ಮಡಿಕೇರಿ, ಏ.೫ : ಭಾರತ ಚುನಾವಣಾ ಆಯೋಗವು ತಾ. ೨೬ ರಂದು ಲೋಕಸಭಾ ಸಾರ್ವತ್ರಿಕ ಚುನಾವಣೆ ೨೦೨೪ ರ ಸಂಬAಧ ಕೊಡಗು ಜಿಲ್ಲೆಯಲ್ಲಿ ಮತದಾನ ದಿನವಾಗಿದ್ದು, ಈ ದಿನದಂದು ಜಿಲ್ಲೆಯಾದ್ಯಂತ ಎಲ್ಲಾ ಕಾರ್ಖಾನೆಗಳು, ಅಂಗಡಿಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಇತರ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಪ್ರಜಾ ಪ್ರತಿನಿಧಿ ಕಾಯ್ದೆ, ೧೯೫೧ ರ ಸೆಕ್ಷನ್ ೧೩೫(ಬಿ) ರಡಿ ಮತ್ತು ಕರ್ನಾಟಕ ಕೈಗಾರಿಕಾ ಸಂಸ್ಥೆಗಳ (ರಾಷ್ಟಿçÃಯ ಮತ್ತು ಹಬ್ಬದ ರಜೆಗಳು) ಕಾಯ್ದೆ, ೧೯೬೩ ಕಲಂ ೩ (ಎ) ಹಾಗೂ ನೆಗೋಷೇಬಲ್ ಇನ್ಸೂ÷್ಟçಮೆಂಟ್ಸ್ ಆಕ್ಟ್ (ಓegoಣiಚಿbಟe Iಟಿsಣಡಿumeಟಿಣs ಂಛಿಣ), ೧೮೮೧ ಸೆಕ್ಷನ್ ೨೫ ರನ್ವಯ ಅರ್ಹ ಮತದಾರರಿಗೆ ವೇತನ ಸಹಿತ ರಜೆ ಘೋಷಿಸಲಾಗಿದ್ದು, ಸಂವಿಧಾನಾತ್ಮಕ/ಶಾಸನಾತ್ಮಕ ಹಕ್ಕಾದ ಮತವನ್ನು ಚಲಾಯಿಸುವುದಕ್ಕಾಗಿ ಎಲ್ಲಾ ಮಾಲೀಕರು/ ಸಂಸ್ಥೆಯವರು ಅನುವು ಮಾಡಿಕೊಡುವಂತೆ ಕೊಡಗು ಉಪವಿಭಾಗದ ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ.