ಮಡಿಕೇರಿ, ಏ. ೬ : ಮಡಿಕೇರಿಯ ಕ್ಷೇತ್ರಂನ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಮುತ್ತಪ್ಪ ಜಾತ್ರಾ ಮಹೋತ್ಸವ ವಿಜೃಂಭಣೆ ಯಿಂದ ಸಂಪನ್ನಗೊAಡಿತು.

ತಾ. ೩ರ ಸಂಜೆಯಿAದ ವಿವಿಧ ಕಾರ್ಯಕ್ರಮಗಳೊಂದಿಗೆ ಆರಂಭ ಗೊಂಡ ಉತ್ಸವದಲ್ಲಿ ಸಂಜೆಯಿAದ ತಾಲಾಪೊಲಿ ಮೆರವಣಿಗೆ, ವಿವಿಧ ಕೋಲಗಳೊಂದಿಗೆ ಮುಕ್ತಾಯ ಗೊಂಡಿತು. ಮುತ್ತಪ್ಪ ದೇವರ ಮಲೆ ಇಳಿಸುವದರೊಂದಿಗೆ ಆರಂಭಗೊAಡು ಶಾಸ್ತಪ್ಪ ದೇವರ ವೆಳ್ಳಾಟಂ, ಶಾಸ್ತಾವು ದೇವರ ವೆಳ್ಳಾಟಂ, ಪೋದಿ ವೆಳ್ಳಾಟಂ, ಶ್ರೀ ವಿಷ್ಣುಮೂರ್ತಿ ವೆಳ್ಳಾಟಂ, ಶಿವಭೂತ ತೆರೆ, ಗುಳಿಗ ದೇವರ ತೆರೆ, ಕಳಗ ಪಾಟ್, ಸಂದ್ಯಾವೇಲೆ, ಕುಟ್ಟಿಚಾತನ್ ತೆರೆ ನೆರವೇರಿತು. ತಾ. ೬ರ ಮುಂಜಾನೆ ಮುತ್ತಪ್ಪ ಮತ್ತು ತಿರುವಪ್ಪ ದೇವರ ತೆರೆ, ವಿಷ್ಣು ಮೂರ್ತಿ ದೇವರ ಮೇಲೇರಿ, ಪೋದಿ ತೆರೆ, ವಿಷ್ಣುಮೂರ್ತಿ ದೇವರ ಬಾರಣೆಯೊಂದಿಗೆ ಮಧ್ಯಾಹ್ನ ಧ್ವಜ ಅವರೋಹಣ ಮಾಡುವ ಮೂಲಕ ಸಂಪನ್ನಗೊAಡಿತು.

ಕಿಕ್ಕಿರಿದ ಭಕ್ತ ಸಮೂಹ

ಎರಡೂ ದಿನಗಳ ಉತ್ಸವದಲ್ಲಿ ಭಕ್ತಾದಿಗಳು ಕಿಕ್ಕಿರಿದು ನೆರೆದಿದ್ದರು. ಮಕ್ಕಳು, ಮಹಿಳೆಯರು, ವೃದ್ಧರಾದಿ ಯಾಗಿ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ಭಕ್ತರಿಗೆ ಎರಡೂ ರಾತ್ರಿ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಸಾಂಸ್ಕೃತಿಕ ಸಂಜೆ

ಸAಜೆಯಿAದ ರಾತ್ರಿವರೆಗೆ ಮುತ್ತಪ್ಪ ರಂಗಮAದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಡಿಕೇರಿಯ ಶ್ರೀ ರಾಮಾಂಜನೇಯ ಭಜನಾ ಮಂಡಳಿಯವರಿAದ ಭಜನೆಯೊಂದಿಗೆ ಆರಂಭಗೊAಡ ಕಾರ್ಯಕ್ರಮದಲ್ಲಿ ಸ್ಥಳೀಯ ನೃತ್ಯ ಸಂಸ್ಥೆಗಳ ಕಲಾವಿದರು ಕಾರ್ಯಕ್ರಮ ನಡೆಸಿಕೊಟ್ಟರು. ಉತ್ಸವದ ಯಶಸ್ಸಿನಲ್ಲಿ ಮುತ್ತಪ್ಪ ದೇವಾಲಯ ಟ್ರಸ್ಟ್ನ ಅಧ್ಯಕ್ಷ ಟಿ.ಕೆ.ಸುಧೀರ್, ಉತ್ಸವ ಸಮಿತಿ ಅಧ್ಯಕ್ಷ ರವೀಂದ್ರ ರೈ, ಹಿಂದೂ ಮಲಯಾಳಿ ಸಮಾಜದ ಗೌರವ ಅಧ್ಯಕ್ಷ ವಾಸುದೇವ್, ಪದಾಧಿಕಾರಿಗಳು, ಸದಸ್ಯರುಗಳು ಸ್ವಯಂ ಸೇವಕರಾಗಿ ತೊಡಗಿಸಿಕೊಂಡಿದ್ದರು.