ಕುಶಾಲನಗರ, ಏ. ೩: ಕುಶಾಲನಗರ ಮತ್ತು ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಲಕ್ಷಾಂತರ ಹಣ ಜೇಬು ಕಳ್ಳತನ ಮಾಡಿರುವ ಪ್ರಕರಣಕ್ಕೆ ಸಂಬAಧಿಸಿದAತೆ ಕೊಡಗು ಜಿಲ್ಲಾ ಪೊಲೀಸರು ೧೩ ಮಂದಿ ಆರೋಪಿಗಳನ್ನು ಬಂಧಿಸಿದ್ದು ಲಕ್ಷಾಂತರ ಮೌಲ್ಯ ನಗದ,Ä ಎರಡು ಕಾರು ಮೊಬೈಲ್ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮಾರ್ಚ್ ೨೭ರಂದು ಕುಶಾಲನಗರದಲ್ಲಿ ಬಿಜೆಪಿ ಪಕ್ಷದ ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಕುಶಾಲನಗರದ ನಿವಾಸಿಗಳಾದ ಎಂ.ಎA. ಚರಣ್ (ರೂ.೩೨ ಸಾವಿರ), ಡಿ.ಎಚ್. ಚಂದ್ರಶೇಖರ್ (ರೂ.೫೦ ಸಾವಿರ), ಹೆಚ್. ಮಣಿ ಅವರ ಕಿಸೆಯಿಂದ (ರೂ.೫ ಸಾವಿರ), ಅಪರಿಚಿತ ವ್ಯಕ್ತಿಗಳು ಕಳ್ಳತನ ಮಾಡಿರುವ ಬಗ್ಗೆ ಕುಶಾಲನಗರದಲ್ಲಿ ದೂರು ದಾಖಲಾಗಿತ್ತು.

ಅದೇ ದಿನ ಮಡಿಕೇರಿ ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ರಂಗಸಮುದ್ರ ನಿವಾಸಿ ನಿತಿನ್ (ರೂ.೫೦ ಸಾವಿರ), ವೀರಾಜಪೇಟೆ ನಿವಾಸಿ ಯೋಗೇಶ್ (ರೂ.೩೨,೩೦೦À), ಮತ್ತು ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಅವರ ಜೇಬಿನಿಂದ (ರೂ.೧೭ ಸಾವಿರ) ಅಪರಿಚಿತ ವ್ಯಕ್ತಿಗಳು ಹಣ ಲಪಟಾಯಿಸಿ ಪರಾರಿಯಾಗಿದ್ದರು. ಪ್ರತ್ಯೇಕವಾಗಿ ಮೂರು ಪ್ರಕರಣಗಳನ್ನು ದಾಖಲಿಸಿದ ಪೊಲೀಸರು ರೂ.೧,೯೬,೩೦೦ ನಗದು ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ಕಾರ್ಯಾಚರಣೆ ತಂಡ ರಚಿಸಲಾಗಿತ್ತು.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ನಿರ್ದೇಶನದಂತೆ ಕುಶಾಲನಗರ ಡಿವೈಎಸ್‌ಪಿ ಆರ್.ವಿ. ಗಂಗಾಧರಪ್ಪ ಅವರ ನೇತೃತ್ವದಲ್ಲಿ ಕುಶಾಲನಗರ ಪಟ್ಟಣವೃತ್ತ ನಿರೀಕ್ಷಕ ಪ್ರಕಾಶ್, ಠಾಣಾಧಿಕಾರಿಗಳಾದ ಬಿ.ಎಸ್. ಉಮಾ ಮತ್ತು ಅಪರಾಧ ತನಿಖಾ ವಿಭಾಗದ ಸಿಬ್ಬಂದಿಗಳ ವಿಶೇಷ ತಂಡ ರಾಜ್ಯದ ವಿವಿಧ ಕಡೆಗಳಿಗೆ ಸಂಚರಿಸಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ.

ಕುಶಾಲನಗರದಲ್ಲಿ ಕಳ್ಳತನ ಮಾಡಿದ ಸಂದರ್ಭದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳು ಮತ್ತು ಸ್ಥಳೀಯ ಪತ್ರಕರ್ತರು ಸೆರೆಹಿಡಿದ ಹಲವು ವೀಡಿಯೋ ಕ್ಲಿಪ್‌ಗಳನ್ನು ಆಧರಿಸಿ ಪೊಲೀಸರ ತಂಡ ಭದ್ರಾವತಿಯ ಜಯಣ್ಣ, ಪುಟ್ಟರಾಜು, ನಾಗರಾಜ, ವೆಂಕಟೇಶ್, ರಾಮು, ಉಮೇಶ, ಜಯಣ್ಣ, ಭೋಜಪ್ಪ, ಮೆಹಬೂಬ್ ಸುಭಾನ್, ಬೆಂಗಳೂರಿನ ಹೆಬ್ಬಗೋಡಿಯ ಹರೀಶ್, ನೆಲಮಂಗಲದ ರಂಗಣ್ಣ, ಭದ್ರಾವತಿಯ ಗಿರೀಶ, ಬಾಲು ಅವರುಗಳನ್ನು ಬಂಧಿಸಿದೆ ಮತ್ತು ಅವರುಗಳಿಂದ ೧೨ ಮೊಬೈಲ್, ಎರಡು ಕಾರು, ರೂ.೨ ಲಕ್ಷದ ೬೫ ಸಾವಿರದ ೯೬೦ ನಗದು ವಶಪಡಿಸಿಕೊಳ್ಳಲಾಗಿದೆ.