ಗೋಣಿಕೊಪ್ಪ ವರದಿ, ಏ. ೫: ಕಾನೂನು ದುರುಪಯೋಗ ವಾಗದಂತೆ ಎಚ್ಚರವಹಿಸುವುದು ಕೂಡ ಮಹಿಳೆಯ ಜವಾಬ್ದಾರಿ ಎಂದು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಪ್ರಸೂತಿ ತಜ್ಞೆ ಡಾ. ಮುಕ್ಕಾಟೀರ ಗ್ರೀಷ್ಮಾ ಬೋಜಮ್ಮ ಸಲಹೆ ನೀಡಿದರು.
ಅಮ್ಮತ್ತಿ ಕೊಡವ ಸಮಾಜದಲ್ಲಿ ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿ, ಮಹಿಳೆಯರು ಆರೋಗ್ಯ ರಕ್ಷಣೆಗೆ ಕಾಳಜಿ ವಹಿಸಬೇಕಿದೆ. ವೈದ್ಯರಲ್ಲಿ ಮುಜುಗರಕ್ಕೆ ಒಳಪಡದೆ ಸಮಸ್ಯೆ ಹೇಳಿಕೊಳ್ಳುವ ಮನೋಭಾವ ರೂಢಿಸಿಕೊಳ್ಳಬೇಕಿದೆ ಎಂದರು. ಮಹಿಳೆ ರಕ್ಷಣೆಗೆ ಸಾಕಷ್ಟು ಕಾನೂನು ಗಳಿವೆ. ಇದರ ಸದುಪಯೋಗ ಮುಖ್ಯ. ಎಲ್ಲಿಯೂ ಕಾನೂನು ದುರುಪ ಯೋಗವಾಗದಂತೆ ಎಚ್ಚರ ವಹಿಸುವುದು ಕೂಡ ಮಹಿಳೆಯ ಜವಾಬ್ದಾರಿ ಎಂದು ಸಲಹೆ ನೀಡಿದರು.
ದಂತ ವೈದ್ಯೆ ಡಾ. ಪಟ್ಟಡ ಪೂಜಾ ಬೋಪಣ್ಣ ಮಾತನಾಡಿ, ಸಮಾನತೆ, ಹಕ್ಕುಗಳ ರಕ್ಷಣೆಗೆ ಮಹಿಳಾ ದಿನಾಚರಣೆ ಆಚರಿಸ ಲಾಗುತ್ತಿದೆ. ಇದರಿಂದ ಸಾಕಷ್ಟು ಮಹಿಳೆಯರಿಗೆ ಪ್ರೋತ್ಸಾಹ ದೊರೆ ಯುತ್ತಿದೆ. ಮಹಿಳೆ ಸೃಷ್ಟಿಕರ್ತೆಯ ಸ್ಥಾನದಲ್ಲಿರುವುದರಿಂದ ನಮ್ಮ ನಡೆ ಕೂಡ ಸ್ಪೂರ್ತಿದಾಯಕ ವಾಗಿರುವಂತೆ ಎಚ್ಚರವಹಿಸಬೇಕು. ಸಾಧನೆ ಜತೆ ಆರೋಗ್ಯ ಪೋಷಣೆ ಕೂಡ ಮುಖ್ಯ ಎಂದರು. ಸಾಹಿತಿ ಪಂದ್ಯAಡ ರೇಣುಕಾ ಸೋಮಯ್ಯ ಮಾತನಾಡಿ, ಸಾಹಿತ್ಯ ಕೂಡ ಮಹಿಳೆಗೆ ಸಾಧಿಸಲು ನೆರ ವಾಗುತ್ತದೆ. ಪ್ರೋತ್ಸಾಹ, ವೇದಿಕೆ ಕೂಡ ಮುಖ್ಯ ಎಂದರು. ಸಿಆರ್ ಪಿಎಫ್ ನಿವೃತ್ತ ಅಧಿಕಾರಿ ಕೋಡಿಮಣಿಯಂಡ ಅಶ್ವಿನಿ ಗಣಪತಿ ಮಾತನಾಡಿ, ದೇಶ ಸೇವೆಗೆ ಮಹಿಳೆಯರು ಕೂಡ ಆಸಕ್ತಿ ತೋರಬೇಕು ಎಂದರು.
ವಿಜೇತರು: ಕಸೂತಿ ಸ್ಪರ್ಧೆಯಲ್ಲಿ ಬೊಪ್ಪಂಡ ರೂಪ ಬೆಳ್ಯಪ್ಪ-ಮೂಕೊಂಡ ವೀಣಾ ಪ್ರಥಮ, ಚೋವಂಡ ಜಮುನ ದ್ವಿತೀಯ, ಚಮಚದಲ್ಲಿ ನಿಂಬೆ ಹಣ್ಣು ನಡಿಗೆಯಲ್ಲಿ ಬಡುವಮಂಡ ಪ್ರಿಯಾ (ಪ್ರ), ನೆಲ್ಲವಂಡ ಕಾವೇರಮ್ಮ (ದ್ವಿ), ಪಿಲ್ಲೊ ಪಾಸಿಂಗ್ನಲ್ಲಿ ಮತ್ರಂಡ ಜ್ಯೋತಿ (ಪ್ರ), ಚೋವಂಡ ಜಮುನಾ (ದ್ವಿ), ಕ್ಯಾಂಡಲ್ ಲೈಟಿಂಗ್ನಲ್ಲಿ ನೆಲ್ಲವಂಡ ಕಾವೇರಮ್ಮ (ಪ್ರ), ಮುಕ್ಕಾಟೀರ ಡಾಟಿ (ದ್ವಿ), ಹಾಡುಗಾರಿಕೆಯಲ್ಲಿ ತೋರಬೇಕು ಎಂದರು.
ವಿಜೇತರು: ಕಸೂತಿ ಸ್ಪರ್ಧೆಯಲ್ಲಿ ಬೊಪ್ಪಂಡ ರೂಪ ಬೆಳ್ಯಪ್ಪ-ಮೂಕೊಂಡ ವೀಣಾ ಪ್ರಥಮ, ಚೋವಂಡ ಜಮುನ ದ್ವಿತೀಯ, ಚಮಚದಲ್ಲಿ ನಿಂಬೆ ಹಣ್ಣು ನಡಿಗೆಯಲ್ಲಿ ಬಡುವಮಂಡ ಪ್ರಿಯಾ (ಪ್ರ), ನೆಲ್ಲವಂಡ ಕಾವೇರಮ್ಮ (ದ್ವಿ), ಪಿಲ್ಲೊ ಪಾಸಿಂಗ್ನಲ್ಲಿ ಮತ್ರಂಡ ಜ್ಯೋತಿ (ಪ್ರ), ಚೋವಂಡ ಜಮುನಾ (ದ್ವಿ), ಕ್ಯಾಂಡಲ್ ಲೈಟಿಂಗ್ನಲ್ಲಿ ನೆಲ್ಲವಂಡ ಕಾವೇರಮ್ಮ (ಪ್ರ), ಮುಕ್ಕಾಟೀರ ಡಾಟಿ (ದ್ವಿ), ಹಾಡುಗಾರಿಕೆಯಲ್ಲಿ