ಸುAಟಿಕೊಪ್ಪ, ಏ. ೩: ಸುಂಟಿಕೊಪ್ಪ ಶ್ರೀ ಚಾಮುಂಡೇಶ್ವರಿ, ಶ್ರೀ ಮುತ್ತಪ್ಪ ಮತ್ತು ಪರಿವಾರ ದೇವರುಗಳ ತೆರೆ ಮಹೋತ್ಸವ ವಿಶೇಷ ಪೂಜಾ ವಿಧಿ ವಿಧಾನ ಗಳೊಂದಿಗೆ ಮುಕ್ತಾಯಗೊಂಡಿತು. ಶನಿವಾರ ಮುಂಜಾನೆ ಧ್ವಜಾ ರೋಹಣದೊಂದಿಗೆ ಆರಂಭಗೊAಡ ತೆರೆ ಮಹೋತ್ಸವವು ಸೋಮವಾರ ಮಧ್ಯಾಹ್ನದವರೆಗೂ ವಿವಿಧ ಕೋಲಗಳು ಸೇರಿದಂತೆ ಪೂಜಾ ವಿಧಿ ವಿಧಾನಗಳೊಂದಿಗೆ ನಡೆದವು ಮಧ್ಯಾಹ್ನ ಬಾವುಟವನ್ನು ಇಳಿಸುವುದರೊಂದಿಗೆ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ ತೆರೆ ಸಂಪನ್ನಗೊAಡಿತು.

ಸ್ಥಳೀಯ ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಾಲಯದ ೫೬ನೇ ವರ್ಷದ ತೆರೆ ಮಹೋತ್ಸವದ ಅಂಗವಾಗಿ ದೇವಾಲಯವನ್ನು ಬಣ್ಣ ಬಣ್ಣದ ವಿದ್ಯುತ್ ದೀಪ ಹೂ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಚಂಡೆಮೇಳದೊAದಿಗೆ ಆರಂಭಗೊAಡ ತೆರೆಮಹೋತ್ಸವವು ಭಾನುವಾರ ರಾತ್ರಿ ಸುಂಟಿಕೊಪ್ಪ, ಕೊಡಗರಹಳ್ಳಿ, ಕಂಬಿಬಾಣೆ, ಹೊಸಕೋಟೆ, ಗರಗಂದೂರು, ಮಾದಾಪುರ, ಚೆಟ್ಟಳ್ಳಿ, ಭೂತನಕಾಡು, ಕೆದಕಲ್ ಹಾಗೂ ಬಾಳೆಕಾಡು ಭಾಗಗಳಿಂದ ಸಾವಿರಾರು ಮಂದಿ ಭಕ್ತಾಧಿಗಳು ತೆರೆ ಮಹೋತ್ಸವದಲ್ಲಿ ಭಾಗಿಯಾಗಿದ್ದರು.

ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನದ ಆರ್ಚಕರಾದ ಮಂಜುನಾಥ ಉಡುಪ ಹಾಗೂ ಮುತ್ತಪ್ಪ ದೇವಸ್ಥಾನ ಪೂಜಾರಿ ಶಿವರಾಂ ಅವರುಗಳು ಶನಿವಾರ ದಂದು ಬೆಳಿಗ್ಗೆ ೬.೪೫ ಗಂಟೆಗೆ ಗಣಪತಿ ಹವನ ೭.೧೫ ಗಂಟೆಗೆ ಶುದ್ಧಿ ಪುಣ್ಯಾಹ, ವಿಶೇಷ ಪೂಜಾ ಕೈಂಕರ್ಯಗಳನ್ನು ಕಾರ್ಯವನ್ನು ನಡೆಸುವುದರೊಂದಿಗೆ ೭.೩೦ ಗಂಟೆಗೆ ಬಾವುಟವನ್ನು ಏರಿಸುವ ಮೂಲಕ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ಮತ್ತು ಪರಿವಾರ ದೇವರುಗಳ ತೆರೆ ಮಹೋತ್ಸವಕ್ಕೆ ಚಾಲನೆಯೊಂದಿಗೆ ಆರಂಭಗೊAಡಿತು. ಸಂಜೆ ೪ ಗಂಟೆಗೆ ಶ್ರೀ ಮುತ್ತಪ್ಪ ದೇವರ ಮಲೆ ಇಳಿಸುವಿಕೆ, ರಾತ್ರಿ ೫ ಗಂಟೆಗೆ ಶ್ರೀ ಮುತ್ತಪ್ಪ ವೆಳ್ಳಾಟಂ, ೮ ಗಂಟೆಗೆ ಚಂಡೆಮೇಳವು ನಡೆಯಿತು.

