ಮಡಿಕೇರಿ, ಏ. ೬: ಮಿನಿ ಬಸ್ಸನ್ನು ಅಜಾಗರೂಕತೆಯಿಂದ ಚಲಾಯಿಸಿ ಇಬ್ಬರ ಸಾವಿಗೆ ಕಾರಣನಾದ ಅಪರಾಧಿಗೆ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಶಿಕ್ಷೆ ವಿಧಿಸಿದೆ.
ದಿನಾಂಕ : ೧೩.೭.೨೦೨೨ ರಂದು ಸುಂಟಿಕೊಪ್ಪದ ಆರ್. ಡಿ. ಥಾಮಸ್ ಎಂಬಾತ ಎಫ್ಸಿ ಇಲ್ಲದ ತನ್ನ ಮಹೇಂದ್ರ ಕಂಪೆನಿಯ ಮಿನಿ ಬಸ್ಸನ್ನು (ಕೆಎ ೧೨ ಬಿ. ೦೯೯೦) ಮಡಿಕೇರಿ - ಚೆಟ್ಟಳ್ಳಿ ಮುಖ್ಯ ರಸ್ತೆ ತಿರುವಿನಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ಬಿ.ಬಿ. ಲತೀಶ್ ಹಾಗೂ ಬಿ.ಎನ್. ಕೋಟೆ ಎಂಬವರು ತೆರಳುತ್ತಿದ್ದ ಪಲ್ಸರ್ ಬೈಕ್ಗೆ ಡಿಕ್ಕಿ ಪಡಿಸಿದ ಪರಿಣಾಮ ಗಾಯಗೊಂಡ ಸವಾರ ಲತೀಶ್ ಜಿಲ್ಲಾ ಆಸ್ಪತ್ರೆಯಲ್ಲಿ ಹಾಗೂ ಹಿಂಬದಿ ಕುಳಿತಿದ್ದ ಕೋಟೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದರು. ಈ ಪ್ರಕರಣದ ತನಿಖೆ ನಡೆಸಿದ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ೩ಏಳನೇ ಪುಟಕ್ಕೆ
(ಮೊದಲ ಪುಟದಿಂದ) ಯು. ಉಮೇಶ್ ಆರೋಪಿ ಥಾಮಸ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಸಿ.ಎನ್. ಮುನಿರತ್ನಮ್ಮ ಅವರು ಆರೋಪಿ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಆರ್.ಡಿ. ಥಾಮಸ್ಗೆ ೬ ತಿಂಗಳ ಸಾದಾ ಜೈಲು ಶಿಕ್ಷೆ, ರೂ ೨೦೦೦ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರ ಸಹಾಯಕ ಸರ್ಕಾರಿ ಅಭಿಯೋಜಕರಾದ ಜಿ.ಸಿ. ಶಾಂತಕುಮಾರಿ ವಾದ ಮಂಡಿಸಿದರು.