ಸುಂಟಿಕೊಪ್ಪ, ಏ. ೬: ಸಮೀಪದ ನಾರ್ಗಾಣೆ ಶ್ರೀದೇವಿ ಗ್ರಾಮದಲ್ಲಿ ನೆಲೆಗೊಂಡಿರುವ ಶ್ರೀ ಅಣ್ಣಪ್ಪ ಸ್ವಾಮಿದೇವಾಲಯದಲ್ಲಿ ತಾ.೧೩ ಮತ್ತು ೧೪ ೧೫ರಂದು ಧರ್ಮದೈವದ ನೇಮೋತ್ಸವ ನಡೆಯಲಿದೆ.

ನೇಮೋತ್ಸವದ ಅಂಗವಾಗಿ ತಾ.೧೩ರಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ ಮತ್ತು ಶುದ್ಧ ಕಲಶ, ತಾ. ೧೪ರಂದು ಸಂಜೆ ೬ ಗಂಟೆಗೆ ಶ್ರೀ ಸ್ವಾಮಿ, ಮತ್ತು ಅಮ್ಮನವರ ಭಂಡಾರ ಮೆರವಣಿಗೆ, ೬.೩೦ಕ್ಕೆ ಮಹಾ ಮಂಗಳಾರತಿ ಪ್ರಸಾದ ವಿತರಣೆ ರಾತ್ರಿ ೮.೩೦ಕ್ಕೆ ಧೂಮಾವತಿ ಕೋಲ ರಾತ್ರಿ ೧೦.೩೦ಕ್ಕೆ ಆದಿ ದೇವತೆ ಕಲ್ಲುರ್ಟಿ ದೈವದ ಕೋಲ ಹಾಗೂ ಪ್ರಸಾದ ವಿತರಣೆ. ತಾ. ೧೫ರಂದು ಮುಂಜಾನೆ ೧ಗಂಟೆಗೆ ಧರ್ಮದೈವ ಶ್ರೀ ಅಣ್ಣಪ್ಪ ಪಂಜುರ್ಲಿ ದೈವದ ಕೋಲ, ೩.೩೦ ಗಂಟೆಯಿAದ ಗುಳಿಗ ಹಾಗೂ ಶ್ರೀ ಚಾಮುಂಡೇಶ್ವರಿ ಧರ್ಮ ದೈವದ ಕೋಲ ನಡೆಯಲಿದೆ. ನಂತರ ಬೆಳಿಗ್ಗೆ ೮ ಗಂಟೆಯಿAದ ಧರ್ಮದೈವಗಳಿಗೆ ಹರಕೆ, ಬೇಡಿಕೆಗಳನ್ನು ಒಪ್ಪಿಸುವುದು ಮತ್ತು ಮಧ್ಯಾಹ್ನ ೧೨ ಗಂಟೆಯಿAದ ಅನ್ನದಾನ ನಡೆಯಲಿದೆ.