ಭಾನುವಾರ ಬೆಳಿಗ್ಗೆ ೭ ಗಂಟೆಗೆ ವಾದ್ಯಮೇಳ, ೯ ಗಂಟೆಗೆ ವಿಷ್ಣುಮೂರ್ತಿ ವೆಳ್ಳಾಟಂ, ೧೧ ಗಂಟೆಗೆ ಶ್ರೀಶಾಸ್ತಪ್ಪನ ವೆಳ್ಳಾಟಂ, ೧೧ ಗಂಟೆಗೆ ಕಳಿಗ ಪಾಟ್, ಅಂದಿವೇಳೆಕಳಸA ಸ್ವೀಕರಿಸುವುದು, ವೆಳ್ಳೆಕಟ್ಸ್, ಅಪರಾಹ್ನ ೧ ಗಂಟೆಗೆ ಶ್ರೀ ಗುಳಿಗನ ಕೋಲ, ೨.ಗಂಟೆಗೆ ಶ್ರೀ ಶಾಸ್ತಪ್ಪನ ಕೋಲ, ಸಂಜೆ ೪ ಗಂಟೆಗೆ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ಅಡಿಯರ ಮೆರವಣಿಗೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ಬಾಳೆಕಾಡುವಿನ ಶ್ರೀ ಮುತ್ತಪ್ಪ ಸೇವಾ ಸಮಿತಿ ವತಿಯಿಂದ ೫೯ನೇ ವಾರ್ಷಿಕೋತ್ಸವ ಅಂಗವಾಗಿ ವಿದ್ಯುತ್ ಅಲಂಕೃತ ಭವ್ಯ ಮಂಟಪದಲ್ಲಿ ಶ್ರೀ ಮುತ್ತಪ್ಪ ದೇವರ ಪ್ರತಿಷ್ಠಾಪಿಸಿ, ಮಹಿಳೆಯರು ಮತ್ತು ತಲಾವನ್ನು ಹಿಡಿದು, ಚಂಡೆ ಹಾಗೂ ವಾದ್ಯಗೋಷ್ಠಿ, ಕಲಶ, ದೇವರ ಕಲಾ ಕೃತಿಯ ಬಿಂಬವನ್ನು ಹೊತು ಮೆರ ವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು.

