ಮಡಿಕೇರಿ, ಏ. ೪: ಲೇಖಕಿ ಕೂತಂಡ ಪಾರ್ವತಿ ಪೂವಯ್ಯನವರ ಕುರಿತ ಕೃತಿ ‘ಅವ್ವ’ ತಾ.೬ ರಂದು ಸಂಜೆ ೬ ಗಂಟೆಗೆ ಮಡಿಕೇರಿಯ ಭಾರತೀಯ ವಿದ್ಯಾ ಭವನ ಕೊಡಗು ಕೇಂದ್ರದಲ್ಲಿ ಲೋಕಾರ್ಪಣೆಗೊಳ್ಳಲಿದೆ..
ಮಡಿಕೇರಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಆಂಗ್ಲ ವಿಭಾಗದ ಸಹ ಪ್ರಾಧ್ಯಾಪಕಿ ಡಾ. ನಯನಾ ಕಶ್ಯಪ್, ಈ ಕೃತಿಯಲ್ಲಿ ಪಾರ್ವತಿ ಪೂವಯ್ಯ ಅವರ ವ್ಯಕ್ತಿಚಿತ್ರ ಮತ್ತು ಕಥೆಗಳನ್ನು ಸಂಕಲಿಸಿ ಇಂಗ್ಲಿಷ್ಗೆ ಅನುವಾದಿಸಿದ್ದಾರೆ.
ಮೈಸೂರು ಮಿತ್ರ ಹಾಗೂ ಸ್ಟಾರ್ ಆಫ್ ಮೈಸೂರು ಸಂಪಾದಕ ಕೆ.ಬಿ. ಗಣಪತಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ಭಾರತೀಯ ವಿದ್ಯಾ ಭವನದ ಪ್ರಮುಖ ಕೆ.ಎಸ್. ದೇವಯ್ಯ, ಡಾ. ಮನೋಹರ್ ಪಾಟ್ಕರ್, ಕೆ.ಪಿ. ಉತ್ತಪ್ಪ, ಬಾಲಾಜಿ ಕಶ್ಯಪ್ ಉಪಸ್ಥಿತರಿರುತ್ತಾರೆ.