ಶನಿವಾರಸಂತೆ, ಏ. ೬: ಸಮೀಪದ ಸುಳುಗಳಲೆ ಕಾಲೋನಿಯಲ್ಲಿರುವ ಪಂಜುರ್ಲಿ ದೈವಸ್ಥಾನದಲ್ಲಿ ೫ ನೇ ವರ್ಷದ ವಾರ್ಷಿಕೋತ್ಸವ ಹೋಮ-ಹವನ, ಪೂಜಾ ಕೈಂಕರ್ಯಗಳೊAದಿಗೆ ಶ್ರದ್ಧಾಭಕ್ತಿಯಿಂದ ಜರುಗಿತು. ವಾರ್ಷಿಕೋತ್ಸವದ ಪ್ರಯುಕ್ತ ದೈವ ಸನ್ನಿಧಿಯಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ವಿಜಯ ವಿನಾಯಕ ದೇವಾಲಯದ ಅರ್ಚಕ ಮಂಜುನಾಥ ಶರ್ಮ ಅವರ ನೇತೃತ್ವದಲ್ಲಿ ದೈವಕ್ಕೆ ಅಭಿಷೇಕ, ಗಣಹೋಮ, ನವಗ್ರಹ ಹೋಮ, ಲಕ್ಷಿö್ಮÃನಾರಾಯಣ ಹೋಮ, ದುರ್ಗಾ ಹೋಮ, ಮೃತ್ಯುಂಜಯ ಹೋಮಗಳು ನಡೆದು ಮಹಾಮಂಗಳಾರತಿಯಾಯಿತು.
ನAತರ ಶ್ರದ್ಧಾಭಕ್ತಿಯಿಂದ ಪಾಲ್ಗೊಂಡ ಭಕ್ತರಿಗೆ ತೀರ್ಥ-ಪ್ರಸಾದ ವಿನಿಯೋಗವಾಯಿತು. ಬೆಳಗ್ಗಿನ ಪೂಜಾ ಕಾರ್ಯ ಸಂದರ್ಭ ಸಮಾಜ ಸೇವಕ ರವಿಕಾಂತೇ ಗೌಡ, ಸಿನೆಮಾ ನಿರ್ಮಾಪಕ ದಿನೇಶ್ ನಾಚಪ್ಪ, ಶನಿವಾರಸಂತೆ ಗ್ರಾಮ ಪಂಚಾಯಿತಿ ಸದಸ್ಯ ಎಸ್.ಸಿ. ಶರತ್ಶೇಖರ್, ದುಂಡಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಸಿ.ಜೆ. ಗಿರೀಶ್, ಪ್ರಮುಖರು ಹಾಜರಿದ್ದರು. ಸಂಜೆ ದೈವಕ್ಕೆ ಕೋಳಿ ಹರಕೆ ಪೂಜೆ ನಡೆಯಿತು.
ದೈವ ಸನ್ನಿಧಿಯ ಅರ್ಚಕ ಲಿಂಗಪ್ಪ ಪೂಜಾ ವಿಧಿ ನೆರವೇರಿಸಿದರು. ಪ್ರಸಾದ ವಿನಿಯೋಗವಾಯಿತು. ಸಂಜೆಯ ಪೂಜೆಯ ವೇಳೆ ಆಕಸ್ಮಿಕವಾಗಿ ಭೇಟಿ ನೀಡಿದ ಶಾಸಕ ಡಾ. ಮಂತರ್ ಗೌಡ ಅವರ ಜತೆ ಮುಖಂಡರಾದ ಡಿ.ಪಿ. ಬೋಜಪ್ಪ, ಕಾಂತರಾಜ್, ರಂಗಸ್ವಾಮಿ, ಅಪ್ಪಸ್ವಾಮಿ, ಶರತ್ ಶೇಖರ್, ಗಿರೀಶ್, ಶಿವಣ್ಣ, ಮಂಜು, ಶಿಕ್ಷಕ ಜಯಕುಮಾರ್, ಲಿಂಗಪ್ಪ, ಇತರರು ಹಾಜರಿದ್ದು ದೈವಕ್ಕೆ ನಮನ ಸಲ್ಲಿಸಿದರು.