೭ ಗಂಟೆಗೆ ಶ್ರೀ ಮುತ್ತಪ್ಪ ವೆಳ್ಳಾಟಂ, ೮ ಗಂಟೆಗೆ ಶ್ರೀ ಚಾಮುಂಡೇಶ್ವರಿ ಮತ್ತು ಬೆಳಗಿನ ಜಾವ ೪ ಗಂಟೆಗೆ ಶ್ರೀ ಮುತ್ತಪ್ಪ ಮತ್ತು ತಿರುವಪ್ಪ ದೇವರ ಕೋಲ, ೮ ಗಂಟೆಗೆ ಶ್ರೀ ರಕ್ತ ಚಾಮುಂಡಿ ವೆಳ್ಳಾಟಂ, ೮.೩೦ ಗಂಟೆಗೆ ಶ್ರೀ ವಸೂರಿಮಾಲೆ ಸ್ನಾನಕ್ಕೆ ಹೊರಡು ವುದು, ೫ ಗಂಟೆಗೆ ಪಟಾಕಿಗಳನ್ನು ಸಿಡಿಸಲಾಯಿತು. ಸೋಮವಾರ ಬೆಳಿಗ್ಗೆ ೭ ಗಂಟೆಗೆ ಶ್ರೀ ರಕ್ತ ಚಾಮುಂಡಿ ಕೋಲ, ೮ ಗಂಟೆಗೆ ಶ್ರೀ ಮುತ್ತಪ್ಪ ಮತ್ತು ಶ್ರೀ ತಿರುವಪ್ಪ ದೇವರ ಪಳ್ಳಿವೇಟ, ೯. ಗಂಟೆಗೆ ಶ್ರೀ ವಿಷ್ಣು ಮೂರ್ತಿ ಕೋಲ, ೧೦ ಗಂಟೆಗೆ ಶ್ರೀ ಚಾಮುಂಡೇಶ್ವರಿ ಕೋಲ, ೧೧ ಗಂಟೆಗೆ ಶ್ರೀ ವಸೂರಿ ಮಾಲೆ ಕೋಲ, ಮಧ್ಯಾಹ್ನ ೧೨ ಗಂಟೆಗೆ ಗುರುಶ್ರೀ ದರ್ಪಣ, ಅಪರಾಹ್ನ ೨ ಗಂಟೆಗೆ ಬಾವುಟ ಇಳಿಸುವುದರೊಂದಿಗೆ ತೆರೆ ಮಹೋತ್ಸವವು ಸಂಪನ್ನಗೊAಡಿತು.

ಈ ಸಂದರ್ಭ ಶ್ರೀ ಚಾಮುಂಡೇಶ್ವರಿ, ಶ್ರೀಮುತ್ತಪ್ಪ ದೇವಸ್ಥಾನ ಸಮಿತಿ ಅಧ್ಯಕ್ಷ ಪಟ್ಟೆಮನೆ ಉದಯಕುಮಾರ್, ಉಪಾಧ್ಯಕ್ಷ ಪಿ.ಸಿ. ಮೋಹನ್, ಪ್ರಧಾನ ಕಾರ್ಯದರ್ಶಿ ಪಿ.ಸಿ. ಮೋಹನ್, ಖಜಾಂಚಿ ರಮೇಶ್ ಪಿಳ್ಳೆ, ಸಹಕಾರ್ಯದರ್ಶಿ ಯಂಕನ ಕೌಶಿಕ್, ಜೀರ್ಣೋದ್ಧಾರ ದೇವಸ್ಥಾನ ಸಮಿತಿ ಮಾಜಿ ಅಧ್ಯಕ್ಷ ವೈ.ಎಂ. ಕರುಂಬಯ್ಯ, ಕಾರ್ಯದರ್ಶಿ ಶಶಿಕಾಂತ ರೈ, ಖಜಾಂಚಿ ಎಸ್.ಜಿ. ಶ್ರೀನಿವಾಸ್, ಕೆ.ಪಿ. ಜಗನ್ನಾಥ್, ದೇವಸ್ಥಾನ ಸಮಿತಿ ಮಾಜಿ ಕಾರ್ಯ ದರ್ಶಿ ಸುರೇಶ್ ಗೋಪಿ, ಎ. ಶ್ರೀಧರನ್, ಧನು ಕಾವೇರಪ್ಪ, ಎಂ.ಎಸ್. ಸುನಿಲ್, ಬಿ.ಡಿ. ರಾಜು ರೈ, ದಿನು ದೇವಯ್ಯ, ವಿ.ಎ. ಸಂತೋಷ್ ಕುಮಾರ್, ಬಿ.ಕೆ. ಮೋಹನ್, ಕೆ.ಪಿ. ವಿನೋದ್, ದೇವ ಸ್ಥಾನ ಅರ್ಚಕರಾದ ಮಂಜುನಾಥ ಉಡುಪ, ಮುತ್ತಪ್ಪ ದೇವಸ್ಥಾನ ಪೂಜಾರಿ ಶಿವರಾಮನ್ ಇದ್ದರು.