ಮಡಿಕೇರಿ, ಏ. ೪: ಪೊನ್ನಂಪೇಟೆ ತಾಲೂಕು ಹುದಿಕೇರಿ ನವಚೈತನ್ಯ ಶ್ರೀ ಮುತ್ತಪ್ಪ ಮಡಪುರ ಸನ್ನಿದಾನದಲ್ಲಿ ತಾ. ೭, ೮, ೯ ರಂದು ಶ್ರೀ ಮುತ್ತಪ್ಪನ್ ತಿರುವಪ್ಪನ್ ಮಹೋತ್ಸವ ನಡೆಯಲಿದೆ.

ತಾ. ೭ ರಂದು ಪ್ರಾತಃಕಾಲ ಗಣಪತಿ ಹೋಮ, ಧ್ವಜಾರೋಹಣ, ಸಾಯಂಕಾಲ ಮುತ್ತಪ್ಪನ್ ವೆಳ್ಳಾಟಂ, ತಾ. ೮ ರಂದು ಮಧ್ಯಾಹ್ನ ೩ ಗಂಟೆಗೆ ಗುಳಿಗನ ವೆಳ್ಳಾಟ, ರಾತ್ರಿ ಭಸುರಿ ಮಾಲೆ ದೈವದೊಂದಿಗೆ ಮೆರವಣಿಗೆ, ಸಿಡಿಮದ್ದು ಪ್ರದರ್ಶನ, ತಾ. ೯ ರ ಪ್ರಾತಃಕಾಲ ಗುಳಿಗ ಕುಟ್ಟಿಚಾತ ಮುತ್ತಪ್ಪ ತಿರುವಪ್ಪ ಕಾರೋಣ ಭಸುರಿ ಮಾಲೆ ಪೊವ್ವದಿ ಇತರ ದೈವಗಳ ಕೋಲಗಳು ನಡೆಯುತ್ತದೆ. ತಾ. ೯ ರಂದು ಮಧ್ಯಾಹ್ನ ಅನ್ನಸಂತರ್ಪಣೆ ಇರಲಿದೆ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.