಾದ ಚೊಯಿಲಿ ಶ್ರೀ ಭಗವತಿ ದೇವಿಯ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು.

ಅಂದಿಬೊಳಕ್‌ನೊAದಿಗೆ ಪ್ರಾರಂಭವಾದ ಹಬ್ಬ ಪ್ರತಿ ದಿನ ದೇವರ ಉತ್ಸವದ ಮೂರ್ತಿಯ ಪ್ರದರ್ಶನ, ಎತ್ತು ಪೋರಾಟ, ಭಕ್ತಾದಿಗಳಿಂದ ಬೊಳಕಾಟ್‌ನೊಂದಿಗೆ ನಡೆಯಿತು. ದೇವರ ಅವಭೃತ ಸ್ನಾನ, ಪ್ರದಕ್ಷಿಣೆ ನಂತರ ಅಲಂಕಾರ ಪೂಜೆ, ವಸಂತ ಪೂಜೆ ಸೇರಿದಂತೆ ಪೂಜಾ ವಿಧಿ ವಿಧಾನಗಳನ್ನು ಅರ್ಚಕರಾದ ಕೀರ್ತಿಶ್, ಕಿರಣ್, ಲಕ್ಷಿö್ಮÃಶ್ ನೆರವೇರಿಸಿದರು. ಉತ್ಸವದಲ್ಲಿ ದೇವಸ್ಥಾನದ ಅಧ್ಯಕ್ಷೆ ನೇರ್ಪಂಡ ಚಿತ್ರಬೆಳ್ಯಪ್ಪ ಆಡಳಿತ ಮಂಡಳಿಯವರು, ಮಹಿಳೆಯರು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.