ನಾಪೋಕ್ಲು, ಏ. ೬: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಕುಂಡ್ಯೋಳAಡ ಕಪ್‌ಹಾಕಿ ನಮ್ಮೆಯ ೮ನೇ ದಿನದ ಪಂದ್ಯಾಟದಲ್ಲಿ ೧೮ ತಂಡಗಳು ಮುನ್ನಡೆ ಸಾಧಿಸಿವೆ.

ಚೆಟ್ರುಮಾಡ ಮತ್ತು ಕೋಡಿರ ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ಕೋಡಿರ ತಂಡವು ಚೆಟ್ರುಮಾಡ ತಂಡವನ್ನು ೪-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕುಪ್ಪಂಡ (ನಾಂಗಾಲ) ಮತ್ತು ಮರುವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕುಪ್ಪಂಡ ತಂಡವು ಮರುವಂಡ ತಂಡವನ್ನು ೩-೧ ಗೋಲುಗಳ ಅಂತರದಿAದ ಪರಾಭವಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕುಮ್ಮಂಡ ತಂಡವು ನುಚ್ಚಿಮಣಿಯಂಡ ತಂಡವನ್ನು ೪-೧ ಗೋಲುಗಳ ಅಂತರದಿAದ ಪರಾಭವಗೊಳಿಸಿತು.

ಚೋಯಮಾಡಂಡ ತಂಡವು ಕನ್ನಂಬಿರ ತಂಡವನ್ನು ೩-೦ ಗೋಲುಗಳ ಅಂತರದಿAದ ಪರಾಭವಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಬಯವಂಡ ತಂಡವು ಐಚಂಡ ತಂಡವನ್ನು ಟೈ ಬ್ರೇಕರ್‌ನಲ್ಲಿ ೫-೪ ಗೋಲಿನಿಂದ ಮಣಿಸಿತು. ಮಲ್ಲಂಗಡ ತಂಡವು ಪೂದ್ರಿಮಾಡ ತಂಡವನ್ನು ೩-೦ ಗೋಲುಗಳ ಅಂತರದಿAದ ಪರಾಭವಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕಾಣತಂಡ ಮತ್ತು ಕುಟ್ಟಂಡ (ಕಾರ್ಮಾಡು) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಾಣತಂಡ ತಂಡವು ಕುಟ್ಟಂಡ ತಂಡವನ್ನು ೩-೦ ಗೋಲುಗಳಿಂದ ಪರಾಭವಗೊಳಿಸಿತು.

ಕಲ್ಯಾಟಂಡ ತಂಡವು ಅನ್ನಾಡಿಯಂಡ ತಂಡವನ್ನು ೩-೦ ಗೋಲುಗಳಿಂದ ಪರಾಭವಗೊಳಿಸಿತು. ಮಾದಂಡ ತಂಡವು ಚೋಡುಮಾಡ ತಂಡವನ್ನು ಟೈಬ್ರೇಕರ್‌ನಲ್ಲಿ ೪-೩ ಗೋಲುಗಳಿಂದ ಸೋಲಿಸಿತು. ಬೊಳ್ಳಂಡ ತಂಡವು ತಿರೋಡಿರ ತಂಡವನ್ನು ೪-೧ ಗೋಲಿನಿಂದ ಸೋಲಿಸಿತು. ಪಾಡೆಯಂಡ ತಂಡವು ಅಲ್ಲಪ್ಪಿರ ತಂಡವನ್ನು ೩-೦ ಗೋಲಿನಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು.

ಮಲ್ಲಮಾಡ ತಂಡ ೩-೦ ಗೋಲಿನಿಂದ ಮಾಳೆಯಂಡ ತಂಡವನ್ನು ಸೋಲಿಸಿತು. ಇಟ್ಟೀರ ಮತ್ತು ಚೌರೀರ (ಹೊದವಾಡ) ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಇಟ್ಟೀರ ತಂಡ ೩-೧ ಗೋಲುಗಳಿಂದ ಚೌರೀರ ತಂಡವನ್ನು ಪರಾಭವಗೊಳಿಸಿತು. ಕೊಕ್ಕಂಡ ತಂಡವು ಕಲ್ಲುಮಾಡಂಡ ತಂಡವನ್ನು ೨-೦ ಗೋಲಿನಿಂದ ಸೋಲಿಸಿತು. ಕಾಡ್ಯಮಾಡ ತಂಡವು ಅಚ್ಚಾಂಡಿರ ತಂಡವನ್ನು ೪-೦ ಗೋಲಿನಿಂದ ಪರಾಭವಗೊಳಿಸಿತು.

ಕಾಂಡAಡ ತಂಡವು ಚೆಟ್ಟಿಯಾರಂಡ ತಂಡವನ್ನು ೪-೦ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ಬೊಪ್ಪಂಡ ತಂಡವು ಚೀಯಂಡಿರ ತಂಡವನ್ನು ೩-೧ ಗೋಲುಗಳಿಂದ ಪರಾಭವಗೊಳಿಸಿತು. ಕಂಜಿತAಡ ತಂಡವು ಮದ್ರಿರ ತಂಡವನ್ನು ಟೈಬ್ರೇಕರ್‌ನಲ್ಲಿ ೩-೧ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. -ಪಿ.ವಿ.ಪ್ರಭಾಕರ್