ಸುಂಟಿಕೊಪ್ಪ, ಏ. ೩: ಗದ್ದೆಹಳ್ಳದಲ್ಲಿ ನೆಲೆಗೊಂಡಿರುವ ಕೊಡಗಂಲ್ಲೂರ್ ಭದ್ರಕಾಳಿ ಶ್ರೀ ಕುರುಂಭ (ಭಗವತಿ) ದೇವಸ್ಥಾನ ೫೮ನೇ ವಾರ್ಷಿಕೋತ್ಸವದ ಅಂಗವಾಗಿ ತಾ. ೬ ಮತ್ತು ೭ ರಂದು ಮಾಹಾಪೂಜೆ ನಡೆಯಲಿದೆ.

ತಾ. ೬ ರಂದು ಬೆಳಿಗ್ಗೆ ೬ ಗಂಟೆಗೆ ಗಣಪತಿ ಹೋಮ, ೬.೩೦ಕ್ಕೆ ಗಣಪತಿ ಪೂಜೆ, ಸಂಜೆ ೬.೪೫ಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪೂಜೆ, ಸಂಜೆ ೭ ಗಂಟೆಗೆ ಶ್ರೀ ಮುತ್ತಪ್ಪ ಪೈಂಗುತ್ತಿ, ೭.೩೦ಕ್ಕೆ ಶ್ರೀ ಚಾಮುಂಡೇಶ್ವರಿ ದೇವಿ ಪೂಜೆ, ೭.೪೫ಕ್ಕೆ ಗುಳಿಗನ ಪೂಜೆ, ೮ ಗಂಟೆಗೆ ಶ್ರೀ ಭದ್ರಕಾಳಿ ದೇವಿಗೆ ಆರ್ಚನೆ, ನೈವೇದ್ಯ ಪೂಜೆ, ರಾತ್ರಿ ೮.೩೦ಕ್ಕೆ ದೇವಿದರ್ಶನ, ೮.೪೫ಕ್ಕೆ ತಲಪುರಿ ಮೆರವಣಿಗೆ, ೯ ಗಂಟೆಗೆ ವಸೂರಿ ಮಾಲೆ ದೇವರ ವೆಳ್ಳಾಟಂ ನಂತರ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.

ತಾ. ೭ ರಂದು ಬೆಳಿಗ್ಗೆ ೯ ಗಂಟೆಗೆ ದೇವಿ ಹರಕೆ, ೧೦ ರಿಂದ ೧೧ ರವರೆಗೆ ದೇವಿಗೆ ಹರಕೆ ಅರ್ಪಣೆ ನಡೆಯಲಿದೆ.