ಮಡಿಕೇರಿ, ಏ. ೪: ಮಡಿಕೇರಿಯ ಶ್ರೀ ಮುತ್ತಪ್ಪನ್ ಕ್ಷೇತ್ರದÀ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ಹಾಗೂ ಶ್ರೀ ಮುತ್ತಪ್ಪ ಜಾತ್ರಾ ಮಹೋತ್ಸವಕ್ಕೆ ಇಂದು ಸಂಜೆ ಚಾಲನೆ ನೀಡಲಾಯಿತು.

ಬೆಳಿಗ್ಗೆ ಗಣಪತಿ ಹೋಮ, ಸುಬ್ರಹ್ಮಣ್ಯ ಸ್ವಾಮಿಗೆ ಅಷ್ಟಾಭಿಷೇಕ, ಅಯ್ಯಪ್ಪ ದೇವರಿಗೆ ತುಪ್ಪಾಭಿಷೇಕ, ನಾಗದೇವರಿಗೆ ತಂಬಿಲ ಸಮರ್ಪಣೆ, ಕಲಶಾಭಿಷೇಕ, ಮಹಾಮಂಗಳಾರತಿಯೊAದಿಗೆ ಪ್ರಸಾದ ವಿತರಣೆ ನೆರವೇರಿತು.

ಸಂಜೆ ಧ್ವಜಾರೋಹಣದ ಬಳಿಕ ಮುತ್ತಪ್ಪ ದೇವರ ಮಲೆ ಇಳಿಸುವದು, ಮುತ್ತಪ್ಪ ದೇವರ ವೆಳ್ಳಾಟಂ, ಭಗವತಿ ದೇವಿಗೆ ದೀಪಾರಾಧನೆ, ಪುಷ್ಪಾರ್ಚನೆ, ಭಕ್ತಾದಿಗಳಿಂದ ಹರಕೆ ಕೋಲಗಳು ಜರುಗಿದವು.

ರಂಗ ಮಂದಿರ ಉದ್ಘಾಟನೆ

ಇದೇ ಸಂದರ್ಭದಲ್ಲಿ ಮುತ್ತಪ್ಪ ಮಹಿಳಾ ವೇದಿಕೆ ವತಿಯಿಂದ ನಿರ್ಮಿಸಲಾಗಿರುವ ಶ್ರೀ ಮುತ್ತಪ್ಪ ರಂಗಮAದಿರವನ್ನು ಉದ್ಘಾಟನೆ ಮಾಡಲಾಯಿತು. ಈ ಸಂಬAಧ ಏರ್ಪಡಿಸಲಾಗಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪರಿಶಿನಿಕಡವು ಶ್ರೀ ಮುತ್ತಪ್ಪ ಕ್ಷೇತ್ರದ ಆಚಾರಪಟ್ಟ ಮಡೆಯಚ್ಚನ್ ಬ್ಲಾತೂರ್ ಚಂದ್ರನ್ ಮಡೆಯಚ್ಚನ್, ಪದ್ಮಶ್ರೀ ರಾಣಿ ಮಾಚಯ್ಯ, ಹಿರಿಯ ವೈದ್ಯ ಡಾ. ಎಂ.ಜಿ.ಪಾಟ್ಕರ್, ಡಾ. ಶ್ಯಾಂ ಅಪ್ಪಣ್ಣ, ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್, ಉತ್ಸವ ಸಮಿತಿ ಅಧ್ಯಕ್ಷ ಬಿ.ಕೆ. ರವೀಂದ್ರ ರೈ, ಕಾರ್ಯದರ್ಶಿ ಸುಬ್ರಮಣಿ, ಸ್ಥಾಪಕ ಟ್ರಸ್ಟಿ ಎಂ.ಕೆ.ರಾಘವನ್, ಮಹಿಳಾ ವೇದಿಕೆ ಅಧ್ಯಕ್ಷೆ ಶಾರದಾ ರಾಮನ್, ಇತರರಿದ್ದರು.

ಇದೇ ಸಂದರ್ಭದಲ್ಲಿ ರಾಣಿ ಮಾಚಯ್ಯ, ಯೋಗ ಗುರು ಕೆ.ಕೆ.ಮಹೇಶ್ ಕುಮಾರ್, ರಂಗಮAದಿರ ನಿರ್ಮಾಣ ಮಾಡಿದ ಕುಮಾರ್ ಹಾಗೂ ಮಂಜುನಾಥ್ ಅವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

ಸಾಂಸ್ಕೃತಿಕ ಸಂಗಮ

ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಕೂಡ ಏರ್ಪಡಿಸಲಾಗಿತ್ತು. ಮಡಿಕೇರಿಯ ಕಲಾ ಕಾವ್ಯ ನೃತ್ಯ ಶಾಲೆಯ ವಿಧುಷಿ ದುಗ್ಗಳ ಕಾವ್ಯಶ್ರೀ ಕಪಿಲ್ ಅವರ ಮಾರ್ಗದರ್ಶನದಲ್ಲಿ ಕಲಾವಿದರು ಭರತ ನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ತಾ.೫ರಂದು (ಇಂದು) ಸಂಜೆ ೫.೩೦ ಗಂಟೆಗೆ ಗಾಂಧಿಮೈದಾನದ ಬಳಿಯಿಂದ ಕಲಶ ಹಾಗೂ ತಾಲಿಪೊಲಿ ಮೆರವಣಿಗೆ ನಡೆಯಲಿದೆ.