ಮಡಿಕೇರಿ, ಏ. ೫: ನಡೆದುಕೊಂಡು ತೆರಳುತ್ತಿದ್ದ ಪಾದಚಾರಿಗೆ ಕಾರು ಗುದ್ದಿದ್ದ ಪ್ರಕರಣಕ್ಕೆ ಸಂಬAಧಿಸಿದ ಕಾರನ್ನು ಮಡಿಕೇರಿ ನಗರ ಸಂಚಾರಿ ಪೊಲೀಸರು ಪತ್ತೆ ಹಚ್ಚಿದ್ದು, ಆರೋಪಿಯ ಪತ್ತೆಗೆ ತನಿಖೆ ಮುಂದುವರೆಸಿದ್ದಾರೆ.
ಮಾ. ೩೧ ರಂದು ಮಡಿಕೇರಿ ನಿವಾಸಿ ಅನ್ವರ್ ಎಂಬವರು ನಡೆದುಕೊಂಡು ಹೋಗುವಾಗ ಜನರಲ್ ತಿಮ್ಮಯ್ಯ ಕ್ರೀಡಾಂಗಣ ಬಳಿ ಕಾರೊಂದು ಹಿಂಬದಿಯಿAದ ಗುದ್ದಿ ವಾಹನ ನಿಲ್ಲಿಸದೆ ಚಾಲಕ ಪಾರಾರಿಯಾಗಿದ್ದ. ಪರಿಣಾಮ ಅನ್ವರ್ ತಲೆ ಭಾಗಕ್ಕೆ ಬಲವಾದ ಪೆಟ್ಟಾಗಿದ್ದು, ಕೈ, ಕಾಲು ಮುರಿತಕ್ಕೊಳಗಾಗಿ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಸಂಚಾರಿ ಪೊಲೀಸರು ಮಕ್ಕಂದೂರು ಬಳಿಯ ಅರಣ್ಯ ಪ್ರದೇಶದಲ್ಲಿ ನಿಲ್ಲಿಸಿದ್ದ ಎಸ್ಟೀಂ ಕಾರನ್ನು ವಶಪಡಿಸಿಕೊಂಡಿದ್ದಾರೆ. ಕಾರು ನಿಲ್ಲಿಸಿ ಚಾಲಕ ಮಡಿಕೇರಿ ಗೌಳಿಬೀದಿಯ ಕಿರಣ್ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಸಂಚಾರಿ ಪೊಲೀಸ್ ಠಾಣೆಯ ಠಾಣಾಧಿಕಾರಿ ದಿಲೀಪ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪನಿರೀಕ್ಷಕ ಐ.ಪಿ. ನಂದ, ಪ್ರಭಾಕರ್ ಹಾಗೂ ಲಕ್ಷಿö್ಮಪ್ರಸಾದ್ ರೈ ಭಾಗವಹಿಸಿದ್ದರು.