ಚೆಯ್ಯಂಡಾಣೆ, ಏ. ೩: ಸಮಸ್ತ ಕೋರ್ಡಿನೇಷನ್ ಸಮಿತಿ ವತಿಯಿಂದ ಎಡಪಾಲ ಪೊಯಾಪಳ್ಳಿ ಮುಸ್ಲಿಂ ಜಮಾಅತ್ ಅಧೀನದಲ್ಲಿ ಮಜ್ಲಿಸುನ್ನೂರ್ ಹಾಗೂ ಗ್ರಾಂಡ್ ಇಫ್ತಾರ್ ಮೀಟ್ ತಾ.೬ ರಂದು ನಡೆಯಲಿದೆ.
ಕಾರ್ಯಕ್ರಮವನ್ನು ಎಸ್ಕೆಎಸ್ಎಸ್ಎಫ್ ಹಾಗೂ ಎಸ್ವೈಎಸ್ ಜಂಟಿಯಾಗಿ ಆಯೋಜಿಸಲಿದ್ದು ೨ ಗಂಟೆಗೆ ಅಂಡತ್ಮಾನಿ ದರ್ಗಾ ಝಿಯಾರತ್ನೊಂದಿಗೆ ಕಾರ್ಯಕ್ರಮ ನಡೆಯಲಿದೆ.
ಎಡಪಾಲ ಜುಮಾ ಮಸೀದಿ ಆವರಣದಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೋಯಾಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಯು. ಶಾಫಿ ವಹಿಸಲಿದ್ದಾರೆ. ಕೊಡಗು ಜಿಲ್ಲಾ ನಾಇಬ್ ಖಾಝಿ ಹಾಗೂ ಸಮಸ್ತ ಮುಶಾವರ ಸದಸ್ಯರಾದ ಎಂ.ಎA. ಅಬ್ದುಲ್ಲ ಫೈಝಿ ಉದ್ಘಾಟಿಸಲಿದ್ದು, ಮಜ್ಲಿಸುನ್ನೂರ್ ಅಧ್ಯಾತ್ಮಿಕ ಕಾರ್ಯಕ್ರಮಕ್ಕೆ ಶೈಖುನಾ ನಿಝಾರ್ ಫೈಝಿ ನೇತೃತ್ವ ವಹಿಸಲಿದ್ದಾರೆ.
ಸಂಜೆ ೪ ಗಂಟೆಗೆ ಕೇರಳದ ಕಾಸರಗೋಡುವಿನ ವಾಗ್ಮಿ ಯು.ಕೆ. ಹನೀಫ್ ನಿಝಾಮಿ ಮುಖ್ಯ ಭಾಷಣ ನಡೆಸಲಿದ್ದಾರೆ. ವಿವಿಧ ಸಂಸ್ಥೆಗಳಿAದ ಬಿರುದು ಪಡೆದ ಬಿರುದುದಾರರನ್ನು ಕೂಡ ಇದೇ ಸಂದರ್ಭ ಸನ್ಮಾನಿಸಲಾಗುತ್ತದೆ ಎಂದು ಎಸ್ಕೆಎಸ್ಎಸ್ಎಫ್ ಎಡಪಾಲ ಶಾಖೆಯ ಪ್ರಧಾನ ಕಾರ್ಯದರ್ಶಿ ಜಲೀಲ್ ಕೆ.ಎಂ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.