ಸಿದ್ದಾಪುರ, ಏ. ೪: ೭೬ ವರ್ಷ ಕಳೆದರೂ ವಿದ್ಯುತ್ ಬೆಳಕು ಸೇರಿದಂತೆ ಮೂಲ ಸೌಕರ್ಯ ವಂಚಿತರಾ ಗಿರುವ ತಟ್ಟಳ್ಳಿ ಆದಿವಾಸಿಗಳ ಕುಟುಂಬದ ಅತಂತ್ರ ಬದುಕಿನ ಬಗ್ಗೆ ‘ಶಕ್ತಿ’ ಯಲ್ಲಿ ವರದಿ ಪ್ರಕಟಗೊಂಡ ನಂತರ ಎಚ್ಚೆತ್ತುಕೊಂಡ ಅಧಿಕಾರಿಗಳು ಹಾಡಿಗೆ ಭೇಟಿ ನೀಡಿ ಆದಿವಾಸಿಗಳ ಕುಂದು ಕೊರತೆ ಆಲಿಸಿದ್ದಾರೆ.
ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸೆಕ್ಟರ್ ಅಧಿಕಾರಿ ನವೀನ್ ತಟ್ಟಳ್ಳಿ ಹಾಡಿಗೆ ಭೇಟಿ ನೀಡಿ ನೀತಿ ಸಂಹಿತೆ ಜಾರಿಯಲ್ಲಿ ರುವುದರಿಂದ ಚುನಾವಣೆ ನಂತರ ಹಾಡಿಯ ಎಲ್ಲಾ ಸಮಸ್ಯೆಗಳನ್ನು ಬಗೆಹರಿ ಸುವುದಾಗಿ ಭರವಸೆ ನೀಡಿದರು.
ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ಅವರ ನಿರ್ದೇಶನದಂತೆ ಹಾಡಿಗೆ ಭೇಟಿ ನೀಡಿ ಆದಿವಾಸಿ ಕುಟುಂಬಗಳೊAದಿಗೆ ಮಾತುಕತೆ ನಡೆಸಲಾಗಿದೆ. ವಿದ್ಯುತ್ ಸಮಸ್ಯೆ ಸದ್ಯದಲ್ಲೇ ಬಗೆಹರಿಯಲಿದ್ದು ಇಲಾಖೆ ಮೂಲಕ ಮನೆಗಳನ್ನು ನೀಡಲಾಗಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಗ್ರಾಮ ಪಂಚಾಯಿತಿ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದ್ದು.
ನೀರಿನ ಸಮಸ್ಯೆ ಎದುರಾದಲ್ಲಿ ಟ್ಯಾಂಕರ್ ಮೂಲಕ ನೀರು ವಿತರಿಸಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಸೂಚನೆ ನೀಡಲಾಗಿದೆ. ಫಲಾನು ಭವಿಗಳಿಗೆ ಗಂಗಾ ಕಲ್ಯಾಣ ಯೋಜನೆ ಅನುಷ್ಠಾನಗೊಂಡಿದ್ದು ಚುನಾವಣೆ ನಂತರ ಚಾಲನೆಯಾಗಲಿದೆ.
ಆದಿವಾಸಿಗಳ ಬೇಡಿಕೆಯನ್ನು ಕೂಡಲೇ ಈಡೇರಿಸುವುದಾಗಿ ಭರವಸೆ ನೀಡಿ ಮತದಾನ ಬಹಿಷ್ಕಾರವನ್ನು ಹಿಂತೆಗೆದುಕೊAಡು ಮತದಾನ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಆದಿವಾಸಿ ಮುಖಂಡ ಜೆ.ಕೆ ಅಪ್ಪಾಜಿ ಮಾತನಾಡಿ ಕಳೆದ ೭೬ ವರ್ಷಗಳಿಂದ ವಿದ್ಯುತ್ ಬೆಳಕು ಕಾಣದೆ ಕತ್ತಲ ಜೀವನ ನಡೆಸುತ್ತಿದ್ದಾರೆ. ಇಂದಿಗೂ ಮನೆಗಳ ಕಾಮಗಾರಿ ಪೂರ್ಣಗೊಂಡಿಲ್ಲ.
ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಿದೆ. ನಾಲ್ಕು ವರ್ಷ ಕಳೆದರೂ ಗಂಗಾ ಕಲ್ಯಾಣ ಯೋಜನೆ ಕಾಮಗಾರಿ ಪ್ರಾರಂಭವಾಗಿಲ್ಲ. ರಸ್ತೆಗಳು ಹದಗೆಟ್ಟಿದ್ದು ಹಲವು ವರ್ಷ ಗಳಿಂದಲೂ ಜೇನು ಕುರುಬ ಕುಟುಂಬಗಳು ಹಲವಾರು ಸಮಸ್ಯೆಗಳನ್ನ ಎದುರಿಸುತ್ತಲೇ ಇವೆ.
ಕಾಡು ಪ್ರಾಣಿಗಳ ಭಯದ ನಡುವೆ ಜೀವನ ನಡೆಸುತ್ತಿರುವ ಕುಟುಂಬಗಳು ಕತ್ತಲಿನಲ್ಲಿ ರಾತ್ರಿ ಕಳೆಯಬೇಕಾಗಿದೆ. ಆದಿವಾಸಿಗಳನ್ನು ಎಲ್ಲಾ ರೀತಿಯಲ್ಲೂ ಕಡೆಗಣಿಸುವುದು ಸರಿಯಲ್ಲ ಈಗ ಅಧಿಕಾರಿಗಳ ಭರವಸೆಯ ಹಿನ್ನೆಲೆ ಬಹಿಷ್ಕಾರ ಹಿಂತೆಗೆದುಕೊAಡು ಮತದಾನದಲ್ಲಿ ಪಾಲ್ಗೊಳ್ಳುತ್ತೇವೆ.
ಚುನಾವಣೆ ಕಳೆದ ನಂತರ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಗುಡಿ ಸಲು ಕಟ್ಟಿ ಪ್ರತಿಭಟನೆ ಮಾಡಬೇಕಾ ಗುತ್ತದೆ ಎಂದು ಹೇಳಿದರು.
ಹಾಡಿಯ ಮುಖಂಡೆ ಶೋಭಾ ಮಾತನಾಡಿ, ಎಲ್ಲಾ ಮೂಲ ಸೌಕರ್ಯದೊಂದಿಗೆ ನಮ್ಮ ಬೇಡಿಕೆ ಗಳನ್ನ ಆದಷ್ಟು ಬೇಗ ಈಡೇರಿಸಬೇ ಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಈ ಸಂದರ್ಭ ಸಿದ್ದಾಪುರ ಠಾಣಾಧಿಕಾರಿ ರಾಘವೇಂದ್ರ ಮಾಲ್ದಾರೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಶೇಖರ್ ವಿವಿಧ ಇಲಾಖೆಯ ಸಿಬ್ಬಂದಿಗಳು ಹಾಗೂ ಹಾಡಿಯ ನಿವಾಸಿಗಳಾದ ರುಕ್ಮಣಿ, ಕಮಲ, ಲತಾ, ಲಿಂಗಪ್ಪ, ಬೊಜಿ, ಪಾರ್ವತಿ, ಅಪ್ಪಾಜಿ, ಮಹೇಶ, ರಮೇಶ, ಸುರೇಶ, ರಾಜಣ್ಣ, ಗೌರಿ, ಹರೀಶ, ಶಿವಮ್ಮ, ರಾಧ, ಕೆಂಚಮ್ಮ, ಕುಮಾರಿ, ಗೌರು, ಶಿವಣ್ಣ, ಚಂದ್ರ, ರವಿ, ಸುರೇಶ ಸೇರಿದಂತೆ ಮತ್ತಿತರರು ಹಾಜರಿದ್ದರು.
-ಎಸ್.ಎಂ. ಮುಬಾರಕ್