ನಾಪೋಕ್ಲು, ಏ. ೫: ಸಮೀಪದ ಚೆರಿಯಪರಂಬು ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಕುಂಡ್ಯೋಳAಡ ಕಪ್ ಹಾಕಿ ನಮ್ಮೆಯ ಏಳನೇ ದಿನದ ಪಂದ್ಯಾಟದಲ್ಲಿ ಕಂಗಾAಡ, ಮೇಚಂಡ ತಂಡಗಳು ೫ ಗೋಲುಗಳ ಅಂತರದಿAದ ಭರ್ಜರಿ ಜಯ ದಾಖಲಿಸಿದೆ.

ಪೊರ್ಕೊಂಡ ಮತ್ತು ಕಂಗಾAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಂಗಾAಡ ತಂಡವು ಪೊರ್ಕೊಂಡ ತಂಡವನ್ನು ೫-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮೇಚಂಡ ಮತ್ತು ಬಲ್ಲಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೇಚಂಡ ತಂಡವು ಬಲ್ಲಂಡ ತಂಡವನ್ನು ೫-೦ ಗೋಲುಗಳ ಅಂತರದಿAದ ಪರಾಭವಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು.

ಚೆರುಮಂದAಡ ಮತ್ತು ಕೇಚೇಟ್ಟಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೆರುಮಂದAಡ ತಂಡವು ಕೇಚೇಟ್ಟಿರ ತಂಡವನ್ನು ೩-೧ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ಕಳ್ಳಂಗಡ ಮತ್ತು ಅಪ್ಪಚ್ಚಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕಳ್ಳಂಗಡ ತಂಡವು ಅಪ್ಪಚ್ಚಿರ ತಂಡವನ್ನು ೧-೦ ಗೋಲುಗಳ ಅಂತರದಿAದ ಪರಾಭವಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ನಾಯಕಂಡ ಮತ್ತು ತೆಕ್ಕಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ತೆಕ್ಕಡ ತಂಡವು ನಾಯಕಂಡ ತಂಡವನ್ನು೪-೦ ಗೋಲಿನಿಂದ ಮಣಿಸಿತು.

ಮಂಡೆಯಡ ಮತ್ತು ನಂಬ್ಯಪAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಂಡೆಯಡ ತಂಡವು ನಂಬ್ಯಪAಡ ತಂಡವನ್ನು ೧-೦ ಗೋಲುಗಳ ಅಂತರದಿAದ ಪರಾಭವಗೊಳಿಸಿ ಮುಂದಿನ ಸುತ್ತು ಪ್ರವೇಶಿಸಿತು. ಚೆಟ್ಟಿರ ಮತ್ತು ಇಂದAಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಇಂದAಡ ತಂಡವು ಚೆಟ್ಟಿರ ತಂಡವನ್ನು ೧-೦ ಗೋಲುಗಳಿಂದ ಪರಾಭವಗೊಳಿಸಿತು. ಚೊಟ್ಟೆಯಂಡ ಮತ್ತು ಮೀದೇರಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೀದೇರಿರ ತಂಡವು ಚೊಟ್ಟೆಯಂಡ ತಂಡವನ್ನು ೧-೦ ಗೋಲುಗಳಿಂದ ಪರಾಭವಗೊಳಿಸಿತು.

ಅರಮಣಮಾಡ ಮತ್ತು ಚೀಯಕಪೂವಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚೀಯಕಪೂವಂಡ ತಂಡವು ಅರಮಣಮಾಡ ತಂಡವನ್ನು ೨-೦ ಗೋಲುಗಳಿಂದ ಸೋಲಿಸಿತು. ಕೊಟ್ಟುಕತ್ತೀರ ಮತ್ತು ಮಾಣಿಪಂಡ ತಂಡಗಳÀ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಾಣಿಪಂಡ ತಂಡವು ಕೊಟ್ಟುಕತ್ತೀರ ತಂಡವನ್ನು ೨-೦ ಗೋಲಿನಿಂದ ಸೋಲಿಸಿತು. ಚಿಂಡಮಾಡ ಮತ್ತು ಕೇಟೋಳಿರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಚಿಂಡಮಾಡ ತಂಡವು ಕೇಟೋಳಿರ ತಂಡವನ್ನು ೨-೧ ಗೋಲಿನಿಂದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಕುಂಚೇಟ್ಟಿರ ಮತ್ತು ಮಾಪಣಮಾಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮಾಪಣಮಾಡ ತಂಡವು ಕುಂಚೇಟ್ಟಿರ ತಂಡವನ್ನು ತಂಡವನ್ನು ೨-೧ ಗೋಲಿನಿಂದ ಪರಾಭವಗೊಳಿಸಿತು.

ಪುಲ್ಲೇರ ಮತ್ತು ಅಜ್ಜಿನಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಅಜ್ಜಿನಂಡ ತಂಡವು ಪುಲ್ಲೇರ ತಂಡವನ್ನು ೨-೧ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ಕರವಂಡ ಮತ್ತು ಕೋಳೆರ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಕರವಂಡ ತಂಡವು ಕೋಳೆರ ತಂಡವನ್ನು ಟೈಬ್ರೇಕರ್‌ನಲ್ಲಿ ೪-೩ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಬಾಚಿನಾಡಂಡ ಮತ್ತು ಚೇಮಿರ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯವು ಚೇಮಿರ ತಂಡದ ಗೈರಿನಿಂದ ಮತ್ತು ಬುಟ್ಟಿಯಂಡ ಮತ್ತು ಬೇಪುಡಿಯಂಡ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯ ಬುಟ್ಟಿಯಂಡ ತಂಡದ ಗೈರಿನ ಹಿನ್ನಲೆಯಲ್ಲಿ ಎರಡು ತಂಡಗಳು ಮುಂದಿನ ಸುತ್ತು ಪ್ರವೇಶಿಸಿದವು. ಚಂಗುಲAಡ ಮತ್ತು ಪಳೆಯಂಡ ತಂಡಗಳ ನಡುವೆ ನಡೆಯಬೇಕಿದ್ದ ಪಂದ್ಯವನ್ನು ತಾ. ೮ಕ್ಕೆ ಮುಂದೂಡಲಾಯಿತು.

ವಧು-ವರರ ಸಮಾವೇಶ

ಕುಂಡ್ಯೋಳAಡ ಹಾಕಿ ನಮ್ಮೆ ನಡೆಯುತ್ತಿರುವ ಮೈದಾನದಲ್ಲಿ ತಾ. ೭ ರಂದು ತಂದ್ ಕಾರಡ ಬಿಡಾರ (ವಧು-ವರರ ಸಮಾವೇಶ) ನಡೆಯಲಿದೆ.

-ಪಿ.ವಿ.ಪ್ರಭಾಕರ್