ಮಡಿಕೇರಿ, ಏ. ೪: ಸುಂಟಿಕೊಪ್ಪ ಸಮೀಪದ ಹರದೂರುವಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಶ್ರೀ ಆದಿ ನಾಗಬ್ರಹ್ಮ ದೈವಗಳ ಮತ್ತು ಕೊರಗ ತನಿಯ ದೈವದ ಹಾಗೂ ಮಂತ್ರವಾದಿ ಗುಳಿಗನ ನೇಮೋತ್ಸವ ತಾ. ೬ ಮತ್ತು ೭ ರಂದು ನಡೆಯಲಿದೆ.

ತಾ. ೬ ರಂದು ಮಧ್ಯಾಹ್ನ ೧೨ ಗಂಟೆಗೆ ಆಯುಧ ಪೂಜೆ, ಸಂಜೆ ೫ ಗಂಟೆಗೆ ನಿತ್ಯಪೂಜೆ ಮತ್ತು ಭಂಡಾರ ಹೊರಡುವುದು, ಸಂಜೆ ೬ ಗಂಟೆಗೆ ಮಂತ್ರವಾದಿ ಗುಳಿಗನ ನೇಮ, ರಾತ್ರಿ ೯.೩೦ ಗಂಟೆಗೆ ಶ್ರೀ ಆದಿ ನಾಗಬ್ರಹ್ಮ ಮೊಗೇರ ದೈವಗಳ ಗರಡಿ ಇಳಿಯುವುದು, ರಾತ್ರಿ ೯ ಗಂಟೆಗೆ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ೧೨.೩೦ ಗಂಟೆಗೆ ಆದಿ ಮಾಯೆ ತನ್ನಿ ಮಾನಿಗ ಗರಡಿ ಇಳಿಯುವುದು, ತಾ. ೭ ರಂದು ಬೆಳಿಗ್ಗೆ ೪.೩೦ ಗಂಟೆಗೆ ಹರಕೆ ಮತ್ತು ಕಾಣಿಕೆ, ಬೆಳಿಗ್ಗೆ ೮ ಗಂಟೆಗೆ ಶ್ರೀ ಕೊರಗ ತನಿಯ ದೈವದ ನೇಮ ನಡೆಯಲಿದೆ.