ಕುಶಾಲನಗರ, ಏ. ೪: ಕುಶಾಲನಗರ ಗಡಿ ಭಾಗದ ವಾಹನ ತಪಾಸಣಾ ಕೇಂದ್ರಕ್ಕೆ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿಗಳು ಕೆಲಕಾಲ ಖುದ್ದಾಗಿ ವಾಹನಗಳ ತಪಾಸಣೆ ಕಾರ್ಯದಲ್ಲಿ ಪಾಲ್ಗೊಂಡರು. ಜಿಲ್ಲೆಗೆ ಪ್ರವೆಶಿಸುವ ಪ್ರತಿಯೊಂದು ವಾಹನಗಳ ಪರಿಶೀಲನೆ ನಡೆಸುವ ಮೂಲಕ ಸಾಗಾಟವಾಗುವ ದಾಖಲೆ ರಹಿತ ನಗದು, ಚುನಾವಣಾ ಸಾಮಗ್ರಿಗಳ ಪರಿಶೀಲನೆ ನಡೆಸಲಾಗುತ್ತಿದೆ.
ಕೊಡಗು ಜಿಲ್ಲಾ ಗಡಿ ಭಾಗಗಳ ವಾಹನ ತಪಾಸಣಾ ಕೇಂದ್ರಗಳಲ್ಲಿ ಇದುವರೆಗೆ ಸಮರ್ಪಕ ದಾಖಲೆಗಳು ಇಲ್ಲದ ಸುಮಾರು ೧೪ ಲಕ್ಷ ರೂಗಳ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಕುಶಾಲನಗರ ಶಿರಂಗಾಲ ಗಡಿ ಭಾಗಗಳ ವಾಹನ ತಪಾಸಣಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ತಹಶೀಲ್ದಾರ್ ಕಿರಣ್ ಗೌರಯ್ಯ, ಚುನಾವಣಾ ಅಧಿಕಾರಿಗಳಾದ ಆನಂದ್, ಎಸ್.ಕೆ. ಕಿರಣ್, ಪ್ರವೀಣ್, ಕುಶಾಲನಗರ ಪಟ್ಟಣ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್, ಠಾಣಾಧಿಕಾರಿ ಜಿ.ಎನ್. ಲೋಹಿತ್, ತಾಲೂಕು ಕಚೇರಿ ಅಧಿಕಾರಿಗಳಾದ ಸಂತೋಷ್, ಪೊಲೀಸ್ ಸಬ್ ಇನ್ಸ್ಪೆಕ್ಟರ್ ಬಿ.ಎಸ್. ಉಮಾ, ಕುಮಾರಿ, ಸನಂತ್ ಮತ್ತಿತರರು ಇದ್ದರು.